100 ರುಪಾಯಿ ಗಡಿ ದಾಟಿದ್ದ ಈರುಳ್ಳಿ ಬೆಲೆ ಈಗ 10 ರುಪಾಯಿ

ದೇಶದಲ್ಲಿ ಜನಸಾಮಾನ್ಯರ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ ಬೆಲೆಯು ಭಾರೀ ಕುಸಿತ ಕಂಡಿದೆ. 100 ರುಪಾಯಿ ಗಡಿ ದಾಟಿ ಭಾರೀ ಬೆಲೆ ಏರಿಕೆ ಕಂಡಿದ್ದ ಈರುಳ್ಳಿ ಬೆಲೆ ಇದೀಗ ಕೆಜಿಗೆ 10 ರಿಂದ 12 ರುಪಾಯಿಗೆ ತಲುಪಿದೆ.

ಕಳೆದ ಕೆಲ ತಿಂಗಳ ಹಿಂದೆ ಈರುಳ್ಳಿಗೆ ಚಿನ್ನದಂತಹ ಬೆಲೆಯಿತ್ತು. ಪ್ರತಿ ಕ್ವಿಂಟಾಲ್‌ಗೆ 13 ಸಾವಿರದಿಂದ 15 ಸಾವಿರದವರೆಗೂ ಏರಿಕೆಯಾಗಿದ್ದು ವರದಿಯಾಗಿತ್ತು. ಬೆಲೆ ಏರಿಕೆಯಿಂದಾಗಿ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು. ಇದೀಗ ಈರುಳ್ಳಿ, ಬೆಳ್ಳುಳ್ಳಿ ಮತ್ತು ತರಕಾರಿ ಬೆಲೆ ಗಣನೀಯವಾಗಿ ಕುಸಿದಿದೆ. ತರಕಾರಿ ಬೆಲೆ ಇಳಿಕೆ ಗ್ರಾಹಕರದಲ್ಲಿ ಸಂತಸವನ್ನು ತರಿಸಿದೆ. ಆದರೆ, ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.

100 ರುಪಾಯಿ ಗಡಿ ದಾಟಿದ್ದ ಈರುಳ್ಳಿ ಬೆಲೆ ಈಗ 10 ರುಪಾಯಿ

ಈಗಾಗಲೇ ಹೊಸ ಬೆಳೆ ಬಂದಿದ್ದು, ಉತ್ತಮ ಇಳುವರಿಯೂ ಇದೆ. ಮಾರುಕಟ್ಟೆಗೆ ಸೊಪ್ಪು ಸೇರಿದಂತೆ ವಿವಿಧ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿರುವುದರಿಂದ ಬೇಡಿಕೆ ಕಡಿಮೆಯಾಗಿದೆ. ಈ ಹಿಂದೆ 200 ರುಪಾಯಿವರೆಗೂ ಏರಿಕೆಯಾಗಿದ್ದ ಈರುಳ್ಳಿ ಈಗ ಕೆಜಿಗೆ 10 ರಿಂದ 12 ರುಪಾಯಿಗೆ ಸಿಗುತ್ತಿದೆ. ಬೆಳ್ಳುಳ್ಳಿ ಕೆಜಿಗೆ 130 ರುಪಾಯಿಯಿಂದ 140ಕ್ಕೆ ಇಳಿಕೆಯಾಗಿದೆ.

ಈ ಹಿಂದೆ ಕೇಂದ್ರ ಸರ್ಕಾರ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿತ್ತು. ರಫ್ತು ಮೇಲಿನ ನಿಯಂತ್ರಣದ ಜೊತೆಗೆ ವಿದೇಶದಿಂದ ಈರುಳ್ಳಿಯನ್ನು ಆಮದು ಮಾಡಿಕೊಂಡಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+