For Quick Alerts
ALLOW NOTIFICATIONS  
For Daily Alerts

ಬೇಕರಿಗಳಲ್ಲಿ ಸಿಹಿ ತಿನಿಸುಗಳಿಗೆ ಎಕ್ಸ್‌ಪೆರಿ ಡೇಟ್ ನಮೂದಿಸುವುದು ಕಡ್ಡಾಯ: ಜೂನ್‌ 1ರಿಂದ ಹೊಸ ನಿಯಮ ಜಾರಿ

|

ಬೇಕರಿಗಳಲ್ಲಿ ಬಣ್ಣ ಬಣ್ಣದ ಸಿಹಿ ತಿನಿಸುಗಳು ಬಾಯಲ್ಲಿ ನೀರೂರಿಸುತ್ತದೆ. ಸಿಹಿ ಪ್ರಿಯರಿಗಂತೂ ಬೇಕರಿಯಲ್ಲಿ ಬಹುತೇಕ ಎಲ್ಲವೂ ಇಷ್ಟ. ಆದರೆ ನೀವು ಯಾವುದಾದರೂ ಬೇಕರಿಯಲ್ಲಿ ಸಿಹಿ ತಿನಿಸುಗಳ ಮೇಲೆ ತಯಾರಿಕೆ ದಿನಾಂಕ ಮತ್ತು ಎಕ್ಸ್‌ಪೆರಿ ಡೇಟ್ ನಮೂದಿಸಿರೋದು ನೋಡಿದ್ದೀರಾ?

ಬಹುತೇಕ ಸಾಧ್ಯತೆಯು ಇಲ್ಲ ಬಿಡಿ, ಆದರೆ ಇನ್ನು ಮುಂದೆ ಸಿಹಿತಿನಿಸುಗಳ ಅಂಗಡಿಗಳು, ಬೇಕರಿಗಳಲ್ಲಿ ಪ್ಯಾಕಿಂಗ್‌ ಮಾಡದೇ ಟ್ರೇಗಳಲ್ಲಿ ಹಾಗೂ ಕಂಟೇನರ್‌ಗಳಲ್ಲಿ ಇಡಲಾಗುವ ಸಿಹಿ ತಿನಿಸುಗಳ ಎಕ್ಸ್‌ಪೆರಿ ಡೇಟ್ ಹಾಗೂ ಹಾಗೂ ತಯಾರಿಕೆ ದಿನಾಂಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕಾಗಿದೆ.

ಬೇಕರಿಗಳಲ್ಲಿನ ತಿನಿಸುಗಳಿಗೆ ಎಕ್ಸ್‌ಪೆರಿ ಡೇಟ್ ನಮೂದಿಸುವುದು ಕಡ್ಡಾಯ

ಬೇಕರಿ ಹಾಗೂ ಅಂಗಡಿಗಳಲ್ಲಿ ತೆರೆದಿಟ್ಟಿರುವ ತಿನಿಸುಗಳಿಗೆ ತಯಾರಿಕಾ ದಿನಾಂಕ ನಮೂದಿಸುವ ನಿಯಮ ಅನ್ವಯಿಸುತ್ತಿರಲಿಲ್ಲ. ಈ ತಿನಿಸುಗಳು ಹಾಳಾಗಿದ್ದರೂ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿತ್ತು. ಆದರೆ ಈ ಕುರಿತು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ (FSSAI) ಆದೇಶಿಸಿದ್ದು, ಹೊಸ ನಿಯಮವು ಜೂನ್‌ನಿಂದ ಅನ್ವಯವಾಗಲಿದೆ.

ತೆರೆದಿಟ್ಟ ಸಿಹಿ ತಿನಿಸನ್ನು ತಯಾರಿಸಿದ ದಿನಾಂಕ ಹಾಗೂ ಯಾವ ದಿನಾಂಕದೊಳಗೆ ಆ ತಿನಿಸು ಸೇವಿಸಲು ಯೋಗ್ಯ ಎಂಬುದನ್ನು ಕಡ್ಡಾಯವಾಗಿ ಇನ್ನು ಪ್ರದರ್ಶಿಸಲೇಬೇಕು. ಸಾರ್ವಜನಿಕರ ಹಿತಕ್ಕಾಗಿ ಈ ನಿಯಮ ಜಾರಿ ಮಾಡಲಾಗಿದೆ. ಇದುವರೆಗೂ ಪ್ಯಾಕೇಜ್ ಮಾಡಿದ ಸಿಹಿತಿಂಡಿಗಳಿಗೆ ಮಾತ್ರ ಉತ್ಪಾದನೆ ಮತ್ತು ಎಕ್ಸ್‌ಪೆರಿ ಡೇಟ್ ನಮುದಿಸಲಾಗುತ್ತಿತ್ತು.

English summary

Expire Date Must Be Written On The Open Dessert

Soon, the federal government has determined to implement new guidelines from June 1, expire date must be written on the open dessert
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X