ಉದ್ಯೋಗ ಭವಿಷ್ಯ ನಿಧಿ ಸಂಸ್ಥೆ EPFO ನೇಮಕಾತಿಯನ್ನ ಆರಂಭಿಸಿದ್ದು, ಯುವ ವೃತ್ತಿಪರರಿಗೆ ಹಾಗೆ ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಿದೆ. ಕೆಲಸಕ್ಕಾಗಿ ಎದುರು ನೋಡುತ್ತಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಈ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಬಯಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಬ್ಯಾಚುಲರ್ ಆಫ್ ಲಾ ಪದವಿಯನ್ನ (LLB) ಪಡೆದಿರಬೇಕು. ಇದಲ್ಲದೇ ಎಲ್‌ಎಲ್‌ಬಿ/ಬಿಎಎಲ್‌ಎಲ್‌ಬಿಯಲ್ಲಿ ಪದವಿಯನ್ನ ಪಡೆದವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಜೊತೆಗೆ ಸಂಶೋಧನಾ ಕ್ಷೇತ್ರಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಳಿಗೆ ಅವಕಾಶ ಇರುತ್ತದೆ. ಇನ್ನು ಈ ಹುದ್ದೆಗಾಗಿ ಗರಿಷ್ಠ ವಯಸ್ಸು 32 ವರ್ಷ ಇರಬೇಕು. ಇನ್ನು ಈ ಹುದ್ದೆಯಲ್ಲಿ ಆಯ್ಕೆಯಾದ್ರೆ 65,000 ನಿಶ್ಚಿತ ವೇತನವನ್ನ ಅವರು ಪಡೆಯುತ್ತಾರೆ.
EPFO 2025 ನೇಮಕಾತಿಯು ಗುತ್ತಿಗೆ ಆಧಾರದ ಮೇಲೆ ಇರುತ್ತದೆ. ಅಂದರೆ ಈ ನೇಮಕಾತಿಯ ಅವಧಿ 11 ತಿಂಗಳವರೆಗೆ ಇರುತ್ತದೆ. ಅಭ್ಯರ್ಥಿಗಳು EPFO ಕಚೇರಿಯಲ್ಲಿ ಸೇವೆಸಲ್ಲಿಸಬೇಕಾಗುತ್ತದೆ. ಹಾಗೆ ಆಯ್ೆಯಾದ ಅಭ್ಯರ್ಥಿಗಳನ್ನ ನವದೆಹಲಿಯಲ್ಲಿ ನೇಮಕ ಮಾಲಾಗುತ್ತದೆ.

ಅರ್ಹತೆ ಮಾನದಂಡ
EPFOದಲ್ಲ ಕೆಲಸ ಮಾಡಲು ಬಯಸುವವರು ಯುವ ಕಾನುನು ವೃತ್ತಿಪರರರಾಗಿರಬೇಕು. ಹಾಗೆ ಅವರ ವಯಸ್ಸಿನ ಮಿತ ಗರಿಷ್ಠ 32 ವರ್ಷ ಇರಬೇಕು. ಈ ಅರ್ಹತೆಗಳನ್ನ ಹೊಂದಿರುವ ಅಭ್ಯರ್ಥಿಗಳು ಈ ಕೆಲಸಕ್ಕಾಗಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಪದವಿಯನ್ನ ಪಡೆದಿರಬೇಕು. ಎಲ್‌ಎಲ್‌ಬಿ/ಬಿಎಎಲ್‌ಎಲ್‌ಬಿಯಲ್ಲಿ ಪದವಿಯನ್ನ ಪಡೆದವರು ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಬಹುದು. ಸಂಬಮಧಿತ ಕ್ಷೇತ್ರದಲ್ಲಿ ಸಂಶೋಧನಾ ಅನುಭವ ಅರ್ಹತೆ ಅನುಭವ, ಪ್ರಬಂಧಗಳು ಪ್ರಕಟವಾಗಿರಬೇಕು ಇಂತಹ ಅಭ್ಯರ್ಥಿಗಳಗೆ ಆದ್ಯತೆಯನ್ನ ನೀಡಲಾಗವುದು.
EPFO ನೇಮಕಾತಿ ಸಂಬಳ ಮತ್ತು ಸ್ಥಳ
ಈ ಕೆಲಸಕ್ಕೆ ಆಯ್ಕೆಯಾದ ಅಭ್ಯರ್ಥಿಗಳಗೆ 65,000ವರೆಗೆ ಸಂಬಳವನ್ನ ನೀಡಲಾಗುತ್ತದೆ. ಈ ನೇಮಕಾತಿಯು ಗುತ್ತಿಗೆ ಆಧಾರದ ಮೇಲೆ ನಡೆಯುತ್ತದೆ. ಹಾಗೆ ಇದು ಅಧಿಕಾರವಧಿಯ 11ಗಳವರೆಗೆ ಇರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳನ್ನ ನವದೆಹಲಿಯಲ್ಲಿರುವ ಇಪಿಎಫ್‌ಒ ಪ್ರಧಾನ ಕಚೇರಿಯಲ್ಲಿ ನೇಮಕ ಮಾಡಲಾಗುತ್ತದೆ.
EPFO ನೇಮಕಾತಿ 2025ಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಾಗಿ ಅರ್ಜಿ ಸಲ್ಲಿಸಲು ಬಯಸುವವರು ಅರ್ಜಿಯನ್ನ ಸರಿಯಾಗಿ ಭರ್ತಿ ಮಾಡಿ ಇಮೇಲ್ ಐಡಿ [email protected]ಗೆ ಕಳುಹಿಸಬಹುದು. ಅಥವಾ ರಾಷ್ಟ್ರೀಯ ವೃತ್ತಿ ಸೇವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಸಲು ಬೇಕಾಗುವಂತಹ ಸೂಕ್ತ ದಾಖಲೆಗಳನ್ನ ಲಗತ್ತಿಸಿ ಅರ್ಜಿ ಸಲ್ಲಿಸಬೇಕು. ನಿಮ್ಮ ದಾಖಲೆಗಳಲ್ಲಿ ದೋಷ ಕಂಡುಬಂದರೆ ನಿಮ್ಮ ದಾಖಲೆಗಳನ್ನ ತಿರಸ್ಕಾರ ಮಾಡಲಾಗುವುದು. ಹಾಗೆ ಅಂತಿಮ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು. ಹಾಗೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಪೋರ್ಟಲ್ ಅಥವಾ ಇಮೇಲ್ ಮೂಲಕ ನೀವು ಸಂರ್ಕಿಸಬಹುದು.
EPFO ನೇಮಕಾತಿ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿ ತಿಳಿಯಿರಿ
EPFO (ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ) ಸಾಂದರ್ಭಿಕವಾಗಿ LLB (ಬ್ಯಾಚುಲರ್ ಆಫ್ ಲಾಸ್) ಪದವೀಧರರಿಗೆ, ವಿಶೇಷವಾಗಿ ಕಾನೂನು ಪರಿಣತಿಯ ಅಗತ್ಯವಿರುವ ಪಾತ್ರಗಳಿಗೆ ನೇಮಕಾತಿ ಅವಕಾಶಗಳನ್ನು ನೀಡುತ್ತದೆ. ಈ ಹುದ್ದೆಗಳು ಸಾಮಾನ್ಯವಾಗಿ ಜಾರಿ ಅಧಿಕಾರಿಗಳು, ಕಾನೂನು ಸಲಹೆಗಾರರು ಅಥವಾ ಸಹಾಯಕ ಭವಿಷ್ಯ ನಿಧಿ ಆಯುಕ್ತರಂತಹ ಪಾತ್ರಗಳನ್ನು ಒಳಗೊಂಡಿರುತ್ತವೆ, ಅಲ್ಲಿ ಕಾನೂನು ಜ್ಞಾನ ಮತ್ತು ಕಾರ್ಮಿಕ ಕಾನೂನುಗಳ ತಿಳುವಳಿಕೆ, ಉದ್ಯೋಗ ನಿಯಮಗಳು ಮತ್ತು ಸಾಮಾಜಿಕ ಭದ್ರತಾ ಶಾಸನಗಳು ನಿರ್ಣಾಯಕವಾಗಿವೆ. ಉದ್ಯೋಗಿಗಳ ಭವಿಷ್ಯ ನಿಧಿ ಮತ್ತು ಇತರ ಸಂಬಂಧಿತ ಯೋಜನೆಗಳಿಗೆ ಸಂಬಂಧಿಸಿದ ಕಾನೂನು ನಿಬಂಧನೆಗಳನ್ನು ಅರ್ಥೈಸುವ ಮತ್ತು ಅನ್ವಯಿಸುವ ಸಾಮರ್ಥ್ಯದಿಂದಾಗಿ LLB ಪದವಿ ಹೊಂದಿರುವ ಅಭ್ಯರ್ಥಿಗಳನ್ನು ಅಂತಹ ಹುದ್ದೆಗಳಿಗೆ ಆದ್ಯತೆ ನೀಡಲಾಗುತ್ತದೆ.
LLB ಪದವೀಧರರ ನೇಮಕಾತಿ ಪ್ರಕ್ರಿಯೆಯು ಸಾಮಾನ್ಯವಾಗಿ ಕಾನೂನು ಜ್ಞಾನ, ತಾರ್ಕಿಕತೆ ಮತ್ತು ಸಾಮಾನ್ಯ ಅರಿವನ್ನು ನಿರ್ಣಯಿಸುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಪರೀಕ್ಷೆಯು ಕಾರ್ಮಿಕ ಕಾನೂನುಗಳು, ಸಾಂವಿಧಾನಿಕ ಕಾನೂನು, ಒಪ್ಪಂದಗಳು ಮತ್ತು ಇಪಿಎಫ್ ಕಾಯಿದೆಯ ನಿರ್ದಿಷ್ಟತೆಗಳ ಮೇಲಿನ ಪ್ರಶ್ನೆಗಳನ್ನು ಒಳಗೊಂಡಿರಬಹುದು. ಲಿಖಿತ ಪರೀಕ್ಷೆಗೆ ಅರ್ಹತೆ ಪಡೆದ ನಂತರ, ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಸಾಮಾನ್ಯವಾಗಿ ಸಂದರ್ಶನ ಅಥವಾ ಮುಂದಿನ ಆಯ್ಕೆ ಪ್ರಕ್ರಿಯೆಗೆ ಆಹ್ವಾನಿಸಲಾಗುತ್ತದೆ, ಅಲ್ಲಿ ಅವರ ಕಾನೂನು ಕುಶಾಗ್ರಮತಿ ಮತ್ತು ಸಂವಹನ ಕೌಶಲ್ಯಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಅರ್ಜಿದಾರರು ಇತ್ತೀಚಿನ ಕಾನೂನು ಬೆಳವಣಿಗೆಗಳು ಮತ್ತು ಇಪಿಎಫ್‌ಒ ಮತ್ತು ಸಂಬಂಧಿತ ಸಾಮಾಜಿಕ ಭದ್ರತಾ ಕಾನೂನುಗಳ ಕಾರ್ಯನಿರ್ವಹಣೆಯೊಂದಿಗೆ ಪರಿಚಿತರಾಗಿರುವುದು ಅತ್ಯಗತ್ಯ.
ಇಪಿಎಫ್‌ಒ ಎಲ್‌ಎಲ್‌ಬಿ ಪದವೀಧರರಿಗೆ ಸ್ಥಿರ ಮತ್ತು ಲಾಭದಾಯಕ ವೃತ್ತಿಯನ್ನು ನೀಡುತ್ತದೆ, ಇದು ಕಾರ್ಮಿಕ ಕಾನೂನುಗಳ ಅನುಸರಣೆಯನ್ನು ಖಚಿತಪಡಿಸುವುದು, ಸಂಸ್ಥೆಗೆ ಕಾನೂನು ಬೆಂಬಲವನ್ನು ಒದಗಿಸುವುದು ಮತ್ತು ಇಪಿಎಫ್ ಮತ್ತು ಪಿಂಚಣಿ ಯೋಜನೆಗಳಿಗೆ ಸಂಬಂಧಿಸಿದ ವಿವಾದಗಳನ್ನು ನಿರ್ವಹಿಸುವುದನ್ನು ಒಳಗೊಂಡಿರುತ್ತದೆ. ಯಶಸ್ವಿ ಅಭ್ಯರ್ಥಿಗಳಿಗೆ ಸಾಮಾನ್ಯವಾಗಿ ಉತ್ತಮ ವೇತನ ಶ್ರೇಣಿ, ಪ್ರಯೋಜನಗಳು ಮತ್ತು ವೃತ್ತಿ ಪ್ರಗತಿಗೆ ಅವಕಾಶಗಳನ್ನು ಒದಗಿಸಲಾಗುತ್ತದೆ. EPFO ನ ಭಾಗವಾಗಿರುವುದರಿಂದ ಉದ್ಯೋಗ ಭದ್ರತೆಯನ್ನು ಒದಗಿಸುವುದು ಮಾತ್ರವಲ್ಲದೆ LLB ಪದವೀಧರರಿಗೆ ಭಾರತದಲ್ಲಿ ಲಕ್ಷಾಂತರ ಉದ್ಯೋಗಿಗಳ ಆರ್ಥಿಕ ಯೋಗಕ್ಷೇಮಕ್ಕೆ ಕೊಡುಗೆ ನೀಡುವ ಸಾಮಾಜಿಕವಾಗಿ ಪ್ರಭಾವಶಾಲಿ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶವನ್ನು ನೀಡುತ್ತದೆ.
More From GoodReturns

Lunar Eclipse 2026: ವರ್ಷದ ಮೊದಲ ಚಂದ್ರಗ್ರಣ...ಯಾವ ರಾಶಿಯವರಿಗೆ ಶುಭ, ಯಾವ ರಾಶಿಯವರಿಗೆ ಎಚ್ಚರಿಕೆ? ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?

ಶೀಘ್ರ ನಿವೃತ್ತಿ ಮತ್ತು ಆರ್ಥಿಕ ಸ್ವಾತಂತ್ರ್ಯ...ಭಾರತೀಯ ಯುವಕರಿಗಾಗಿ FIRE ಚಳುವಳಿ ರಹಸ್ಯಗಳು!

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ



Click it and Unblock the Notifications