ಕಳೆದ ಹಲವು ದಿನಗಳಿಂದ ಭಾರತದ ವಿಮಾನಯಾನ ಸಂಸ್ಥೆಗಳು ಹುಸಿ ಬಾಂಬ್ ಬೆದರಿಕೆ ಕರೆಗಳಿಂದಾಗಿ ಅಕ್ಷರಶಃ ನಲುಗಿ ಹೋಗಿದೆ ಎಂದರೆ ತಪ್ಪಾಗಲಾರದು. ಕಳೆದ ಎರಡು ವಾರಗಳಿಂದ ಭಾರತದ ವಿಮಾನಗಳಿಗೆ ಹುಸಿ ಬಾಂಬ್ ಕರೆಗಳು ಬರುತ್ತಿದ್ದು, ಇದರಿಂದಾಗಿ ಭಾರತೀಯ ವಿಮಾನಯಾನ ಸಂಸ್ಥೆ 13,481.88 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.
ಏನಿದು ಹುಸಿ ಬಾಂಬ್ ಬೆದರಿಕೆ ಕರೆ
ಎಲ್ಲರಿಗೂ ಭಾರತದ ವಿಮಾನ ಸಂಸ್ಥೆಗಳು ಅಭಿವೃದ್ದಿ ವಿಚಾರದಲ್ಲಿ ಭಾರೀ ವೇಗದಲ್ಲಿ ಮುನ್ನಡೆಯುತ್ತಿದ್ದು, ಇತರೆ ದೇಶಗಳ ಸಂಸ್ಥೆಗಳಿಗೂ ಭಾರೀ ಪೈಪೋಟಿ ನೀಡುತ್ತಿದೆ. ಅಲ್ಲದೆ ಮುಂದಿನ ಕೆಲ ವರ್ಷಗಳಲ್ಲಿ ಪ್ರಮುಖ ವಿಮಾನಯಾನ ಸಂಸ್ಥೆಗಳನ್ನು ಕೂಡ ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ ಸದ್ಯ ಭಾರತದ ಅಭಿವೃದ್ದಿ ವೇಗವನ್ನು ನೋಡಲಾರದು ಶಕ್ತಿಗಳು ನಕಲಿ ಹುಸಿ ಬಾಂಬ್ ಬೆದರಿಕೆ ಕರೆಗಳ ಮೂಲಕ ಹಾಳುಗೆಡವಲು ಬಯಸುತ್ತಿದ್ದಾರೆ ಎಂಬ ಮಾತು ಕೂಡ ಕೇಳಿಬರುತ್ತಿದೆ. ಪರಿಣಾಮ ಭಾರತದ ಹಲವು ವಿಮಾನಯಾನ ಸಂಸ್ಥೆಗಳಿಗೆ ನಕಲಿ ಹುಸಿ ಬಾಂಬ್ ಬೆದರಿಕೆ ಒಡ್ಡಿ ಪ್ರಯಾಣಿಕರನ್ನು ಭೀತಿಗೆ ಸಿಲುಕಿಸಲಾಗುತ್ತಿದೆ. ಇದರಿಂದ ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎನ್ನಲಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಬೆದರಿಕೆ ಕರೆ ಬಂದ ಬಳಿಕ ವಿಮಾನದ ವೇಳಾಪಟ್ಟಿಯನ್ನು ಬದಲಾಯಿಸಲಾಗುತ್ತದೆ. ಅಲ್ಲದೆ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ತಪಾಸಣೆ ನಡೆಸಲಾಗುತ್ತದೆ. ಅಲ್ಲದೆ ಹೆಚ್ಚುವರಿ ಇಂಧನ ವ್ಯಯಿಸುವುದರಿಂದ ವಿಮಾನ ಯಾನ ಸಂಸ್ಥೆಗೆ ಭಾರೀ ಪ್ರಮಾಣದಲ್ಲಿ ನಷ್ಟ ಸಂಭವಿಸುತ್ತದ. ಅದೂ ಅಲ್ಲದೆ ಕಳೆದ ಹಲವು ದಿನಗಳಿಂದ ಈ ಪ್ರಕ್ರಿಯೆ ನಡೆಯುತ್ತಿರುವುದರಿಂದ ಕಂಡು ಕೇಳರಿಯದ ರೀತಿಯಲ್ಲಿ ಭಾರತೀಯ ವಿಮಾನ ಯಾನಗಳಿಗೆ ನಷ್ಟ ಉಂಟಾಗಿದೆ.
ಭಾರತೀಯ ವಿಮಾನಯಾನಕ್ಕಾದ ನಷ್ಟವೆಷ್ಟು?
ಸೋಮವಾರದಂದು ಇಂಟರ್‌ಗ್ಲೋಬ್ ಏವಿಯೇಷನ್ ನಡೆಸುತ್ತಿರುವ ಇಂಡಿಗೋ ಏರ್‌ಲೈನ್ಸ್ ಷೇರುಗಳು ಶೇಕಡಾ 8 ರಷ್ಟು ಕಡಿಮೆಯಾಗಿದೆ, ಕಂಪನಿಯು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 986.7 ಕೋಟಿ ರೂ.ಗಳ ನಿವ್ವಳ ನಷ್ಟವನ್ನು ವಿಮಾನಗಳ ಗ್ರೌಂಡಿಂಗ್ ಮತ್ತು ಹೆಚ್ಚಿನ ಇಂಧನ ವೆಚ್ಚದಿಂದ ಎದುರಿಸಿದೆ. ಮಾರುಕಟ್ಟೆ ಮೌಲ್ಯದ ಪ್ರಕಾರ ವಿಶ್ವದ ಅತ್ಯಂತ ಮೌಲ್ಯಯುತ ಏರ್‌ಲೈನ್ಸ್‌ಗಳಲ್ಲಿ ಒಂದಾಗಿರುವ ಭಾರತೀಯ ವಿಮಾನಯಾನ ಸಂಸ್ಥೆಯ ಷೇರುಗಳು ಬಿಎಸ್‌ಇಯಲ್ಲಿ ಪ್ರತಿ 4,015.50 ರೂ.ಗೆ 8 ಶೇಕಡಾ ಕುಸಿದಿದೆ.
ಅಲ್ಲದೆ ದಿನದ ಅವಧಿಯಲ್ಲಿ ಶೇ.13.42ರಷ್ಟು ಕುಸಿದು 3,778.50 ರೂ.ಗೆ ತಲುಪಿದೆ. ಎನ್‌ಎಸ್‌ಇಯಲ್ಲಿ ಸಂಸ್ಥೆಯ ಷೇರುಗಳು ಶೇ.8ರಷ್ಟು ಕುಸಿದು 4,015 ರೂ. ದಿನದಂತ್ಯಕ್ಕೆ ಶೇ.13.42ರಷ್ಟು ಕುಸಿದು 3,780 ರೂ. ಕಂಪನಿಯ ಮಾರುಕಟ್ಟೆ ಬಂಡವಾಳೀಕರಣ (ಎಂಕ್ಯಾಪ್) 13,481.88 ಕೋಟಿ ರೂ.ನಿಂದ 1,55,107.61 ಕೋಟಿ ರೂ.ಗೆ ಕುಸಿದಿದೆ.
ಪರಿಮಾಣದ ಪರಿಭಾಷೆಯಲ್ಲಿ ದಿನದ ಅವಧಿಯಲ್ಲಿ ಸಂಸ್ಥೆಯ 1.97 ಲಕ್ಷ ಷೇರುಗಳು ಬಿಎಸ್‌ಇ ಮತ್ತು 91.39 ಲಕ್ಷ ಷೇರುಗಳು ಎನ್‌ಎಸ್‌ಇಯಲ್ಲಿ ವಹಿವಾಟಾಗಿವೆ. ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಶುಕ್ರವಾರದಂದು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 986.7 ಕೋಟಿ ರೂಪಾಯಿಗಳ ನಿವ್ವಳ ನಷ್ಟವನ್ನು ವಿಮಾನಗಳ ಗ್ರೌಂಡಿಂಗ್ ಮತ್ತು ಹೆಚ್ಚಿನ ಇಂಧನ ವೆಚ್ಚಗಳಿಂದಾಗಿ ಮಾಡಿದೆ.
ಇಂಡಿಗೋಗೆ ಭಾರೀ ನಷ್ಟ
400 ಕ್ಕೂ ಹೆಚ್ಚು ವಿಮಾನಗಳನ್ನು ಹೊಂದಿರುವ ಭಾರತದ ಮೊದಲ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ IndiGo, 70 ರ ದಶಕದ ಮಧ್ಯಭಾಗದಿಂದ 60 ರ ದಶಕದಲ್ಲಿ ಗ್ರೌಂಡ್ ಮಾಡಲಾದ ವಿಮಾನಗಳ ಸಂಖ್ಯೆಯು ಹೆಚ್ಚು ಕಡಿಮೆಯಾಗಿದೆ ಮತ್ತು ವರ್ಷಾಂತ್ಯದ ವೇಳೆಗೆ ಉಪ-60 ಮಟ್ಟಕ್ಕೆ ಇಳಿಯಲಿದೆ ಎಂದು ಹೇಳಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ, ಸಂಸ್ಥೆಯು 410 ವಿಮಾನಗಳ ಸಮೂಹವನ್ನು ಹೊಂದಿತ್ತು.
ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ
ಇನ್ನು ಹುಸಿ ಬಾಂಬ್ ಬೆದರಿಕೆ ಕರೆ ಮಾಡುವವರಿಗೆ ಅಜೀವ ಪರ್ಯಂತ ವಿಮಾನದಲ್ಲಿ ಸಂಚರಿಸುವಲ್ಲಿ ನಿಷೇಧ ಹೇರಲಾಗುವ ಬಗ್ಗೆ ಸರ್ಕರ ಚಿಂತನೆ ನಡೆಸುತ್ತಿದೆ. ಅದೂ ಅಲ್ಲದೆ ಅಂಥ ವ್ಯಕ್ತಿಗಳ ವಿರುದ್ದ ಕಠಿನ ಕ್ರಮ ತೆಗೆದುಕೊಳ್ಳುವ ಬಗ್ಗೆ ಕೂಡ ಚಿಂತನೆ ನಡೆಸುತ್ತಿದೆ. ಇಂಥ ಹುಸಿ ಬಾಂಬ್ ಬೆದರಿಕರೆ ಕರೆ ಮಾಡುವವರನ್ನು ಶೀಘ್ರವಾಗಿ ಪತ್ತೆಹಚ್ಚಬೇಕಿದೆ. ಇಲ್ಲವಾದಲ್ಲಿ ಇದೇ ಪರಿಸ್ಥಿತಿ ಮುಂದುವರೆದರೆ ಭಾರತದ ವಿಮಾನಯಾನ ಸಂಸ್ಥೆಗಳಿಗೆ ತಡೆದುಕೊಳ್ಳಲಾಗದ ನಷ್ಟ ಸಂಭವಿಸುವ ಎಲ್ಲಾ ಸಾಧ್ಯತೆಗಳಿವೆ.


Click it and Unblock the Notifications