ಮಗಳ ಆಸೆ ಪೂರೈಸುವ ಸಲುವಾಗಿ ರಾಜಸ್ಥಾನದ ಈ ಕೃಷಿಕ ತಂದೆ ಮಾಡಿದ ಕೆಲಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ಕೇಳಿಬರುತ್ತಿದೆ. ಚಿಕ್ಕವಯಸ್ಸಿನಲ್ಲಿ ಮಗಳು ಕೇಳಿದ್ದ ಮಾತನ್ನು ನೆನಪಿನಲ್ಲಿಟ್ಟುಕೊಂಡು, ಆಕೆಯ ಮದುವೆ ದಿನದಂದು ಆ ಆಸೆ ಪೂರೈಸಿದ್ದಾರೆ. ಹೆಲಿಕಾಪ್ಟರ್ ವೊಂದನ್ನು ಬಾಡಿಗೆಗೆ ಪಡೆದು, ಮಗಳನ್ನು ಮಾವನ ಮನೆಗೆ ಕಳುಹಿಸಿದ್ದಾರೆ.
ಆ ಹೆಣ್ಣುಮಗಳ ಹೆಸರು ರೀನಾ. ಆಕೆಯ ತಂದೆ ಹೆಸರು ಮಹೇಂದ್ರ ಸಿಂಗ್. ವೃತ್ತಿಯಿಂದ ಕೃಷಿಕರು. ಝುಂಝುನು ಗ್ರಾಮದಲ್ಲಿ ವಾಸವಿದ್ದಾರೆ. ಅದಕ್ಕೆ ಮುನ್ನ ವಿದೇಶದಲ್ಲಿ ಕೆಲವು ವರ್ಷಗಳ ಕಾಲ ಅವರು ಕೆಲಸ ಮಾಡಿದ್ದರು. "ಅಪ್ಪ, ನೀವು ವಿಮಾನದಲ್ಲಿ ಹೋಗಿಬರ್ತೀರಿ. ಆದರೆ ನಾನು ಯಾವಾಗ ವಿಮಾನದಲ್ಲಿ ಹೋಗುವುದು?" ಎಂದು ಪುಟಾಣಿ ಆಗಾಗ ಕೇಳುತ್ತಿದ್ದಳಂತೆ.
ಮಗಳ ಹಲವು ಆಸೆಗಳನ್ನು ಪೂರೈಸಿದ ತಂದೆಗೆ ಇದೊಂದು ಪೂರ್ಣಗೊಳಿಸಲು ಆಗಿರಲಿಲ್ಲ. ಆದ್ದರಿಂದ ಮದುವೆ ದಿನದಂದು ಗಂಡನ ಮನೆಗೆ ಕಳುಹಿಸುವಾಗ ಆ ಆಸೆ ಪೂರ್ತಿ ಮಾಡಲು ನಿರ್ಧರಿಸಿದ್ದಾರೆ. ಹೆಲಿಕಾಪ್ಟರ್ ಬುಕ್ ಮಾಡಿ, ಅದಕ್ಕೆ ಅಗತ್ಯ ಇರುವ ಎಲ್ಲ ಅನುಮತಿಗಳನ್ನು ಪಡೆದಿದ್ದಾರೆ.

ತಂದೆಯ ಈ ಪ್ರೀತಿಯ ಕೆಲಸದಿಂದ ಹಿಗ್ಗಿದ ರೀನಾ ತನ್ನ ಗೆಳೆಯ- ಗೆಳತಿಯರನ್ನೆಲ್ಲ ಆ ಸಂದರ್ಭದಲ್ಲಿ ಆಹ್ವಾನಿಸಿದ್ದಾರೆ. ಸಾಂಪ್ರಾದಾಯಿಕವಾಗಿ ಬೀಳ್ಕೊಡುಗೆ ಕಾರ್ಯಕ್ರಮ ಪೂರ್ತಿಯಾದ್ ಮೇಲೆ ಅಜೀತ್ ಪುರ್ ನಿಂದ ಹೆಲಿಕಾಪ್ಟರ್ ನಲ್ಲಿ ಹೊರಟ ರೀನಾ ಅವರು ಸುಲ್ತಾನಾದಲ್ಲಿ ಇರುವ ಮಾವನ ಮನೆ ಬಳಿ ಇಳಿದಿದ್ದಾರೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications