For Quick Alerts
ALLOW NOTIFICATIONS  
For Daily Alerts

ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದ್ದವರ ಹಣ ಕಾಲು ಭಾಗ ಕರಗಿಯೇ ಹೋಯಿತು..

|

ಈಕ್ವಿಟಿ ಆಧಾರಿತವಾದ ಮ್ಯೂಚುವಲ್ ಫಂಡ್ ಗಳ ಮೇಲೆ ಹೂಡಿಕೆ ಮಾಡಿದ್ದವರು ಕಂಗಾಲಾಗಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಹೂಡಿಕೆಯ 25% ಹಣವು ಕರಗುವುದನ್ನು ದಿಕ್ಕೇ ತೋಚದಂತಾಗಿದ್ದಾರೆ. ಕೊರೊನಾ ಮಾಡುತ್ತಿರುವ ಅನಾಹುತಕ್ಕೆ ಆರ್ಥಿಕ ಕುಸಿತದ ಭೀತಿ ಎದುರಾಗಿದ್ದು, ಬಹುತೇಕ ಮಾರ್ಕೆಟ್ ಗಳು ಪ್ರಪಾತಕ್ಕೆ ಕುಸಿಯುತ್ತಿವೆ.

 

ಕೊರೊನಾ ವೈರಾಣುವಿನ ದಾಳಿಯಿಂದ ಮ್ಯೂಚುವಲ್ ಫಂಡ್ ಗಳು ಕೂಡ ಹೊರತಾಗಿಲ್ಲ. ಷೇರು ಮಾರ್ಕೆಟ್ ನಲ್ಲಿ ಏರಿಳಿತದ ಕಾರಣಕ್ಕೆ ಭವಿಷ್ಯದಲ್ಲಿ ಸ್ಮಾಲ್ ಮತ್ತು ಮಿಡ್ ಕ್ಯಾಪ್ ಈಕ್ವಿಟಿ ಯೋಜನೆಗಳು ಇನ್ನಷ್ಟು ಕುಸಿತ ಕಾಣಬಹುದು ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲ್ಯಾನ್ ಮೂಲಕ ಹಣ ಹೂಡಿಕೆ ಮಾಡುತ್ತಾ ಬರುತ್ತಿದ್ದವರಿಗಂತೂ ಇದು ಅತಿ ದೊಡ್ಡ ಶಾಕ್ ಆಗಿದೆ.

ಯಾವುದರಲ್ಲಿ ಎಷ್ಟು ಪರ್ಸೆಂಟ್ ನಷ್ಟ?

ಯಾವುದರಲ್ಲಿ ಎಷ್ಟು ಪರ್ಸೆಂಟ್ ನಷ್ಟ?

ಯಾವ ಪ್ರಮಾಣದಲ್ಲಿ ನಷ್ಟವಾಗಿದೆ ಎಂಬ ಬಗ್ಗೆ ಮಾರ್ನಿಂಗ್ ಸ್ಟಾರ್ ಇಂಡಿಯಾದಿಂದ ದತ್ತಾಂಶವನ್ನು ಒಟ್ಟು ಮಾಡಿದ ವರದಿಯೊಂದು ಇದೆ. ಎಲ್ಲ ಈಕ್ವಿಟಿ ಯೋಜನೆಯ ವಿಭಾಗಗಳೂ ಇದರಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್ (ಇಎಲ್ ಎಸ್ ಎಸ್), ಮಿಡ್- ಕ್ಯಾಪ್, ಲಾರ್ಜ್ ಅಂಡ್ ಮಿಡ್ ಕ್ಯಾಪ್, ಲಾರ್ಜ್ ಕ್ಯಾಪ್, ಸ್ಮಾಲ್ ಕ್ಯಾಪ್, ಮಿಡ್ ಕ್ಯಾಪ್ ಮತ್ತು ಮಲ್ಟಿ ಕ್ಯಾಪ್ ಗಳು ನಕಾರಾತ್ಮಕ ರಿಟರ್ನ್ಸ್ ತಂದಿವೆ. ಫೆಬ್ರವರಿ 19, 2020ರಿಂದ ಮಾರ್ಚ್ 18, 2020ರ ಮಧ್ಯೆ 25-26 ಪರ್ಸೆಂಟ್ ನೆಗೆಟಿವ್ ರಿಟರ್ನ್ಸ್ ಆಗಿದೆ. ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್ (ಇಎಲ್ ಎಸ್ ಎಸ್) 26.47 ಪರ್ಸೆಂಟ್, ಮಿಡ್- ಕ್ಯಾಪ್, ಲಾರ್ಜ್ ಅಂಡ್ ಮಿಡ್ ಕ್ಯಾಪ್ 26.63 ಪರ್ಸೆಂಟ್, ಲಾರ್ಜ್ ಕ್ಯಾಪ್ 26.58 ಪರ್ಸೆಂಟ್, ಸ್ಮಾಲ್ ಕ್ಯಾಪ್ 26.32 ಪರ್ಸೆಂಟ್, ಮಿಡ್ ಕ್ಯಾಪ್ 24.84 ಪರ್ಸೆಂಟ್ ಮತ್ತು ಮಲ್ಟಿ ಕ್ಯಾಪ್ 26.45 ಪರ್ಸೆಂಟ್ ನಷ್ಟ ಕಂಡಿವೆ. ಆಯಾ ಬೆಂಚ್ ಮಾರ್ಕ್ ಇಂಡೆಕ್ಸ್ ಗಳಿಗಿಂತ ಕೆಳಗೆ ಈ ಫಂಡ್ಸ್ ಗಳು ಬಿದ್ದಿವೆ.

ಒಂದು ತಿಂಗಳಲ್ಲಿ ಸೆನ್ಸೆಕ್ಸ್ ಬಿದ್ದಿದ್ದೆಷ್ಟು?
 

ಒಂದು ತಿಂಗಳಲ್ಲಿ ಸೆನ್ಸೆಕ್ಸ್ ಬಿದ್ದಿದ್ದೆಷ್ಟು?

ಫೆಬ್ರವರಿ 19, 2020ರಿಂದ ಮಾರ್ಚ್ 18, 2020ರ ಮಧ್ಯೆ ಸೆನ್ಸೆಕ್ಸ್ ಸೂಚ್ಯಂಕವು 30 ಪರ್ಸೆಂಟ್ ಗೂ ಹೆಚ್ಚು ಕುಸಿದಿದೆ. 41 ಸಾವಿರ ಪಾಯಿಂಟ್ ಮಟ್ಟದಿಂದ 29 ಸಾವಿರಕ್ಕೆ ಬಂದಿದೆ. ಕೊರೊನಾ ವೈರಾಣು ಹಬ್ಬುತ್ತಿರುವುದು, ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿನ ಇಳಿಕೆ, ಯೆಸ್ ಬ್ಯಾಂಕ್ ಬಿಕ್ಕಟ್ಟು ಏನೆಲ್ಲ ಕೆಟ್ಟ ಸುದ್ದಿ ಮೇಲಿಂದ ಮೇಲೆ ಮಾರ್ಕೆಟ್ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ತಜ್ಞರು ಹೇಳುವ ಪ್ರಕಾರ, ಹಲವು ವರ್ಷಗಳ ಹಿಂದೆ ಇಂಥ ಸನ್ನಿವೇಶಾ ನೋಡಿದ್ದೇವೆ. ಕೊರೊನಾ ವೈರಾಣು ಹಬ್ಬುತ್ತಲೇ ಇರುವುದರಿಂದ ಇದು ಎಲ್ಲಿ ನಿಲ್ಲುತ್ತದೆ ಎಂಬ ಸ್ಪಷ್ಟತೆ ಸಿಗುತ್ತಿಲ್ಲ. ಈ ಹಿಂದೆಯೂ ಈ ರೀತಿ ಮಾರ್ಕೆಟ್ ಬಿದ್ದಿರುವುದನ್ನು ಗಮನಿಸಿರುವುದರಿಂದ ದೀರ್ಘಾವಧಿಯಲ್ಲಿ ಇದು ಚೇತರಿಕೆ ಕಾಣಿಸಿಕೊಳ್ಳುತ್ತದೆ. ಹೂಡಿಕೆದಾರರು ಸಿಸ್ತಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲ್ಯಾನ್ ನಲ್ಲೇ ಹೂಡಿಕೆ ಮುಂದುವರಿಸಬೇಕು. ಯಾರಾದರೂ ಈಕ್ವಿಟಿಯಲ್ಲಿ ಅಪಾಯ ಜಾಸ್ತಿ ಅಂದುಕೊಂಡು ಅದಕ್ಕಾಗಿ ಮೀಸಲಿಟ್ಟ ಹಣ ಕಡಿಮೆ ಇದ್ದಲ್ಲಿ ಖರೀದಿಗೆ ಇದು ಸೂಕ್ತ ಸಮಯ ಎನ್ನುತ್ತಾರೆ.

ಅವಕಾಶ ಎಂಬಂತೆ ನೋಡಬೇಕು

ಅವಕಾಶ ಎಂಬಂತೆ ನೋಡಬೇಕು

ಏಳರಿಂದ ಹತ್ತು ವರ್ಷಗಳ ದೀರ್ಘಾವಧಿಯನ್ನು ಗಮನದಲ್ಲಿ ಇಟ್ಟುಕೊಂಡು, ಹೂಡಿಕೆ ಮಾಡಬೇಕು ಎಂಬುದು ಈಗ ಕೇಳಿಬರುತ್ತಿರುವ ಸಲಹೆ. ಮಾರುಕಟ್ಟೆ ಕುಸಿದಿರುವುದರಿಂದ ಹೂಡಿಕೆಗೆ ಆಕರ್ಷಕವಾಗಿದೆ. ಹೂಡಿಕೆದಾರರು ಸ್ಮಾಲ್ ಮತ್ತು ಮಿಡ್ ಕ್ಯಾಪ್ ಫಂಡ್ ಗಳ ಮೇಲೆ ಹೂಡಿಕೆ ಮಾಡಬೇಕು. ಲಾರ್ಜ್ ಕ್ಯಾಪ್ ಮತ್ತು ಬ್ಲ್ಯೂಚಿಪ್ ಫಂಡ್ಸ್ ಗಳ ಎನ್ ಎವಿ (ನೆಟ್ ಅಸೆಟ್ ವ್ಯಾಲ್ಯೂ) ಕಡಿಮೆ ಆಗಿರುವುದರಿಂದ ಬಹಳ ಬೇಗ ಚೇತರಿಸಿಕೊಳ್ಳುತ್ತದೆ. ಗುಣಮಟ್ಟದ ವ್ಯವಹಾರದ ಮಾದರಿ ಅನುಸರಿಸುವವರಿಗೆ ಈಗಿನ ಸವಾಲು ತಾತ್ಕಾಲಿಕ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ದೊಡ್ಡ ಮಟ್ಟದಲ್ಲಿ ಕುಸಿತ ಕಂಡಾಗ ಹೂಡಿಕೆ ಅವಕಾಶವಾಗಿ ನೋಡಬೇಕು ಎಂಬ ಸಲಹೆ ಎಲ್ಲೆಡೆಯಿಂದ ಕೇಳಿಬರುತ್ತಿದೆ.

ಭವಿಷ್ಯದಲ್ಲಿ ಉತ್ತಮ ಲಾಭ

ಭವಿಷ್ಯದಲ್ಲಿ ಉತ್ತಮ ಲಾಭ

ಹೂಡಿಕೆದಾರರ ಹಣದ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಕೆಲವರು ಸಲಹೆ ನೀಡುತ್ತಿದ್ದು, ಉತ್ತಮ ನಗದೀಕರಣದ ಅಲ್ಪಾವಧಿಯ ಡೆಟ್ ಫಂಡ್ಸ್ (ಒಂದು ವರ್ಷದ ಅವಧಿಯದ್ದು) ಅತ್ಯುತ್ತಮ ಆಯ್ಕೆ ಎನ್ನುತ್ತಾರೆ. ಹೆಚ್ಚಿನ ಅಪಾಯ ತೆಗೆದುಕೊಳ್ಳಲು ಸಿದ್ಧರಿರುವವರು ದೀರ್ಘಾವಧಿ ಸಮಯಕ್ಕೆ ಮೀಸಲಿರಿಸಬಹುದು. ಈಗಿನ ಮಾರುಕಟ್ಟೆ ಇಳಿಕೆಯು ಆತಂಕಕ್ಕೆ ಕಾರಣ ಅನ್ನೋದು ಒಂದು ಕಡೆಯಾದರೆ, ಸಂಪತ್ತು ಸೃಷ್ಟಿಗೆ ಒಂದು ಅವಕಾಶ ಕೂಡ ಹೌದು. ಎರಡನ್ನು ಅಳೆದು- ತೂಗಿ ನಿರ್ಧಾರವನ್ನು ತೆಗೆದುಕೊಂಡರೆ ಭವಿಷ್ಯದಲ್ಲಿ ಉತ್ತಮ ಲಾಭ ಕಾಣಬಹುದು.

English summary

Equity Mutual Funds 25 Percent Negative Returns

Equity based mutual funds given 25 percent negative returns within one month of time. Here is the details.
Story first published: Sunday, March 22, 2020, 16:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X