ಲಾಕ್ ಡೌನ್ 10 ದಿನ ಅವಧಿಯಲ್ಲಿ 279.65 ಕೋಟಿ ಇಪಿಎಫ್ ಒ ಖಾತೆದಾರರಿಗೆ

ಲಾಕ್ ಡೌನ್ ಅವಧಿಯಲ್ಲಿ 1.37 ಲಕ್ಷ ಪ್ರಾವಿಡೆಂಟ್ ಫಂಡ್ ಕ್ಲೇಮು ಇತ್ಯರ್ಥ ಮಾಡಿದೆ. ಇದರ ಮೌಲ್ಯ 280 ಕೋಟಿ ರುಪಾಯಿ ಎಂದು EPFO ಶುಕ್ರವಾರ ಮಾಹಿತಿ ನೀಡಿದೆ. COVID- 19 ವಿರುದ್ಧ ಹೋರಾಡಲು ಲಾಕ್ ಡೌನ್ ಘೋಷಣೆ ಮಾಡಿರುವಾಗ ಅಗತ್ಯ ಇರುವವರು ಪಿಎಫ್ ವಿಥ್ ಡ್ರಾ ಮಾಡಲು ನಿಯಮಕ್ಕೆ ತಿದ್ದುಪಡಿ ತರಲಾಗಿತ್ತು.

ಈಗಾಗಲೇ ಹಣ ವರ್ಗಾವಣೆ ಶುರುವಾಗಿದೆ. ಕಳೆದ ಹತ್ತು ದಿನದಲ್ಲಿ ಇಪಿಎಫ್ ಒ 279.65 ಕೋಟಿ ರುಪಾಯಿ ಹಣ ವರ್ಗಾವಣೆ ಮಾಡಿದೆ ಎಂದು ತಿಳಿಸಲಾಗಿದೆ. ಕೆವೈಸಿ ಪೂರ್ತಿ ಆಗಿರುವ ಗ್ರಾಹಕರ ಕ್ಲೇಮುಗಳನ್ನು 72 ಗಂಟೆಯೊಳಗೆ ಪ್ರೊಸೆಸ್ ಮಾಡಲಾಗುತ್ತಿದೆ. ಇತರ ಉದ್ದೇಶಗಳಿಗೆ ಅರ್ಜಿ ಹಾಕಿಕೊಂಡಿದ್ದ ಖಾತೆದಾರರಿಗೆ ಎಷ್ಟು ಬೇಗ ಹಣ ವರ್ಗಾವಣೆ ಮಾಡಲು ಸಾಧ್ಯವೋ ಅಷ್ಟು ಬೇಗ ಮಾಡಲಾಗುತ್ತಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ಮಾಹಿತಿ ನೀಡಿದೆ.

ಲಾಕ್ ಡೌನ್ 10 ದಿನ ಅವಧಿಯಲ್ಲಿ 279.65 ಕೋಟಿ ಇಪಿಎಫ್ ಒ ಖಾತೆದಾರರಿಗೆ

ಕೊರೊನಾ ಕಾರಣಕ್ಕೆ ಪಿಎಫ್ ವಿಥ್ ಡ್ರಾ ಮಾಡುವವರು ಅದನ್ನು ಮರುಪಾವತಿ ಮಾಡುವ ಅಗತ್ಯ ಇಲ್ಲ. ಇನ್ನು ಆಯಾ ವ್ಯಕ್ತಿಯ ಮೂರು ತಿಂಗಳ ಮೂಲವೇತನ+ ತುಟ್ಟಿಭತ್ಯೆ ಅಥವಾ ಶೇಕಡಾ 75ರಷ್ಟು ಮೊತ್ತ ಇವೆರಡರಲ್ಲಿ ಯಾವುದೋ ಕಡಿಮೆಯೋ ಅಷ್ಟು ಹಣವನ್ನು ವಿಥ್ ಡ್ರಾ ಮಾಡಬಹುದು. ಅದಕ್ಕಿಂತ ಕಡಿಮೆ ಮೊತ್ತವನ್ನೂ ಡ್ರಾ ಮಾಡಬಹುದು. ಇದಕ್ಕೆ ಯಾವುದೇ ತೆರಿಗೆ ಹಾಕುವುದಿಲ್ಲ.

ಕೆವೈಸಿ ಆಗಿರುವಂಥ ಇಪಿಎಫ್ ಖಾತೆದಾರರು ಆನ್ ಲೈನ್ ನಲ್ಲಿ ಕ್ಲೇಮುಗಳಿಗೆ ಅರ್ಜಿ ಸಲ್ಲಿಸಬಹುದು. ಆನ್ ಲೈನ್ ನಲ್ಲಿ ಕೊರೊನಾ ಉದ್ದೇಶಕ್ಕೆ ವಿಥ್ ಡ್ರಾ ಮಾಡುತ್ತಿರುವ ಆಯ್ಕೆಯನ್ನು ಮಾಡಿಕೊಳ್ಳಬೇಕು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+