ಇನ್ಮುಂದೆ ಪದೇ ಪದೇ ಟೋಲ್ ಪ್ಲಾಜಾಗಳಲ್ಲಿ ಟೋಲ್ ಪಾವತಿಸುವ ಚಿಂತೆ ಇರಲ್ಲ. ಹೌದು, ಟೋಲ್ ಪ್ಲಾಜಾಗಳಿಂದ ವಾಹನ ಸವಾರರಿಗೆ ರಿಲೀಫ್ ಕೊಡಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲವ ವಾರ್ಷಿಕ ಪಾಸ್ ವ್ಯವಸ್ಥೆಯನ್ನು ಇಂದು ಜಾರಿಗೆ ತಂದಿದೆ.
ನಗರಗಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ವಾಹನ ಚಾಲಕರಿಗೆ ಹೆದ್ದಾರಿ ಪ್ರಯಾಣವನ್ನು ಸುಧಾರಿಸಲು ಕೇಂದ್ರ ಸರ್ಕಾರವು ಹೊಸ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಬಿಡುಗಡೆಯನ್ನು ಮಾಡಿದೆ. ಈ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ತಮ್ಮ ಅಧಿಕೃತ ಎಕ್ಸ್ (ಹಿಂದೆ ಟ್ವಿಟರ್) ಖಾತೆಯ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಹೊಸ ವಾರ್ಷಿಕ ಪಾಸ್ ವ್ಯವಸ್ಥೆಯಿಂದಾಗಿ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವುದು ಈಗ ಇನ್ನಷ್ಟು ಸುಲಭ ಮತ್ತು ಕಡಿಮೆ ವೆಚ್ಚವಾಗುತ್ತದೆ.
ಕೇಂದ್ರ ಸರ್ಕಾರವು ಮೂರು ಸಾವಿರ ಮೊತ್ತದ ಫಾಸ್ಟ್‌ಟ್ಯಾಗ್ (FASTag) ಆಧಾರಿತ ವಾರ್ಷಿಕ ಪಾಸ್ ಸೌಲಭ್ಯವನ್ನು ಪ್ರಾರಂಭಿಸಲಿದೆ ಎಂದು ಸಚಿವ ನಿತಿನ್ ಗಡ್ಕರಿ ಈ ಹಿಂದೆ ತಿಳಿಸಿದ್ದಾರೆ. ಅದರಂತೆ ಹೊಸ ವಾರ್ಷಿಕ ಪಾಸ್‌ನ್ನು ಬಿಡುಗಡೆ ಮಾಡಲಾಗಿದೆ. ನೀವು ಈ ಪಾಸ್ ಸೌಲಭ್ಯವನ್ನು ಆಗಸ್ಟ್ 15 ಪಡೆದುಕೊಳ್ಳಬಹುದು. ಈ ವಾರ್ಷಿಕ ಪಾಸ್‌ಸೇವೆ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಮಾತ್ರ ಅನುಕೂಲವಾಗುತ್ತದೆ. ಈ ಪಾಸ್ ಅನ್ನು ಸಕ್ರಿಯಗೊಳಿಸಿದ ದಿನಾಂಕದಿಂದ ಒಂದು ವರ್ಷದವರೆಗೆ ಅಥವಾ 200 ಟ್ರಿಪ್‌ಗಳಿಗೆ (ಯಾವುದು ಮೊದಲು ಬರುತ್ತದೆಯೋ ಅದು) ಮಾನ್ಯವಾಗಿರುತ್ತದೆ.
ಈ ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್ ಸೌಲಭ್ಯವು 60 ಕಿ.ಮೀ ವ್ಯಾಪ್ತಿಯೊಳಗಿನ ಟೋಲ್ ಪ್ಲಾಜಾಗಳಿಗೆ ಸಂಬಂಧಿಸಿದ ದೀರ್ಘಕಾಲದ ಸಂಚಾರ ದಟ್ಟಣೆಯ ಸಮಸ್ಯೆಯನ್ನು ಪರಿಹರಿಸುತ್ತದೆ ಮತ್ತು ಒಂದೇ, ಕೈಗೆಟುಕುವ ವಹಿವಾಟಿನ ಮೂಲಕ ಟೋಲ್ ಪಾವತಿಗಳನ್ನು ಸರಳಗೊಳಿಸುತ್ತದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್: ಸಕ್ರಿಯಗೊಳಿಸುವುದು ಮತ್ತು ಬಳಸುವುದು ಹೇಗೆ?
ಈ ವಾರ್ಷಿಕ ಪಾಸ್ ಅನ್ನು ಸಕ್ರಿಯಗೊಳಿಸಲು ಮತ್ತು ನವೀಕರಿಸಲು ಪ್ರತ್ಯೇಕ ಲಿಂಕ್ ಅನ್ನು ಶೀಘ್ರದಲ್ಲೇ ರಾಜ್‌ಮಾರ್ಗ್ ಯಾತ್ರಾ ಅಪ್ಲಿಕೇಶನ್ ಹಾಗೂ NHAI (ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ) ಮತ್ತು MoRTH (ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ) ಅಧಿಕೃತ ವೆಬ್‌ಸೈಟ್‌ಗಳಲ್ಲಿ ಲಿಂಕ್ ಸಿಗುತ್ತದೆ ಇದರ ಮೂಲಕ ನೀವು ಫಾಸ್ಟ್‌ಟ್ಯಾಗ್ ಪಾಸ್ ಗಳನ್ನು ಆಕ್ಟವ್ ಮಾಡಿಕೊಳ್ಳಬಹುದು.
ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಪ್ರಯೋಜನಗಳು..?
ಹೊಸ ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್ ಟೋಲ್ ಪ್ಲಾಜಾಗಳಲ್ಲಿ ಕಾಯುವ ಸಮಯ, ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ನೀತಿಯು ಟೋಲ್ ಪ್ಲಾಜಾಗಳಲ್ಲಿನ ವಿವಾದಗಳನ್ನು ಸಹ ಕಡಿಮೆ ಮಾಡುತ್ತದೆ. ಹೊಸ ಉಪಕ್ರಮವು 60 ಕಿ.ಮೀ ವ್ಯಾಪ್ತಿಯೊಳಗಿನ ಟೋಲ್ ಪ್ಲಾಜಾಗಳಿಗೆ ಸಂಬಂಧಿಸಿದ ದೀರ್ಘಕಾಲದ ಕಳವಳಂತಹ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡುತ್ತೇವೆ.
ಇದು ಒಂದೇ ಕೈಗೆಟುಕುವ ವಹಿವಾಟಿನ ಮೂಲಕ ಟೋಲ್ ಪಾವತಿಗಳನ್ನು ಸರಳಗೊಳಿಸುತ್ತದೆ. ಕೇಂದ್ರ ಸರ್ಕಾರದ ಫಾಸ್ಟ್‌ಟ್ಯಾಗ್ ನವೀಕರಣವು ಕೋಟ್ಯಂತರ ಖಾಸಗಿ ವಾಹನ ಮಾಲೀಕರಿಗೆ ವೇಗವಾಗಿ ಮತ್ತು ಸುಗಮ ಪ್ರಯಾಣದ ಅನುಭವವನ್ನು ನೀಡಲು ಸಹಕಾರಿಯಾಗುತ್ತದೆ.
ಹೆದ್ದಾರಿಯ ಬಳಕೆಗೆ ಎರಡು ಪಾವತಿ ಮಾದರಿಗಳನ್ನು ನಿಗದಿ
ನೀವು ಹೆದ್ದಾರಿಯಲ್ಲಿ ಪಾವತಿಸುತ್ತಿದ್ದರೆ ಮೊದಲ ಆಯ್ಕೆ ವಾರ್ಷಿಕ ಪಾಸ್ ಆಗಿದ್ದು, ಪ್ರತಿ ವರ್ಷ 3,000 ರೂ.ಗಳ ಪಾವತಿ ಅಗತ್ಯವಿರುತ್ತದೆ ಇದು ಬಳಕೆದಾರರಿಗೆ ಟೋಲ್ ರಸ್ತೆಗಳಿಗೆ ಅನಿಯಮಿತ ಪ್ರವೇಶವನ್ನು ಒದಗಿಸುತ್ತದೆ.
ಎರಡನೆಯದು ದೂರ-ಆಧಾರಿತ ಮಾದರಿಯಾಗಿದ್ದು, ಇದರ ಅಡಿಯಲ್ಲಿ ಬಳಕೆದಾರರು 100 ಕಿಲೋಮೀಟರ್‌ಗಳಿಗೆ 50 ರೂ.ಗಳ ಸ್ಥಿರ ದರವನ್ನು ಪಾವತಿಸುತ್ತಾರೆ. ಆಗಾಗ್ಗೆಹೆದ್ದಾರಿಗಳನ್ನು ಬಳಸುವಂತಹ ಪ್ರಯಾಣಿಕರಿಗೆ ದೂರ-ಆಧಾರಿತ ಮಾದರಿ ಪಾವತಿ ಸೂಕ್ತ.
ಫಾಸ್ಟ್‌ಟ್ಯಾಗ್ ಎಂದರೇನು?
ವಾಹನವು ಚಲಿಸುತ್ತಿರುವಾಗ ಟೋಲ್ ಪಾವತಿಗಳನ್ನು ಮಾಡಲು ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFIC) ತಂತ್ರಜ್ಞಾನವನ್ನು ಬಳಸುವ ಸಾಧನ ಇದು. ಈ ಸಾಧನವನ್ನು ವಾಹನದ ವಿಂಡ್‌ಸ್ಕ್ರೀನ್‌ನಲ್ಲಿ ಅಂಟಿಸಲಾಗುತ್ತದೆ ಮತ್ತು ಸ್ಟಿಕ್ಕರ್‌ನಂತೆ ಕಾಣುತ್ತದೆ. ವಾಹನವು ಟೋಲ್‌ಗೆ ಹತ್ತಿರ ಬಂದಾಗಲೆಲ್ಲಾ, ಸ್ಥಿರವಾದ ಫಾಸ್ಟ್‌ಟ್ಯಾಗ್ (RFID ಟ್ಯಾಗ್) ವಾಹನ ಮಾಲೀಕರಿಗೆ FASTag ಗೆ ಲಿಂಕ್ ಮಾಡಲಾದ ಖಾತೆಯಿಂದ ನೇರವಾಗಿ ಪಾವತಿ ಮಾಡಲು ಅನುಮತಿಸುತ್ತದೆ.
ಭಾರತ ಸರ್ಕಾರದ ಪ್ರಕಾರ ಫಾಸ್ಟ್‌ಟ್ಯಾಗ್‌ನ್ನು ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು (NH ಗಳು) ಮತ್ತು ಭಾರತದ 100 ಕ್ಕೂ ಹೆಚ್ಚು ರಾಜ್ಯ ಹೆದ್ದಾರಿ ಟೋಲ್ ಪ್ಲಾಜಾಗಳು ಸೇರಿದಂತೆ 700 ಕ್ಕೂ ಹೆಚ್ಚು ಟೋಲ್ ಪ್ಲಾಜಾಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.


Click it and Unblock the Notifications