"ಒಂದು ದೇಶ, ಒಂದು ಪಡಿತರ ಚೀಟಿ" (ಒನ್ ನೇಷನ್, ಒನ್ ರೇಷನ್ ಕಾರ್ಡ್) ಅಡಿಯಲ್ಲಿ ಒಂದು ವೇಳೆ ಮೂರು ತಿಂಗಳ ಕಾಲ ಆಹಾರ ಧಾನ್ಯ ಹಾಗೂ ಇತರ ಆಹಾರ ಪದಾರ್ಥಗಳನ್ನು ಖರೀದಿ ಮಾಡದಿದ್ದಲ್ಲಿ ಪಡಿತರ ಚೀಟಿ ರದ್ದಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಇದು ಸುಳ್ಳು ಎಂದು "PIB Fact Check"ನಲ್ಲಿ ಸ್ಪಷ್ಟ ಪಡಿಸಲಾಗಿದೆ. ಇಂಥ ಯಾವ ಮಾರ್ಗದರ್ಶಿ ಸೂತ್ರವನ್ನೂ ಕೇಂದ್ರದಿಂದ ನೀಡಿಲ್ಲ ಅಂತಲೂ ತಿಳಿಸಲಾಗಿದೆ.
"ಕೆಲವು ಮಾಧ್ಯಮಗಳು ವರದಿ ಮಾಡಿದಂತೆ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದಂತೆ, ಒಂದು ವೇಳೆ ಫಲಾನುಭವಿಗಳು ಮೂರು ತಿಂಗಳು ಪಡಿತರ ಪಡೆದುಕೊಳ್ಳದಿದ್ದಲ್ಲಿ ಆ ರೇಷನ್ ಕಾರ್ಡ್ ರದ್ದಾಗುತ್ತದೆ. ಈ ಸಂಗತಿ ಸುಳ್ಳು. ಕೇಂದ್ರ ಸರ್ಕಾರದಿಂದ ಅಂಥ ಯಾವ ಮಾರ್ಗದರ್ಶಿ ಸೂತ್ರವೂ ಬಂದಿಲ್ಲ," ಎಂದು "PIB Fact Check"ನಲ್ಲಿ ತಿಳಿಸಲಾಗಿದೆ.
ಸಾರ್ವಜನಿಕ ವಿತರಣೆ ವ್ಯವಸ್ಥೆ (ಪಿಡಿಎಸ್) ಜಾರಿಗೆ ತರಲು ಒಂಬತ್ತು ರಾಜ್ಯಗಳು ಯಶಸ್ವಿಯಾಗಿ, ಒನ್ ನೇಷನ್ ಒನ್ ರೇಷನ್ ಕಾರ್ಡ್ ವ್ಯವಸ್ಥೆ ಜಾರಿಯಾಗಿದೆ. ಫಲಾನುಭವಿಗಳ ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಪದಾರ್ಥಗಳನ್ನು ಖರೀದಿ ಮಾಡಬಹುದು.

ಆಂಧ್ರಪ್ರದೇಶ, ಗೋವಾ, ಹರ್ಯಾಣ, ಕರ್ನಾಟಕ, ಕೇರಳ, ತೆಲಂಗಾಣ, ತ್ರಿಪುರಾ ಮತ್ತು ಉತ್ತರಪ್ರದೇಶದಿಂದ ಒನ್ ನೇಷನ್ ಒನ್ ರೇಷನ್ ಕಾರ್ಡ್ ವ್ಯವಸ್ಥೆ ಜಾರಿಯಾಗಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಒನ್ ನೇಷನ್ ಒನ್ ರೇಷನ್ ಕಾರ್ಡ್ ವ್ಯವಸ್ಥೆಯ ಪ್ರಕಾರ, NFSA ಅಡಿಯಲ್ಲಿ ಫಲಾನುಭವಿಗಳು ತಮ್ಮ ರೇಷನ್ ಕಾರ್ಡ್ ಗೆ ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಧಾನ್ಯಗಳನ್ನು ಪಡೆದುಕೊಳ್ಳಬಹುದು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಎಲ್ಲರಿಗೂ ಆಹಾರ ಭದ್ರತೆ ಒದಗಿಸುವುದು ಒನ್ ನೇಷನ್ ಒನ್ ರೇಷನ್ ಕಾರ್ಡ್ ವ್ಯವಸ್ಥೆಯ ಉದ್ದೇಶ. ಫಲಾನುಭವಿಗಳು ದೇಶದ ಎಲ್ಲೇ ಇದ್ದರೂ ಅವರಿಗೆ ಈ ಅನುಕೂಲ ದೊರೆಯಲಿ ಎಂಬ ಆಶಯದೊಂದಿಗೆ ಆರಂಭಿಸಲಾಗಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013ರ ಅಡಿಯಲ್ಲಿ 81 ಕೋಟಿಯಷ್ಟು ಭಾರತೀಯರು ಕೇಜಿಗೆ 3 ರುಪಾಯಿಯಂತೆ ಅಕ್ಕಿ, 2 ರುಪಾಯಿಯಂತೆ ಗೋಧಿ ಹಾಗೂ 1 ರುಪಾಯಿಯಂತೆ ಇತರ ಧಾನ್ಯ ಪಡೆಯುವುದಕ್ಕೆ ಅರ್ಹರು.


Click it and Unblock the Notifications