ಬೆಂಗಳೂರು, ಮಾ. 11: ನಗರದ ಬನಶಂಕರಿಯಲ್ಲಿರುವ ಫಿಡಿಲಿಟಸ್ ಕಾರ್ಪ್ ಸಂಸ್ಥೆ ಮಹಿಳಾ ಉದ್ಯೋಗಿಗಳಿಗೆ ಕುದುರೆ ಸಾರೋಟಿನಲ್ಲಿ ಮೆರವಣಿಗೆ ನಡೆಸುವ ಮೂಲಕ ವಿಶ್ವ ಮಹಿಳಾ ದಿನಾಚರಣೆಯನ್ನು ವಿನೂತನವಾಗಿ ಆಚರಿಸಿದೆ.
ಬನಶಂಕರಿಯ ಫಿಡಿಲಿಟಿಸ್ ಕಾರ್ಪ್ ಸಂಸ್ಥೆಯ ಪುರುಷ ಉದ್ಯೋಗಿಗಳು ಮಹಿಳಾ ಉದ್ಯೋಗಿಗಳನ್ನು ಕಚೇರಿಯೊಳಗೆ ವಿಭಿನ್ನವಾಗಿ ಸ್ವಾಗತಿಸಿದ್ದಾರೆ. ಮಹಿಳಾ ಉದ್ಯೋಗಿಗಳನ್ನು ಕುದುರೆ ಸಾರೋಟಿನ ಮೂಲಕ ಸ್ವಾಗತಿಸಿದ್ದಾರೆ. ಕಚೇರಿ ಬಾಗಿಲಿಗೆ ಆಗಮಿಸುತ್ತಿದ್ದಂತೆ ಪುರುಷರು ಡೋಲು ಬಾರಿಸಿ, ಕುಣಿದು ಕುಪ್ಪಳಿಸಿ ಮಹಿಳೆಯರನ್ನ ಕಚೇರಿಗೆ ಬರಮಾಡಿಕೊಂಡಿದ್ದಾರೆ.
ಈ ವೇಳೆ ಫಿಡಿಲಿಟಸ್ ಕಾರ್ಪ್ ಸಂಸ್ಥಾಪಕ ಅಚ್ಯುತ್ ಗೌಡ ಮಾತನಾಡಿ, ಪುರುಷರಿಗೆ ಮಹಿಳೆಯರೇ ಸ್ಫೂರ್ತಿ, ಅವರಿಂದಲೇ ನಾವು. ಮಹಿಳೆಯರು ತಮ್ಮ ಜೀವನದಲ್ಲಿ ಅನೇಕ ಪಾತ್ರಗಳನ್ನ ನಿಭಾಯಿಸುತ್ತಾರೆ. ಆ ಎಲ್ಲಾ ಪಾತ್ರಗಳನ್ನ ಅವರು ಅಚ್ಚುಕಟ್ಟಾಗಿ ನಿರ್ವಸುತ್ತಾರೆ. ಈ ಒಂದು ದಿನಕ್ಕೆ ಮಾತ್ರ ಮಹಿಳಾ ದಿನಾಚರಣೆಯನ್ನ ಮೀಸಲಿಡಬಾರದು, ಪ್ರತಿನಿತ್ಯ ಅವರ ದಿನವನ್ನ ಸಂಭ್ರಮಿಸಬೇಕು. ನಾನು ಕೂಡ ಈ ಮಟ್ಟಕ್ಕೆ ಬೆಳೆಯಲು ನನ್ನ ಜೀವನದಲ್ಲಿರುವ ನನ್ನ ತಾಯಿ, ನನ್ನ ಮಡದಿ ಹಾಗೂ ನನ್ನ ಮಗಳು ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದಾರೆ" ಎಂದು ನೆನಪಿಸಿಕೊಂಡರು.

ಮಹಿಳೆ ಸಮಾಜದ ಶಕ್ತಿ, ಕುಟುಂಬದ ಕಣ್ಣು, ಸಮಾಜ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆ ಪ್ರಮುಖ ಪಾತ್ರ ವಹಿಸಿದ್ದಾಳೆ. ಹಿಂದಿನ ಕಾಲದಲ್ಲಿ ಬೆರಳಣಿಕೆಯಷ್ಟು ಮಹಿಳೆಯರು ಮಾತ್ರ ಮನೆಯಿಂದ ಹೊರಗೆ ಬಂದು ದುಡಿಯುತ್ತಿದ್ದರು. ಕಾಲ ಬದಲಾಗಿದೆ. ಮಹಿಳೆ ತಾನು ಎಲ್ಲವನ್ನೂ ನಿಭಾಯಿಸಬಲ್ಲೆ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ಗಡಿ ಕಾಯುವುದ್ರಿಂದ ಹಿಡಿದು ಕುಟುಂಬದ ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬಲ್ಲ ಶಕ್ತಿ, ತಾಳ್ಮೆ, ಉತ್ಸಾಹ, ಧೈರ್ಯ ಮಹಿಳೆಗಿದೆ. ಪುರುಷರ ಸರಿ-ಸಮಾನವಾಗಿ ನಿಂತಿರುವ ಮಹಿಳೆಯರು ಅನೇಕ ಉನ್ನತ ಹುದ್ದೆಗಳನ್ನು ಸಂಬಾಳಿಸುತ್ತಿದ್ದಾರೆ. ಕಾರ್ಪೊರೇಟ್ ವಲಯದಲ್ಲೂ ಇದು ಬೇರೆಡೆಗಿಂತ ಹೆಚ್ಚಾಗಿದೆ.


Click it and Unblock the Notifications