For Quick Alerts
ALLOW NOTIFICATIONS  
For Daily Alerts

ಈ ಹಳ್ಳಿಯಲ್ಲಿ ಇರುವ ಪ್ರತಿಯೊಬ್ಬರ ಖಾತೆಯಲ್ಲೂ 'ಒಂದು ಕೋಟಿ ರುಪಾಯಿ'

|

ಹಳ್ಳಿಗಳು ಅಂದರೆ ಏನೇನೂ ವ್ಯವಸ್ಥೆ ಇಲ್ಲದ, ಬಡತನವೇ ಹಾಸು- ಹೊದ್ದಂತಿರುತ್ತದೆ ಎಂಬ ಕಲ್ಪನೆ ಕಣ್ಣೆದುರು ಬರಬಹುದು. ಆದರೆ ಚೀನಾದ ಈ ಹಳ್ಳಿ ಬಹಳ ಡಿಫರೆಂಟ್. ಈ ಹಳ್ಳಿಯಲ್ಲಿ ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ ಇದೆ. ಅಷ್ಟೇ ಅಲ್ಲ, ಎಲ್ಲ ಖಾತೆಗಳಲ್ಲೂ ತಲಾ ಒಂದು ಮಿಲಿಯನ್ ಯುವಾನ್ (ಒಂದು ಕೋಟಿ ರುಪಾಯಿಗೂ ಹೆಚ್ಚು) ಇದೆ.

 

ಮತ್ತೆ ಜಗತ್ತಿನ ನಂಬರ್ 1 ಶ್ರೀಮಂತನಾದ ಬಿಲ್‌ಗೇಟ್ಸ್‌ಮತ್ತೆ ಜಗತ್ತಿನ ನಂಬರ್ 1 ಶ್ರೀಮಂತನಾದ ಬಿಲ್‌ಗೇಟ್ಸ್‌

ಆ ಹಳ್ಳಿಯ ಹೆಸರು ಹುಯಾಕ್ಸಿ. ಇನ್ನೂರಾ ನಲವತ್ತು ಎಕರೆ ವ್ಯಾಪ್ತಿಯಲ್ಲಿ ಈ ಹಳ್ಳಿ ಇದೆ. ಜತೆಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಬೇಕು ಅಂದರೆ ವಾಯು ಯಾನವೇ ಆಗಬೇಕು. ಹೌದು, ನೀವು ಸರಿಯಾಗಿಯೇ ಓದುತ್ತಿದ್ದೀರಿ. ಈ ಹಳ್ಳಿಯಿಂದ ಹೊರಗೆ ಹೋಗುವುದಕ್ಕೆ ಹೆಲಿಕಾಪ್ಟರ್ ಟ್ಯಾಕ್ಸಿ ದೊರೆಯುತ್ತದೆ.

 
ಈ ಹಳ್ಳಿಯಲ್ಲಿ ಇರುವ ಪ್ರತಿಯೊಬ್ಬರ ಖಾತೆಯಲ್ಲೂ 'ಒಂದು ಕೋಟಿ ರುಪಾಯಿ'

ಹುಯಾಕ್ಸಿಯಲ್ಲಿ ಎರಡು ಸಾವಿರದಷ್ಟು ಜನಸಂಖ್ಯೆ ಇದೆ. ಈ ಹಳ್ಳಿ ಚೀನಾದಲ್ಲೇ ಅತ್ಯಂತ ಶ್ರೀಮಂತವಾದದ್ದು. ಈ ಹಳ್ಳಿ ಜಗತ್ತಿನಲ್ಲೇ ವಿಶಿಷ್ಟವಾದದ್ದು. ಆರೋಗ್ಯ ಸೇವೆ, ಶಿಕ್ಷಣ, ಮನೆ ಎಲ್ಲವೂ ಉಚಿತ. ಆದರೆ ಎಲ್ಲರಿಗೂ ಇಲ್ಲ. ಇಲ್ಲಿನ ಸ್ಥಳೀಯರಿಗೆ ಮಾತ್ರ. ಮಾಧ್ಯಮಗಳ ವರದಿಯ ಪ್ರಕಾರ, ಚೆನೀಸ್ ಕಮ್ಯುನಿಸ್ಟ್ ಪಕ್ಷದಿಂದ ಆಯ್ಕೆಯಾಗಿದ್ದ ಈ ಹಳ್ಳಿಯ ಮಾಜಿ ಕಾರ್ಯದರ್ಶಿ ವು ರೆನಾಬೋ ಅವರೇ ಈ ಬದಲಾವಣೆಯ ಹರಿಕಾರರು.

ಈ ಹಳ್ಳಿಯಲ್ಲಿ ಇರುವ ಪ್ರತಿಯೊಬ್ಬರ ಖಾತೆಯಲ್ಲೂ 'ಒಂದು ಕೋಟಿ ರುಪಾಯಿ'

ದುಡ್ಡಿನ ವಿಚಾರದಲ್ಲಿ 'ದೊಡ್ಡವರು' ಹೇಳಿದ 8 ಪಾಠಗಳುದುಡ್ಡಿನ ವಿಚಾರದಲ್ಲಿ 'ದೊಡ್ಡವರು' ಹೇಳಿದ 8 ಪಾಠಗಳು

ಅಂದ ಹಾಗೆ ಈ ಹಳ್ಳಿಯಲ್ಲಿ ಇರುವವರ ಆಸ್ತಿಯನ್ನು ನಾಯಕರೇ ನೋಡಿಕೊಳ್ಳುತ್ತಾರೆ. ಇಲ್ಲಿಂದ ಆಚೆ ಹೋಗಲು ನಿರ್ಧರಿಸುವವರು ಆ ಆಸ್ತಿಯನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ.

English summary

Every Person In This Village Has 1 Million Yuan In Bank Account

Huaxi, richest village in China. Every person in this village has 1 million yuan in bank account.
Story first published: Wednesday, November 20, 2019, 11:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X