ಕಳೆದ ವರ್ಷ ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ಸಂಸ್ಥೆಗಳು ಉದ್ಯೋಗ ಕಡಿತ ಮಾಡುವ ಪ್ರಕ್ರಿಯೆಯನ್ನು ಆರಂಭ ಮಾಡಿದೆ. ಅದಾದ ಬಳಿಕ ಇಂದಿಗೂ ಕೂಡಾ ಇದಕ್ಕೆ ಒಂದು ಅಂತ್ಯ ಎಂಬುವುದಾಗಿಲ್ಲ. ಪ್ರತಿ ದಿನ ಒಂದಲ್ಲ ಒಂದು ಸಂಸ್ಥೆ ಉದ್ಯೋಗ ಕಡಿತವನ್ನು ಮಾಡುತ್ತಾ ಬರುತ್ತಿದೆ. ಆದರೆ ಈ ಉದ್ಯೋಗ ಕಳೆದುಕೊಂಡವರ ಗತಿಯೇನು?
ಹಲವಾರು ಟೆಕ್ ದೈತ್ಯ ಸಂಸ್ಥೆಗಳು ಸಾಮೂಹಿಕವಾಗಿ ಉದ್ಯೋಗ ಕಡಿತ ಮಾಡಿದೆ. ಮೆಟಾ ಹಲವಾರು ಸುತ್ತಿನಲ್ಲಿ ವಜಾ ಘೋಷಣೆ ಮಾಡಿದೆ. ಇದರಲ್ಲಿ ಒಟ್ಟಾಗಿ 20,000 ಉದ್ಯೋಗಿಗಳು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಇತ್ತೀಚೆಗೆ, ಕಂಪನಿಯ ಮಾಜಿ ಉದ್ಯೋಗಿಯೊಬ್ಬರು ಲಿಂಕ್ಡ್‌ಇನ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಉದ್ಯೋಗ ಕಳೆದುಕೊಂಡು ಇಷ್ಟು ದಿನವಾದರೂ ಕೂಡಾ ಹೊಸ ಉದ್ಯೋಗದ ಹುಡುಕಾಟದಲ್ಲಿಯೇ ಇದ್ದೇನೆ.

ಮಾಜಿ ಉದ್ಯೋಗಿ ಬರೆದುಕೊಂಡಿರುವುದೇನು?
"ಮೆಟಾ ಸಂಸ್ಥೆಯಲ್ಲಿ ಉದ್ಯೋಗ ಕಡಿತಕ್ಕೆ ಬಲಿಯಾಗಿ 201 ದಿನಗಳು ಈಗಾಗಲೇ ಕಳೆದಿದೆ. ಆದರೆ ಪ್ರತಿದಿನವೂ ನಾವು ಹೊಸ ಉದ್ಯೋಗವನ್ನು ಹುಡುಕಾಡಲು ಕಷ್ಟಪಡುತ್ತಿದ್ದೇನೆ. ಆರುವರೆ ತಿಂಗಳಾದರೂ ನನಗೆ ಬೇರೆ ಉದ್ಯೋಗ ದೊರಕದು ಎಂದು ನಾವು ಎಂದಿಗೂ ಊಹಿಸಿಲ್ಲ. ಆದರೆ ನಾನು ಆ ಸ್ಥಿತಿಯಲ್ಲಿದ್ದೇನೆ," ಎಂದು ಮೆಟಾ ಮಾಜಿ ಉದ್ಯೋಗಿ ಹೇಳಿದ್ದಾರೆ.
"ನನ್ನ ರೀತಿಯಲ್ಲೇ ಹಲವಾರು ಉದ್ಯೋಗಿಗಳು ಇನ್ನೂ ಕೂಡಾ ಹೊಸ ಉದ್ಯೋಗ ಹುಡುಕುವುದರಲ್ಲೇ ತೊಡಗಿದ್ದಾರೆ. ಈ ಬಗ್ಗೆ ನನಗೆ ಮಾಹಿತಿಯಿದೆ. ನಾವೆಲ್ಲರೂ ಶೀಘ್ರವೇ ಹೊಸ ಉದ್ಯೋಗವನ್ನು ಪಡೆದುಕೊಳ್ಳುತ್ತೇವೆ ಎಂದು ನಾನು ಭಾವಿಸುತ್ತೇನೆ," ಎಂದು ಫೇಸ್‌ಬುಕ್‌ನಲ್ಲಿ ಟೆಕ್ನಿಕಲ್ ರಿಕ್ರೂಟರ್ ಆಗಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ ಸುಸಾನ್ ದತ್ತರ್ ಹೇಳಿದರು.
"ಉದ್ಯೋಗವಿಲ್ಲದೆ 6+ ತಿಂಗಳುಗಳ ಕಾಲ ನಿಮ್ಮ ಜೀವನವನ್ನು ದೂಡಿಕೊಂಡು ಹೋಗುವುದು ಅತೀ ಕಠಿಣವಾದ ಕಾರ್ಯವಾಗಿದೆ. ಇನ್ನೂ 6 ತಿಂಗಳುಗಳ ಕಾಲ ಹೀಗೆಯೇ ಉದ್ಯೋಗ ಹುಡುಕಾಟದಲ್ಲಿಯೇ ಇರಬೇಕಾದೀತು ಎಂಬುವುದನ್ನು ನೆನಪಿಸಿಕೊಂಡಾಗ ಭಯವಾಗುತ್ತದೆ," ಎಂದು ತಿಳಿಸಿದರು.
"ನನ್ನ 20+ ವರ್ಷಗಳ ಟೆಕ್ನಿಕಲ್ ರಿಕ್ರೂಟರ್ ಉದ್ಯೋಗದ ಅನುಭವವು ನನ್ನ ಮುಂದಿನ ಉದ್ಯೋಗಕ್ಕೆ ನನ್ನನ್ನು ಕರೆದೊಯ್ಯುತ್ತದೆ ಎಂದು ನಾನು ಭರವಸೆ ಹೊಂದಿದ್ದೇನೆ. ನಾನು ಉದ್ಯೋಗ ಮಾಡುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಹಾಗೆಯೇ ಒಂದು ಪ್ರೋಜೆಕ್ಟ್‌ನಲ್ಲಿ ಸಹೋದ್ಯೋಗಿಗಳೊಂದಿಗೆ ಜೊತೆಯಾಗಿ ಕಾರ್ಯನಿರ್ವಹಣೆ ಮಾಡುವುದನ್ನು ಕೂಡಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ," ಎಂದು ಸುಸಾನ್ ದತ್ತರ್ ಬರೆದುಕೊಂಡಿದ್ದಾರೆ.
ಈ ನಡುವೆ ಮೆಟಾ ತನ್ನ ಮೆಟಾವರ್ಸ್-ಆಧಾರಿತ ರಿಯಾಲಿಟಿ ಲ್ಯಾಬ್ಸ್ ವಿಭಾಗದ ಘಟಕದಲ್ಲಿ ಅಕ್ಟೋಬರ್ 4 ರಂದು ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸುತ್ತಿದೆ. ಕಸ್ಟಮ್ ಸಿಲಿಕಾನ್ ಅನ್ನು ರಚಿಸುವುದರ ಮೇಲೆ ಕೇಂದ್ರೀಕರಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿ ಮಾಡಿದೆ.


Click it and Unblock the Notifications