ಕರ್ನಾಟಕದಲ್ಲಿ ಗ್ಯಾರಂಟಿಗಳ ಅನಾವರಣವಾದ ನಂತರ ಕೇಂದ್ರ ಕೂಡ ಒಂದಿಷ್ಟು ಯೋಜನೆಗಳನ್ನ ಹೊರಡಿಸಿತ್ತು. ಆದ್ರೆ ಇದೇ ಯೋಜನೆಗಳನ್ನ ಜಾಲಾವಾಗಿಸಿಕೊಂಡಿರುವ ಕೆಲವರು ಯೋಜನೆಗಳ ಕುರಿತು ಒಂದಿಷ್ಟು ಸುಳ್ಳು ಸುದ್ದಿಗಳನ್ನ ಹರಿಬಿಡ್ತಿದ್ದಾರೆ. ಇಂತದ್ದೇ ಈಗ ಮತ್ತೋಂದು ಪೋಸ್ಟ್‌ವೊಂದು ಎಲ್ಲೆಡೆ ವೈರಲ್ ಆಗ್ತಿದೆ.
ಈ ಮಧ್ಯೆ ನಿರುದ್ಯೋಗ ಭತ್ಯೆ ಯೋಜನೆ 2024-25ರ ಅಡಿಯಲ್ಲಿ 10 ನೇ ತರಗತಿ ಉತ್ತೀರ್ಣರಾದ ನಿರುದ್ಯೋಗಿ ಯುವಕರಿಗೆ ಕೇಂದ್ರ ಸರ್ಕಾರ ಪ್ರತಿ ತಿಂಗಳು 3,500 ರೂಪಾಯಿಗಳ ನಿರುದ್ಯೋಗ ಭತ್ಯೆಯನ್ನು ನೀಡುತ್ತಿದೆ ಎನ್ನಲಾಗ್ತಿದೆ. ಇನ್ನು ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು,ಇದರ ಸತ್ಯಾಸತ್ಯತೆ ಇಲ್ಲಿದೆ.

ಈಗಂತೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಸರ್ವೇಸಾಮಾನ್ಯವಾಗಿಬಿಟ್ಟಿದೆ. ಸರ್ಕಾರ ಒಂದು ಯೋಜನೆಯನ್ನ ಹೊರಡಿಸಿದ ತಣ ಆನ್‌ಲೈನ್‌ಗಳ ಮೂಲಕ ಹಣ ಮಾಡುವ ಸಲುವಾಗಿ ಬೇರೆ ಬೇರೆ ಹೊಸ ಯೋಜೆಗಳು ಜಾರಿಯಾಗಿವೆ. ಕೊನೆಯ ದಿನಾಂಕ ಕೂಡ ನಿಗಧಿಯಾಗಿದೆ ಎಂದು ಸುಳ್ಳು ಮಾಹಿತಿಗಳನ್ನ ಹರಿಬಿಡ್ತಿದ್ದಾರೆ. ಈಗ ಕೇಂದ್ರ ಸರ್ಕಾರದ ಕೆಲವು ಯೋಜನೆಗಳ ಬಗ್ಗೆ ಕೂಡ ಸುಳ್ಳು ಸುದ್ದಿಗಳು ಹರಿದಾಡ್ತಿವೆ.
ಅಲ್ಲದೆ ಇತ್ತೀಚಿನ ದಿನಗಳಲ್ಲಿ ಇದು ಬಹುದೊಡ್ಡ ಸ್ಕ್ಯಾಮ್ ಆಗಿ ಮಾರ್ಪಟ್ಟಿದೆ. ಆನ್ ಮೂಲಕ, ಎಸ್‌ಎಮ್‌ಎಸ್‌ಗಳ ಮೂಲಕ ಹಾಗೆ ಕರೆಗಳ ಮೂಲಕ ಸುಳ್ಳು ಜಾಹೀರಾತುಗಳನ್ನ, ಹಾಗೆ ಸುಳ್ಳು ಮಾಹಿತಿಗಳನ್ನ ಜನರಿಗೆ ನೀಡಿ ಹಣ ವಸೂಲು ಮಾಡಲು ಮುಂದಾಗಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಇದೀಗ ಕೇಂದ್ರ ಸರ್ಕಾರದಿಂದ 10 ನೇ ತರಗತಿ ತೇರ್ಗಡೆಯಾದವರಿಗೆ ಉತ್ತಮ ಯೋಜನೆ ಒಂದನ್ನ ಅನಾವಣಗೊಳಿಸಿದೆ, ಹಾಗೆ ಉತ್ತೀರ್ಣರಾದ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 3500 ರೂಪಾಯಿಗಳ ನಿರುದ್ಯೋಗ ಭತ್ಯೆಯನ್ನು ನೀಡುತ್ತಿದೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಮನೋಜ್ ಸರ್ ಜಾಬ್ಸ್ ಹೆಸರಿನ ಒಂದು ಯೂಟ್ಯೂಬ್ ಚಾನೆಲ್‌ನಲ್ಲಿನ ಥಂಬ್‌ನೇಲ್‌ನಲ್ಲಿ ಈ ಸುದ್ದಿ ಕಂಡುಬಂದಿದೆ. 'ಕೇಂದ್ರ ಸರ್ಕಾರವು ನಿರುದ್ಯೋಗ ಭತ್ಯೆ ಯೋಜನೆ 2024-25ರ ಅಡಿಯಲ್ಲಿ 10 ನೇ ತರಗತಿ ಉತ್ತೀರ್ಣರಾದ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 3,500 ರೂಪಾಯಿಗಳ ನಿರುದ್ಯೋಗ ಭತ್ಯೆಯನ್ನು ನೀಡುತ್ತಿದೆ' ಎಂದು ಅದರಲ್ಲಿ ಬರೆಯಲಾಗಿದೆ. ಅಲ್ಲದೆ ಈ ನಿರುದ್ಯೋಗ ಭತ್ಯೆಯ ಥಂಬ್‌ನೇಲ್ ಹೊಂದಿರುವ ಈ ಯೂಟ್ಯೂಬ್ ವಿಡಿಯೋದಲ್ಲಿ, ಈ ಯೋಜನೆಯು ಎಲ್ಲಾ ರಾಜ್ಯಗಳ ನಿರುದ್ಯೋಗಿ ಯುವಕರಿಗೆ ಎಂದು ಹೇಳಲಾಗಿದೆ.
Fact Check:
ಸಾಮಾಜಿಕ ಜಾಲಾತಾಣದಲ್ಲಿ ಕಂಡುಬಂದ ಈ ಮಾಹಿತಿಯನ್ನ ಪರಿಶೀಲಿಸಿದಾಗ ಈ ರೀತಿಯ ಯಾವುದೇ ಯೋಜನೆಗಳನ್ನ ಕೇಂದ್ರ ಸರ್ಕಾರ ಘೋಷಣೆ ಮಾಡಿಲ್ಲ ಎನ್ನುವುದು ತಿಳಿದುಬಂದಿದೆ. ಅಲ್ಲದೆ 10 ನೇ ತರಗತಿಯಲ್ಲಿ ತೇರ್ಗಡೆಯಾಗಿ ಉತ್ತೀರ್ಣರಾದ ನಿರುದ್ಯೋಗಿ ಯುವಕರಿಗೆ ಯಾವುದೇ ನಿರುದ್ಯೋಗ ಬತ್ಯೆಯನ್ನ ನೀಡುತ್ತಿಲ್ಲ ಎನ್ನುವುದು ತಿಳಿದುಬಂದಿದೆ.
ಇದಲ್ಲದೆ ಈ ವಿಚಾರವಾಗಿ ಪ್ರೆಸ್ ಇನ್‌ಫಾರ್ಮೇಷನ್ ಬ್ಯೂರೋ(PIB) ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನ ಮಾಡಿದೆ. ಅದರಲ್ಲಿ ಈ ವೈರಲ್ ಆಗಿರುವ ಸುದ್ದಿ ಸುಳ್ಳು ಎಂದು ತಿಳಿಯಪಡಿಸಿದೆ. ಪಿಐಬಿ ಪೋಸ್ಟ್‌ನಲ್ಲಿ, ಮನೋಜ್ ಸರ್‌ಜಾಬ್ಸ್ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ತನ್ನ ವಿಡಿಯೋ ಥಂಬ್‌ನೇಲ್ ಒಂದರಲ್ಲಿ ನಿರುದ್ಯೋಗ ಭತ್ಯೆ ಯೋಜನೆ 2024-25 ಅಡಿಯಲ್ಲಿ ಸರ್ಕಾರವು 10 ನೇ ತರಗತಿ ಉತ್ತೀರ್ಣರಾದ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ₹3,500 ಭತ್ಯೆ ನೀಡುತ್ತಿದೆ ಎಂದು ಹೇಳಿಕೊಂಡಿದೆ. #PIBFactCheck ಈ ಹಕ್ಕು ನಕಲಿಯಾಗಿದೆ ಎಂದು ತಿಳಿಸಿದೆ. ಹಾಗೆ ಭಾರತ ಸರ್ಕಾರವು ಆ ರೀತಿಯ ಯಾವುದೇ ಯೋಜನೆಯನ್ನು ನಡೆಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಒಟ್ನಲ್ಲಿ ಕೇಂದ್ರ ಸರ್ಕಾರ ಅಂತಹ ಯಾವುದೇ ಯೋಜನೆಯನ್ನ ಜಾರಿಗೆ ತಂದಿಲ್ಲ ಎನ್ನುವುದು ಮಾತ್ರ ಖಚಿತವಾಗಿದೆ. ಹೀಗಾಗಿ 10ನೇ ತರಗತಿ ಉತ್ತೀರ್ಣರಾದ ಯುವಕರಿಗೆ 3500 ರೂಪಾಯಿ ನಿರುದ್ಯೋಗ ಭತ್ಯೆ ನೀಡುವ ವೈರಲ್ ಹಕ್ಕು ನಕಲಿ ಎನ್ನುವುದು ಸ್ಪಷ್ಟವಾಗಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications