ಪಿಎಫ್ ಖಾತೆದಾರರಿಗೆ ಸಿಹಿಸುದ್ದಿ! ಎಲ್ಲಾ PF ಸೇವೆಗಳು ಉಚಿತ.. 3ನೇ ವ್ಯಕ್ತಿಯ ವಂಚನೆಗೆ ಬ್ರೇಕ್..! ಹೌದು, ನೌಕರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ 7 ಕೋಟಿಗೂ ಹೆಚ್ಚು ಸದಸ್ಯರಿಗೆ ತಮ್ಮ ಭವಿಷ್ಯ ನಿಧಿ ಖಾತೆಗಳಿಗೆ ಸಂಬಂಧಿಸಿದ ಸೇವೆಗಳಿಗಾಗಿ ಮೂರನೇ ವ್ಯಕ್ತಿಯ ಏಜೆಂಟ್‌ಗಳು ಅಥವಾ ಕಂಪನಿಗಳನ್ನು ಬಳಸದಂತೆ ಎಚ್ಚರಿಕೆಯನ್ನು ನೀಡಿದೆ.
ಹೌದು,ಕೆವೈಸಿ ಹೂಸ ನವೀಕರಣಗಳು, ಹಕ್ಕು ಸಲ್ಲಿಕೆಗಳು ಮತ್ತು ನಿಧಿ ಹಿಂಪಡೆಯುವಿಕೆಗಳನ್ನು ಒಳಗೊಂಡಿರುವ ಈ ಸೇವೆಗಳು ಅದರ ಆನ್‌ಲೈನ್ ಪೋರ್ಟಲ್ ಮತ್ತು ಉಮಂಗ್ (UMANG) ಅಪ್ಲಿಕೇಶನ್ ಮೂಲಕ ಉಚಿತವಾಗಿ ಲಭ್ಯವಿದೆ ಎಂದು ಸಂಸ್ಥೆ ಮಾಹಿತಿಯನ್ನು ತಿಳಿಸಿದೆ.

ಇಪಿಎಫ್ ಸದಸ್ಯರು ಪ್ರವೇಶಸಾಧ್ಯತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಇಪಿಎಫ್‌ಒ ತನ್ನ ಸದಸ್ಯರಿಗೆ ಪ್ರಕ್ರಿಯೆಗಳನ್ನು ಸರಳಗೊಳಿಸುವ ಗುರಿಯನ್ನು ಹೊಂದಿರುವ ಹಲವಾರು ಸುಧಾರಣೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪ್ರಮುಖ ಬದಲಾವಣೆಯಾದ ವರ್ಗಾವಣೆ ಕ್ಲೈಮ್ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಈ ಪ್ರಕ್ರಿಯೆಗೆ ಉದ್ಯೋಗದಾತರ ಸಂಸ್ಥೆಯ ಅನುಮೋದನೆಯ ಅಗತ್ಯವಿಲ್ಲ.
ತ್ವರಿತವಾಗಿ ಆನ್‌ಲೈನ್ ಕ್ಲೈಮ್ ಇತ್ಯರ್ಥಗಳನ್ನು ಸರಳಗೊಳಿಸಲು ಮತ್ತು ನಿರ್ವಹಣೆಯ ದರಗಳನ್ನು ಕಡಿಮೆ ಮಾಡಲು ಚೆಕ್ ಲೀಫ್ ಇಮೇಜ್ ಅಥವಾ ದೃಢೀಕರಿಸಿದ ಬ್ಯಾಂಕ್ ಪಾಸ್‌ಬುಕ್ ಅನ್ನು ಅಪ್‌ಲೋಡ್ ಮಾಡುವ ಅಗತ್ಯವನ್ನು ಜಾರಿಗೆ ತಂದಿದೆ.
ಇನ್ನೂ ಕೆಳದ ಏಪ್ರಿಲ್ ತಿಂಗಳ ನಂತರ ಯುನಿವರ್ಸಲ್ ಅಕೌಂಟ್ ನಂಬರ್ (UAN) ನೊಂದಿಗೆ ಬ್ಯಾಂಕ್ ಖಾತೆ ವಿವರಗಳನ್ನು ಜೋಡಿಸಲು ಉದ್ಯೋಗದಾತರ ಅನುಮೋದನೆಯನ್ನು ತೆಗೆದುಹಾಕಲಾಗಿದೆ. ಇದು KYC ಪ್ರಕ್ರಿಯೆಗಳು ಮತಷ್ಟು ಸುಗಮವಾಗುತ್ತದೆ.
ಅನಾರೋಗ್ಯ,ವಸತಿ, ಮದುವೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಮುಂಗಡ ಸೇವೆಗಳಿಗಾಗಿ ಇಪಿಎಫ್‌ಒ ತನ್ನ ಆಟೋ ಕ್ಲೈಮ್ ಇತ್ಯರ್ಥ ಸೌಲಭ್ಯ ಮಿತಿಯನ್ನು ರೂ. 1 ಲಕ್ಷಕ್ಕೆ ವಿಸ್ತರಿಸಿದೆ. ಈ ವಿಸ್ತರಣೆಯು 2024-25ರ ಆರ್ಥಿಕ ವರ್ಷದಲ್ಲಿ 2.34 ಕೋಟಿ ಕ್ಲೈಮ್‌ಗಳನ್ನು ಸ್ವಯಂಚಾಲಿತ ರೀತಿಯಲ್ಲಿ ಇತ್ಯರ್ಥಪಡಿಸಲು ಕಾರಣವಾಗಿದೆ. ಇಂತಹ ಕ್ರಮಗಳು ಇಪಿಎಫ್‌ಒ ಸೇವೆಗಳನ್ನು ಹೆಚ್ಚು ಪಾರದರ್ಶಕ ಮತ್ತು ಬಳಕೆದಾರ ಸ್ನೇಹಿಯನ್ನಾಗಿ ಮಾಡುವ ಪ್ರಯತ್ನವಿದೆ.
ಇಪಿಎಫ್‌ಓ ಸಂಸ್ಥೆಯು CPGRAMS ಮತ್ತು EPFiGMS ಪೋರ್ಟಲ್‌ಗಳ ಮೂಲಕ ಬಲಿಷ್ಠವಾದ ಕುಂದುಕೊರತೆ ಮೇಲ್ವಿಚಾರಣೆ ಮತ್ತು ಪರಿಹಾರ ವ್ಯವಸ್ಥೆಯನ್ನು ನಿರ್ವಹಣೆ ಮಾಡುತ್ತದೆ.FY25 ರಲ್ಲಿ EPFiGMS ಮೂಲಕ 16 ಲಕ್ಷಕ್ಕೂ ಹೆಚ್ಚು ಮತ್ತು CPGRAMS ಮೂಲಕ 1.7 ಲಕ್ಷಕ್ಕೂ ಹೆಚ್ಚು ಕುಂದುಕೊರತೆಗಳನ್ನು ಸ್ವೀಕರಿಸಲಾಗಿದ ಎಂದು ವರದಿಗಳು ಸಹ ಆಗಿವೆ.
ಇಪಿಎಫ್‌ಒ ಬರುವಂತಹ ಕುಂದುಕೊರತೆಗಳನ್ನು ಶೇ.98 ರಷ್ಟು ಪರಿಹರಿಸಲಾಗಿದೆ.ಇಪಿಎಫ್‌ಒ ಒಂದು ಕುಂದುಕೊರತೆ ಮೇಲ್ವಿಚಾರಣೆ ಮತ್ತು ಪರಿಹಾರ ವ್ಯವಸ್ಥೆಯನ್ನು ಹೊಂದಿದೆ, ಇದರಲ್ಲಿ ಸದಸ್ಯರ ಕುಂದುಕೊರತೆಗಳನ್ನು CPGRAMS ಅಥವಾ EPFiGMS ಪೋರ್ಟಲ್‌ಗಳಲ್ಲಿ ನೋಂದಾಯಿಸಲಾಗುತ್ತದೆ ಮತ್ತು ಸಮಯಕ್ಕೆ ಅನುಗುಣವಾಗಿ ಅವುಗಳ ಪರಿಹಾರದವರೆಗೆ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಮಾಹಿತಿಯನ್ನು ತಿಳಿಸಲಾಗಿದೆ.
ಇಪಿಎಫ್‌ಒ ನೀಡಿರುವ ಎಚ್ಚರಿಕೆಯ ಸಂದೇಶಗಳು
ಮೂರನೇ ವ್ಯಕ್ತಿಯ ಮಧ್ಯೆ ಪ್ರವೇಶಿಸುವಂತಿಲ್ಲ: ಇಪಿಎಫ್‌ಒ ಸದಸ್ಯರು ತಮ್ಮ ಸೇವೆಗಳಿಗಾಗಿ ಯಾವುದೇ ಮೂರನೇ ವ್ಯಕ್ತಿಯ ಕಂಪನಿಗಳು, ಏಜೆಂಟ್‌ಗಳು ಅಥವಾ ಫಿನ್‌ಟೆಕ್ ಸಂಸ್ಥೆಗಳನ್ನು ಸಂಪರ್ಕಿಸಬಾರದು. ಇವು ಸದಸ್ಯರ ವೈಯಕ್ತಿಕ ಮತ್ತು ಆರ್ಥಿಕ ಮಾಹಿತಿಯನ್ನು ದುರ್ಬಳಕೆಯಾಗುವಣತಹ ಸಾಧ್ಯತೆಗಳು ಇರುತ್ತೇವೆ.
ಸೈಬರ್ ಸೇವೆಗಳ ಮೂಲಕ ಅಧಿಕ ಹಣ ವಸೂಲಿ : ಇಪಿಎಫ್‌ಒ ಉಚಿತವಾಗಿ ನೀಡುವಂತಹ ಸೇವೆಗಳನ್ನು ಹಲವಾರು ಸೈಬರ್ ಕೆಫೆಗಳು ಅಕ್ರಮವಾಗಿ ಹಣ ವಿಧಿಸುತ್ತಿರುವುದು ಸಹ ಪರಿಗಣೆನೆಗೆ ತಗೆದುಕೊಂಡಿದೆ.
EPFO ಸಹಾಯವಾಣಿಗಳ ಮಾಹಿತಿ ನೀಡಿ: ಇಪಿಎಫ್‌ಒ ಸದಸ್ಯರು ಯಾವುದೇ ಸಹಾಯಕ್ಕಾಗಿಅಧಿಕೃತ ವೆಬ್‌ಸೈಟ್ https://www.epfindia.gov.in/ ಅಥವಾ ಸ್ಥಳೀಯ ಕಚೇರಿಗಳಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಗಳನ್ನು ಸಂಪರ್ಕಿಸಬಹುದು. EPFO ಸಹಾಯವಾಣಿಗಳ ಮಾಹಿತಿ ಸಹ ವೆಬ್‌ಸೈಟ್‌ನಲ್ಲಿ ನಿಮ್ಮಗೆ ಸಿಗುತ್ತದೆ.
ಈ ಕ್ರಮಗಳನ್ನು ಅನುಸರಿಸಿ
- ಇಪಿಎಫ್‌ಒ ಸೇವೆಗಾಗಿ ನೀವು ಯಾವಗಲ್ಲೂ ಅಧಿಕೃತ ವೆಬ್‌ಸೈಟ್ ಅಥವಾ EPFO ಮೊಬೈಲ್ ಆಪ್ ಅಥವಾ ಉಮಂಗ್ ಆಪ್ ಬಳಸಿರಿ.
- ನಿಮ್ಮ ಒಟಿಪಿ ಅಥವಾ ಖಾಸಗಿ ವಿವರಗಳನ್ನು ಯಾವುದೇ ಗೊತ್ತಿಲ್ಲದ ವ್ಯಕ್ತಿಗಳಿಗೆ ನೀಡಬೇಡಿ.
- ಈ ಕುರಿತು ನಿಮ್ಮಗೆ ಯಾವುದು ಅನುಮಾನಗಳು ಇದ್ದರೂ ಇಪಿಎಫ್‌ಒ ಸಹಾಯವಾಣಿಗೆ ಕರೆಮಾಡಿ ಅಥವಾ ತಮ್ಮ ಅಧಿಕೃತ ಕಚೇರಿ ಭೇಟಿಮಾಡಿ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications