ಮುಂಬೈ, ಜೂನ್ 17: ಕೋವಿಡ್ ನಂತರ ಸ್ವದೇಶಿ ವಸ್ತುಗಳ ಬಳಕೆಗೆ ಕೇಂದ್ರ ಸರ್ಕಾರ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಭಾರತೀಯ ಮಿಲಿಟರಿ ಕ್ಯಾಂಟೀನ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ವಿಶ್ವದ ಅತಿದೊಡ್ಡ ಮದ್ಯ ತಯಾರಕ ಕಂಪನಿಗಳಾದ ವಿದೇಶಿ ಮೂಲದ Pernod Ricard ಮತ್ತು Diageo ಕಂಪೆನಿಯ ಜಾನಿ ವಾಕರ್ ಹಾಗೂ ತಾಲಿಸ್ಕರ್ ಬ್ರಾಂಡ್ ಮದ್ಯವನ್ನು ಸೇನಾ ಕ್ಯಾಂಟೀನ್ ಆಮದು ಮಾಡಿಕೊಳ್ಳುವುದನ್ನು ರದ್ದು ಮಾಡಿದೆ.
ಸ್ವದೇಶಿ ಉತ್ಪನ್ನಗಳ ಬೆಂಬಲವಾಗಿ ಸೇನಾ ಕ್ಯಾಂಟೀನ್ ಈ ಕ್ರಮ ಕೈಗೊಂಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಪೆರ್ನೋಡ್ ರಿಕಾರ್ಡ್ ಮತ್ತು ಡಿಯಾಗೋ ಸೇನಾ ಕ್ಯಾಂಟೀನ್‌ಗಳಿಂದ ಇತ್ತೀಚೆಗೆ ಆರ್ಡರ್‌ಗಳನ್ನು ತೆಗೆದುಕೊಂಡಿಲ್ಲ ಎಂದು ವರದಿ ತಿಳಿಸಿದೆ.
ಉನ್ನತ ಅಧಿಕಾರಿಗಳ ನಿರ್ಧಾರ
ಪ್ರಸಿದ್ದ ಮದ್ಯದ ಬ್ರಾಂಡ್‌ಗಳನ್ನು ಆಮದು ಮಾಡಿಕೊಳ್ಳುವ ಬಗ್ಗೆ ಸೇನಾ ಕ್ಯಾಂಟೀನ್ ಮುಖ್ಯಸ್ಥರು ಅಧಿಕೃತ ಆದೇಶ ಹೊರಡಿಸಿಲ್ಲವಾದರೂ ಈ ಬಗ್ಗೆ ಉನ್ನತ ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿ ಹೇಳಿದೆ.
ಸದ್ಯಕ್ಕೆ ಆಮದು ನಿಂತಿದೆ
ಕಳೆದ ಒಂದು ತಿಂಗಳ ಅವಧಿಯಲ್ಲಿ ಸೇನಾ ಕ್ಯಾಂಟೀನ್‌ಗಳಲ್ಲಿ ಆಮದಾಗುತ್ತಿದ್ದ 4,500 ರಿಂದ 5,000 ಕೇಸ್‌ಗಳು (ಮದ್ಯದ ಬಾಕ್ಸ್‌ಗಳು) ಆಮದಾಗಿಲ್ಲ ಎಂದು ಸೇನಾ ಕ್ಯಾಂಟೀನ್‌ನ ಅಂಕಿ ಅಂಖೆಗಳನ್ನು ಎನ್‌ಡಿಟಿವಿ ಉಲ್ಲೇಖಿಸಿದೆ. ಹೀಗಾಗಿ ವಿದೇಶದಿಂದ ಆಮದಾಗುವ ಮದ್ಯದ ಬಾಟಲಿಗಳ ಮೇಲೆ ಸೇನಾ ಕ್ಯಾಂಟೀನ್ ನಿರ್ಭಂಧ ವಿಧಿಸಿದೆ.
450 ಮಿಲಿಯನ್ ಡಾಲರ್ ವಹಿವಾಟು
ಸೇನಾ ಕ್ಯಾಂಟೀನ್‌ಗಳಲ್ಲಿ ಆಮದು ಮಾಡಿದ ಮದ್ಯ ಮಾರಾಟವು ವಾರ್ಷಿಕವಾಗಿ 17 ಮಿಲಿಯನ್ ಡಾಲರ್ ಗಳಿಸಿದರೆ, ಒಟ್ಟಾರೆ ಪ್ರತಿವರ್ಷ ಸುಮಾರು 450 ಮಿಲಿಯನ್ ಡಾಲರ್ ಮೌಲ್ಯದ ಮದ್ಯ ಮಾರಾಟ ಆಗುತ್ತದೆ. ಇಲ್ಲಿ ಹೆಚ್ಚಾಗಿ ವಿಸ್ಕಿ, ರಮ್ ಮತ್ತು ಬಿಯರ್ ಮಾರಾಟವಾಗುತ್ತದೆ.
ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ
ಸೇನಾ ಕ್ಯಾಂಟೀನ್‌ಗಳು ಸೈನಿಕರು, ಮಾಜಿ ಸೈನಿಕರು ಮತ್ತು ಅವರ ಕುಟುಂಬಗಳಿಗೆ ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ಸ್ಥಳೀಯ ಮತ್ತು ಆಮದು ಮಾಡಿದ ಮದ್ಯವನ್ನು ಒದಗಿಸುತ್ತವೆ.


Click it and Unblock the Notifications