ರಿಲಯನ್ಸ್ ಜಿಯೋದಲ್ಲಿ 43,574 ಕೋಟಿ ಹೂಡಿಕೆಗೆ ಫೇಸ್‌ಬುಕ್ ನಿರ್ಧಾರ

ಜಗತ್ತಿನ ಪ್ರಸಿದ್ಧ ಸಾಮಾಜಿಕ ಜಾಲತಾಣ ಸಂಸ್ಥೆ ಫೇಸ್‌ಬುಕ್‌ ರಿಲಯನ್ಸ್ ಜಿಯೋದಲ್ಲಿ 9.99 ಪರ್ಸೆಂಟ್ ಷೇರುಗಳನ್ನು ಖರೀದಿಸಲು ನಿರ್ಧರಿಸಿದೆ.

ಫೇಸ್‌ಬುಕ್‌ 5.7 ಬಿಲಿಯನ್ ಡಾಲರ್‌ ಭಾರತದ ರುಪಾಯಿಗಳಲ್ಲಿ ಸುಮಾರು 43,574 ಕೋಟಿ ರುಪಾಯಿ ಹೂಡಿಕೆ ಮಾಡುವ ಮೂಲಕ 9.9 ಪರ್ಸೆಂಟ್‌ರಷ್ಟು ಪಾಲುದಾರಿಕೆಯನ್ನು ತನ್ನದಾಗಿಸಿಕೊಂಡಿದೆ. ರಿಲಯನ್ಸ್ ಈ ವಹಿವಾಟಿನ ಕುರಿತು ಮುಂಬೈ ಷೇರುಪೇಟೆಗೆ(ಬಿಎಸ್‌ಇ) ಮಾಹಿತಿ ನೀಡಿದೆ.

ರಿಲಯನ್ಸ್ ಜಿಯೋದಲ್ಲಿ 43,574 ಕೋಟಿ ಹೂಡಿಕೆಗೆ ಫೇಸ್‌ಬುಕ್ ನಿರ್ಧಾರ

ಸುಮಾರು 1.3 ಬಿಲಿಯನ್‌ ಬಳಕೆದಾರರನ್ನು ಹೊಂದಿರುವ ರಿಲಯನ್ಸ್ ಜಿಯೋ ಪ್ರಸ್ತುತ ಒಪ್ಪಂದದಿಂದ ಫೇಸ್‌ಬುಕ್ ಮತ್ತು ಜಿಯೊ ಎರಡೂ ಸಂಸ್ಥೆಗಳಿಗೆ ಲಾಭದಾಯವಾಗಲಿದೆ. ಫೇಸ್‌ಬುಕ್ ಮತ್ತಷ್ಟು ಭಾರತದ ಗ್ರಾಹಕರನ್ನು ತಲುಪಲು ಸಾಧ್ಯವಾಗಲಿದೆ. ಜೊತೆಗೆ ಚೀನಾದ ನಂತರ ಭಾರತ ಅತಿ ದೊಡ್ಡ ಇಂಟರ್‌ನೆಟ್ ಮಾರುಕಟ್ಟೆ ಹೊಂದಿದೆ.

ಫೇಸ್‌ಬುಕ್ ಭಾರತದಲ್ಲಿ 40 ಕೋಟಿಗೂ ಹೆಚ್ಚು ವಾಟ್ಸ್‌ಆ್ಯಪ್ ಬಳಕೆದಾರರನ್ನು ಹೊಂದಿದ್ದು, ಪಾವತಿ ಸೇವೆಗಳಿಗೆ ಚಾಲನೆ ನೀಡಲು ಯೋಜನೆ ರೂಪಿಸಿದೆ. ಉತ್ತಮ ಟೆಲಿಕಾಂ ಪಾಲುದಾರರನ್ನು ಹೊಂದುವ ಮೂಲಕ ಫೇಸ್‌ಬುಕ್ ಜನ ಸಮೂಹಕ್ಕೆ ತಲುಪುವುದು ಸುಲಭವಾಗಲಿದೆ.

ಜಿಯೊ ಡಿಜಿಟಲ್ ಕಂಪನಿ ಮಾಡುವ ರಿಲಯನ್ಸ್ ಮಹಾತ್ವಾಕಾಂಕ್ಷೆಗೆ ಈ ಒಪ್ಪಂದವು ಪೂರಕವಾಗಲಿದೆ. 2021ರ ಮಾರ್ಚ್‌ ವೇಳೆಗೆ ಶೂನ್ಯ ಸಾಲದ ಕಂಪನಿಯಾಗಿ ಹೊರಹೊಮ್ಮಲು ರಿಲಯನ್ಸ್ ಪ್ರಯತ್ನಿಸುತ್ತಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+