ಇನ್ನೆರಡು, ಮೂರು ದಿನದಲ್ಲಿ ಕೇಂದ್ರದಿಂದ ಹಣಕಾಸಿನ ಪ್ಯಾಕೇಜ್ ನಿರೀಕ್ಷೆ : ನಿತಿನ್ ಗಡ್ಕರಿ

ಲಾಕ್‌ಡೌನ್‌ದಿಂದಾಗಿ ಆಗಿರುವ ನಷ್ಟದ ಭಾರ ಸ್ವಲ್ಪ ಮಟ್ಟಿಗೆ ತಗ್ಗಿಸಲು ಇನ್ನೆರಡು ಮೂರು ದಿನದಲ್ಲಿ ಕೇಂದ್ರ ಸರ್ಕಾರ ಆರ್ಥಿಕ ಪ್ಯಾಕೇಜ್ ಬಿಡುಗಡೆ ಮಾಡುವುದನ್ನು ಎದುರು ನೋಡುತ್ತಿರುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ 'ಇಎಂಐ' ಮುಂದೂಡಿಕೆ ಹೊರತಾಗಿಯೂ ಉದ್ಯಮಗಳ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದಿರುವ ನಿತಿನ್ ಗಡ್ಕರಿ, ಸರ್ಕಾರ ಉದ್ಯಮಗಳ ಜೊತೆಗಿದೆ. ಆದರೆ ಸರ್ಕಾರಕ್ಕೂ ಮಿತಿಗಳಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂಬುದಾಗಿ ಕೈಗಾರಿಕೆ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿರುವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ಇನ್ನೆರಡು, ಮೂರು ದಿನದಲ್ಲಿ ಕೇಂದ್ರದಿಂದ ಹಣಕಾಸಿನ ಪ್ಯಾಕೇಜ್ ನಿರೀಕ್ಷೆ

"ಎಲ್ಲರನ್ನೂ ಹೇಗೆ ರಕ್ಷಿಸಬಹುದು ಎಂಬುದರ ಕುರಿತು ನಾವು ನಮ್ಮ ಮಟ್ಟದಲ್ಲಿ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಿಸುತ್ತಿದ್ದೇವೆ," ಎಂಬುದಾಗಿ ಗಡ್ಕರಿ ವಿವರಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಅಮೆರಿಕಾ ಮತ್ತು ಜಪಾನ್‌ ದೇಶಗಳು ಬೃಹತ್‌ ಪ್ಯಾಕೇಜ್‌ಗಳನ್ನು ಘೋಷಿಸಿವೆ. ಆದರೆ ಅವುಗಳ ಆರ್ಥಿಕತೆಯೂ ದೊಡ್ಡದು ಎಂಬುದಾಗಿ ಅವರು ಹೇಳಿದ್ದಾರೆ.

ತೆಲಂಗಾಣದ ಉದ್ಯಮಿಗಳ ಜೊತೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತುಕತೆ ನಡೆಸಿದ ಅವರು, ತಾನು ಕೇಂದ್ರ ಹಣಕಾಸು ಸಚಿವರಿಗೆ ಒಂದಷ್ಟು ಸಲಹೆಗಳನ್ನು ನೀಡಿರುವುದಾಗಿ ಹೇಳಿದ್ದಾರೆ. ಆದಾಯ ತೆರಿಗೆ ಮತ್ತು ಜಿಎಸ್‌ಟಿ ಮರುಪಾವತಿಗಳನ್ನು ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಸಲಹೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಲಾಕ್‌ಡೌನ್‌ದಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದ ಹಿನ್ನೆಲೆಯಲ್ಲಿ ಮಾರ್ಚ್‌ 27 ರಂದು ರಿಸರ್ವ್‌ ಬ್ಯಾಂಕ್‌ ಕೆಲವು ಕ್ರಮಗಳನ್ನು ತೆಗೆದುಕೊಂಡಿತ್ತು. ಮೂರು ತಿಂಗಳ ಇಎಂಐ ಮುಂದೂಡಿಕೆಯೂ ಇದರಲ್ಲಿ ಸೇರಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+