ಸಿಹಿಸುದ್ದಿ! ಇಪಿಎಫ್‌ನ ಚಂದಾದಾರರಿಗೆ.. ಪಿಂಚಣಿ ಪಾವತಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ; ಪ್ರಯೋಜನ ಏನು?

ಪಿಂಚಣಿ ಪಾವತಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಿದೆ. ಇದರಿಂದ ಹಲವು ಪ್ರಯೋಜನಗಳಿವೆ. ಹೌದು, ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆಯನ್ನು (CPPS) ಭಾರತದಾದ್ಯಂತ ಇಪಿಎಫ್‌ಒ ನ ಎಲ್ಲಾ ಪ್ರಾದೇಶಿಕ ಕಚೇರಿಗಳಲ್ಲಿ ಸಂಪೂರ್ಣವಾಗಿ ಅಳವಡಿಸಲಾಗಿದೆ. ಇದು ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರವಾಗಿದೆ. ಈ ಮೂಲಕ ಕೋಟಿಗಟ್ಟಲೆ ಇಪಿಎಫ್‌ನ ಚಂದಾದಾರರಿಗೆ ಸಿಹಿಸುದ್ದಿ ಕೊಟ್ಟಿದೆ. ಹಾಗಿದ್ರೆ, ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬತ್ಯಾದಿ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೌದು, ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರದಲ್ಲಿ, ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆಯನ್ನು (CPPS) ಭಾರತದಾದ್ಯಂತ ಇಪಿಎಫ್‌ಒ ನ ಎಲ್ಲಾ ಪ್ರಾದೇಶಿಕ ಕಚೇರಿಗಳಲ್ಲಿ ಸಂಪೂರ್ಣವಾಗಿ ಅಳವಡಿಸಲಾಗಿದೆ.ಈ ಯೋಜನೆಯು ಡಿಸೆಂಬರ್ 2024 ರೊಳಗೆ ಸಂಪೂರ್ಣವಾಗಿ ಪೂರ್ಣಗೊಂಡಿದೆ. ಈ ಸಿಪಿಪಿಎಸ್‌ ಯೋಜನೆಯು ಡಿಸೆಂಬರ್ 2024 ರ ವೇಳೆಗೆ, ಸುಮಾರು 1570 ಕೋಟಿ ರೂಪಾಯಿ ಮೌಲ್ಯದ ಪಿಂಚಣಿಯನ್ನು 68 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಅಂದರೆ ಇಪಿಎಸ್ ಪಿಂಚಣಿದಾರರಿಗೆ ನೀಡಲಾಗಿದೆ.

EPFO: ಬದಲಾದ ಪಿಂಚಣಿ ಪಾವತಿ ವ್ಯವಸ್ಥೆ; ಪ್ರಯೋಜನ ಏನು?

ಯಾವುದೇ ಬ್ಯಾಂಕ್‌ ನಿಂದ ನಿಮ್ಮ ಪಿಂಚಣಿಯನ್ನು ಹಿಂಪಡೆಯಬಹುದು

ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆ ಜಾರಿಯ ಬದಲಾವಣೆಯಿಂದ ಪಿಂಚಣಿದಾರರು ದೇಶದ ಯಾವುದೇ ಬ್ಯಾಂಕ್, ಯಾವುದೇ ಶಾಖೆಯಿಂದ ಪಿಂಚಣಿ ಹಿಂಪಡೆಯಲು ಯಾವುದೇ ಸಮಸ್ಯೆ ಎದುರಿಸುವುದಿಲ್ಲ ಎಂದು ಕೇಂದ್ರ ಸಚಿವ ಡಾ.ಮನ್ಸುಖ್ ಮಾಂಡವಿಯಾ ಅವರು ಮಾಹಿತಿ ತಿಳಿಸಿದ್ದಾರೆ.

ಸರ್ಕಾರದ ಮಹತ್ವದ ಈ ನಿರ್ಧಾರವು ಈಗ ಇಪಿಎಫ್‌ಒ ಪಿಂಚಣಿದಾರರು ತಮ್ಮ ಪಿಂಚಣಿಯನ್ನು ದೇಶದ ಯಾವುದೇ ಪ್ರಾದೇಶಿಕ ಇಪಿಎಫ್‌ಒ ಕಚೇರಿಯಿಂದ ಹಿಂಪಡೆಯಬಹುದು. ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆಯನ್ನು ದೇಶದ ಎಲ್ಲಾ 122 ಪ್ರಾದೇಶಿಕ ಇಪಿಎಫ್‌ಒ ಕಚೇರಿಗಳಲ್ಲಿ ಅಳವಡಿಕೆ ಮಾಡಲಾಗಿದೆ.

EPFO ನ ಸುಧಾರಿತ ವೈಶಿಷ್ಟ್ಯಗಳ ಪ್ರಯೋಜನಗಳನ್ನು ಒದಗಿಸುವ ಪ್ರಯತ್ನ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆಯು ಇಪಿಎಫ್‌ಒ ಸೇವೆಗಳನ್ನು ಮುಂದುವರಿಸಲು ಮತ್ತು ನಮ್ಮ ಪಿಂಚಣಿದಾರರಿಗೆ ಸೌಲಭ್ಯಗಳ ಜೊತೆಗೆ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಕಾರ್ಮಿಕ ಸಚಿವ ಡಾ.ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.

ಈ CPPS ನ ಮೊದಲ ಪ್ರಾಯೋಗಿಕ ಯೋಜನೆಯು 2024ರ ಅಕ್ಟೋಬರ್ ತಿಂಗಳಲ್ಲಿ ಜಮ್ಮು, ಕರ್ನಾಲ್ ಮತ್ತು ಶ್ರೀನಗರ ಪ್ರಾದೇಶಿಕ ಕಚೇರಿಗಳಲ್ಲಿ ಮೊದಲಿಗೆ ಯಶಸ್ವಿಯಾಗಿತು.ಇದರ ಅಡಿಯಲ್ಲಿ 49,000 ಇಪಿಎಸ್ ಪಿಂಚಣಿದಾರರಿಗೆ ಒಟ್ಟು 11 ಕೋಟಿ ರೂಪಾಯಿ ಪಿಂಚಣಿ ವಿತರಿಸಲಾಯಿತು. ಎರಡನೇ ಪ್ರಾಯೋಗಿಕ ಕಾರ್ಯಕ್ರಮವನ್ನು ದೇಶದ 24 ಪ್ರಾದೇಶಿಕ ಕಚೇರಿಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಈ 24 ಸ್ಥಳೀಯ ಕಚೇರಿಗಳ ಮೂಲಕ 9.3 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ 213 ಕೋಟಿ ರೂಪಾಯಿ ಮೌಲ್ಯದ ಪಿಂಚಣಿಯನ್ನು ವಿತರಣೆ ಮಾಡಲಾಗಿದೆ.

ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌

ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ಕೇಂದ್ರ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ. ಅವರು ತಮ್ಮ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಕಾರ ಭೌತಿಕ ಪರಿಶೀಲನೆಯ ಅವಶ್ಯಕತೆ ಇಲ್ಲವಾಗಲಿದ್ದು, ಪಿಂಚಣಿ ವಿತರಣೆಯನ್ನು ಅತ್ಯಂತ ಸುಲಭ ರೀತಿಯಲ್ಲಿ ವಿತರಿಸಬಹುದಾಗಿದೆ. ಈ ರೋಲ್‌ಔಟ್‌ನೊಂದಿಗೆ, ನಾವು ಪಿಂಚಣಿ ಸೇವೆ ವಿತರಣೆಯಲ್ಲಿ ಹೊಸ ಮಾನದಂಡವನ್ನು ತಲುಪುತ್ತೇವೆ ಎಂದು ಹೇಳಿದ್ದಾರೆ.

ಕೇಂದ್ರದ ಈ ನಿರ್ಧಾರದಿಂದ ಸುಮಾರು 78 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ. ಇಪಿಎಫ್‌ಒ ಆಧುನೀಕರಣದಲ್ಲಿ ಕೇಂದ್ರೀಕೃತ ಪಾವತಿ ವ್ಯವಸ್ಥೆಯು ಅತ್ಯಂತ ಮಹತ್ವದ್ದಾಗಿದೆ.ಹೀಗಾಗಿ ಉದ್ಯೋಗಿಗಳ ಹಲವು ವರ್ಷಗಳ ಬೇಡಿಕೆ ಈಡೇರಲಿದೆ ಎಂದು ಕೇಂದ್ರ ಸಚಿವ ಮಾಂಡವಿಯಾ ಹೇಳಿದರು.

ಕೇಂದ್ರೀಕೃತ ಪಾವತಿ ವ್ಯವಸ್ಥೆ ಜಾರಿಯಾದರೆ ಪಿಂಚಣಿದಾರರು ಶಾಖೆಗೆ ಭೇಟಿ ನೀಡುವ ಅಗತ್ಯವಿಲ್ಲ.ನಿಮಗೆಪಿಂಚಣಿ ಬಿಡುಗಡೆಯಾದ ತಕ್ಷಣ ನಿಮ್ಮ ಖಾತೆಗೆ ನೇರವಾಗಿ ಹಣ ಜಮಾ ಮಾಡುತ್ತಾರೆ.ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆ ಶೀಘ್ರ ಜಾರಿಗೆ ಬರಲಿದ್ದು,ಇದರಿಂದ 78 ಲಕ್ಷ ಪಿಂಚಣಿದಾರರಿಗೆ ಬಿಗ್‌ ರಿಲೀಫ್‌ ಸಿಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+