ಬೆಂಗಳೂರಿಗರೇ ಎಚ್ಚರ! ಸುಳ್ಳು ಡೀಲ್‌ಗಳಿಗೆ ಬೀಳಬೇಡಿ.. ಹೌದು, ಮುಂದಿನ ತಿಂಗಳು ಸಾಲು ಸಾಲು ಹಬ್ಬಗಳು ಇವೆ. ಹಬ್ಬದ ಖರೀದಿಯ ಭರಾಟೆ ಕೂಡ ಜೋರಾಗಿಯೇ ಇರುತ್ತದೆ. ಇನ್ನೇನು ಹಬ್ಬಗಳ ಸೀಸನ್ ಶುರುವಾಗ್ತಿದ್ದಂತೆ, ಆನ್ಲೈನ್ ಶಾಪಿಂಗ್‌ಗಳು ಸದ್ದು ಮಾಡುತ್ತೇವೆ.ಸೈಬರ್ ಕ್ರಿಮಿನಲ್ಸ್ ಗಳು ಈ ಸಮಯವನ್ನೇ ಬಂಡವಾಳ ಮಾಡ್ಕೊಂಡು ಜನರಿಗೆ ವಂಚನೆಯನ್ನು ಮಾಡುವುದಕ್ಕೆ ನಕಲಿ ವೆಬ್‌ಸೈಟ್‌ಗಳನ್ನು ಕ್ರಿಯೇಟ್ ಮಾಡಿಕೊಂಡು ಮೋಸಮಾಡುತ್ತಾರೆ. ಈ ವೆಬ್‌ಸೈಟ್‌ಗಳು ನೋಡುವುದಕ್ಕೆ ನಿಜವಾದ ವೆಬ್‌ಸೈಟ್‌ಗಳಾಗಿ ಕಾಣುತ್ತೇವೆ. ಹಾಗೆ ಕಾಣೋ ಈ ಸೈಟ್‌ಗಳು ಭಾರೀ ರಿಯಾಯಿತಿ ದರದಲ್ಲಿ ಒಳ್ಳೊಳ್ಳೆ ಆಫರಗಳನ್ನು ಕೊಟ್ಟು ಜನರನ್ನು ತನ್ನ ಕಡೆಗೆ ಸಳೆಯುತ್ತದೆ. ಆದರೆ ಇವರ ಹಿಂದಿನ ಮುಖ್ಯ ಉದ್ದೇಶ, ನಿಮ್ಮ ಹಣ ಮತ್ತು ಮಾಹಿತಿ ಕದಿಯುವುದು ಆಗಿದೆ.
ಈ ಕುರಿತು ಬೆಂಗಳೂರಿನ ಸಿಇಎನ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಮಾಹಿತಿಯನ್ನು ನೀಡಿದ್ದಾರೆ. ಇತ್ತೀಚಿಗೆ ಎರಡು ತರಹದ ವಂಚನೆಗಳು ಜಾಸ್ತಿಯಾಗಿವೆ. ಮೊದಲನೆಯದಾಗಿ, ದೊಡ್ಡ ದೊಡ್ಡ ಬ್ರ್ಯಾಂಡ್ ಗಳ ಹೆಸರಿನಲ್ಲಿ ನಕಲಿ ವೆಬ್ಸೈಟ್ ಮಾಡ್ತಾರೆ. ಎರಡನೆಯದಾಗಿ, ಹೊಸದಾಗಿ ನಕಲಿ ಆನ್ಲೈನ್ ಶಾಪಿಂಗ್ ಪ್ಲಾಟ್ಫಾರ್ಮ್ ಶುರು ಮಾಡ್ತಾರೆ. ಈ ಎರಡೂ ರೀತಿಗಳಲ್ಲಿ ಜನರನ್ನು ಮೋಸಗೊಳಿಸೋಕೆ, ಸಾಮಾಜಿಕ ಜಾಲತಾಣ ಮತ್ತು ಮೆಸೇಜಿಂಗ್ ಆ್ಯಪ್‌ಗಳಲ್ಲಿ ಜಾಹಿರಾತುಗಳನ್ನು ನೀಡುತ್ತಾರೆ ಎಂದು ಅವರು ಹೇಳಿದ್ದಾರೆ.

ವಸ್ತುಗಳ ಖರೀದಿಗೂ ಮುನ್ನವೇ ಹೆಚ್ಚಾಗಿ ಗ್ರಾಹಕರು ಮೊದಲೇ ಹಣ ಕೊಡ್ತಾರೆ. ಆದ್ರೆ ಅವರಿಗೆ ಯಾವುದೇ ವಸ್ತು ಸಿಗಲ್ಲ. ವಂಚಕರು, ವಸ್ತು ಕೊಡದೇ ಹಣ ದೋಚುವಂತಹ ಕೆಲಸವನ್ನು ಮಾಡುತ್ತಾರೆ. ಇದಲ್ಲದೇ ಕೆಟ್ಟ ಲಿಂಕ್‌ಗಳನ್ನು ಕಳುಹಿಸಿ ನಿಮ್ಮ ವೈಯತ್ತಿಕ ಮಾಹಿತಿಯನ್ನು ಕದಿಯವಂತಹ ಕಾರ್ಯವನ್ನು ಮಾಡುತ್ತಾರೆ ಎಂದು ಹೇಳಿದ್ದಾರೆ. ನಕಲಿ ವೆಬ್ಸೈಟ್ಗಳಲ್ಲಿ, ಬ್ರ್ಯಾಂಡ್ ಹೆಸರಿನಲ್ಲಿ ಸಣ್ಣಪುಟ್ಟ ತಪ್ಪುಗಳಿರುತ್ತವೆ. ಆದ್ರೆ ಅದು ಬೇಗ ಗಮನಕ್ಕೆ ಬರಲ್ಲ ಅಂತ ಎಚ್ಚರಿಕೆ ನೀಡಿದ್ದಾರೆ
ನೀವು ನಿಮ್ಮಗೆ ತಿಳಿಯದೇ ಲಿಂಕ್‌ನ್ನು ಕ್ಲಿಕ್ ಮಾಡೋದು ಅಥವಾ ನಂಬಲು ಆಗದ ಆಫರ್ ಗಳನ್ನು
ನಂಬೋದು ಅಪಾಯಕಾರಿ. "ಯಾವಾಗಲೂ ವೆಬ್ಸೈಟ್ ವಿಳಾಸ (URL) ಪರಿಶೀಲಿಸಿ. ಡೊಮೇನ್‌ನಲ್ಲಿ ತಪ್ಪು ಇದ್ದೀಯಾ ಅಂತ ಮೊದಲು ನೋಡಿ. ಏನಾದ್ರೂ ತಪ್ಪಿದೆಯೇ ನೋಡಿ. ಅಧಿಕೃತ ಬ್ರ್ಯಾಂಡ್ ವೆಬ್ಸೈಟ್‌ಗಳಲ್ಲಿ ಆಫರ್ ಇದೆಯಾ ಅಂತ ಖಚಿತಪಡಿಸಿಕೊಳ್ಳಿ," ಅಂತ ಅವರು ಸಲಹೆ ನೀಡಿದ್ದಾರೆ.
ಮತ್ತೊಬ್ಬ ಹಿರಿಯ ಅಧಿಕಾರಿ ನೀಡಿರುವ ಮಾಹಿತಿ ಪ್ರಕಾರ, ಕೆಲವು ಕಂಪನಿಗಳು ತಮ್ಮದಲ್ಲದ ಆರ್ಡರ್ ಬಗ್ಗೆ ದೂರು ಕೊಟ್ಟಿದ್ದಾರೆ. "ಸಣ್ಣ ಮೊತ್ತ ಕಳೆದುಕೊಂಡವರು, ಅಂದ್ರೆ 1,000 ರೂ. ರಿಂದ 2,000 ರೂಪಾಯಿ ಕಳೆದುಕೊಂಡವರು ದೂರು ಕೊಡೋದಿಲ್ಲ. ಇದರಿಂದ ವಂಚಕರಿಗೆ ಸುಲಭವಾಗಿ ಮೋಸ ಮಾಡೋಕೆ ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ನೀವು ಆನ್ಲೈನ್ ನಲ್ಲಿ ಖರೀದಿ ಮಾಡುವಾಗ ಎಚ್ಚರಿಕೆಯಿಂದ ಇರಿ. ಏನಾದ್ರೂ ಅನುಮಾನ ಬಂದ್ರೆ, ತಕ್ಷಣ ತಿಳಿಸಿ. ಇದರಿಂದ ಮೋಸ ತಪ್ಪಿಸಬಹುದು.
ಒಟ್ಟಾರೆ ಹೇಳುವಾದರೆ ನೀವು ಎಲ್ಲಿ ವಸ್ತುಗಳನ್ನು ಖರೀದಿ ಮಾಡಿದ್ದರೂ ಎಚ್ಚರಿಕೆಯಿಂದ ಮಾಡುವುದು ತಂಬಾನೇ ಮುಖ್ಯ.


Click it and Unblock the Notifications