ತಿಂಗಳ ಮೊದಲ ದಿನ ಆರಂಭವಾಗುತ್ತಿದಂತೆ ಹಲವಾರು ಬದಲಾವಣೆಗಳು ಆಗುತ್ತಿವೆ ಅದರಲ್ಲೂ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಬದಲಾವಣೆಗಳು ಅಂತೂ ಆಗುತ್ತಲ್ಲೇ ಇರುತ್ತದೆ. ಹಾಗಿದ್ರೆ ಜೂನ್ 1 ರಿಂದ ಬದಲಾಗುವ ಹಣಕಾಸು ನಿಯಮಗಳು ಯಾವುವು..? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಹೌದು, ಜೂನ್ 1ರಿಂದ 6 ಪ್ರಮುಖ ನಿಯಮಗಳು ಬದಲಾವಣೆಯಾಗಲಿದ್ದು, ನಿಮ್ಮ ಜೇಬು, ಸೇವೆ ಹಾಗೂ ಹಣಕಾಸು ಯೋಜನೆಯ ಮೇಲೆ ನೇರ ಪರಿಣಾಮ ಬೀರಲಿದೆ. ಜೂನ್ 1ರಿಂದ EPFOನಲ್ಲಿ ಕೆಲಸ ಸುಲಭವಾಗುತ್ತದೆ, ಕ್ರೆಡಿಟ್ ಕಾರ್ಡ್ ಬಳಕೆಯ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಇನ್ನೂ ATMನಿಂದ ಹಣವನ್ನು ಹಿಂಪಡೆಯುವುದು ದುಬಾರಿಯಾಗುತ್ತದೆ. LPG ಸಿಲಿಂಡರ್ ದುಬಾರಿಯಾಗುವ ಸಾಧ್ಯತೆ ಇದೆ. FD ಬಡ್ಡಿದರಗಳನ್ನು ಮತ್ತಷ್ಟು ಕಡಿಮೆ ಆಗುವ ಸಾಧ್ಯತೆ ಇದೆ. GSಇನ್‌ವಾಯ್ಸ್ ನಿಯಮಗಳಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಎಲ್ಲಾದಕ್ಕೂ ಸಾರ್ವಜನಿಕರು ಸಿದ್ದವಾಗಿರಬೇಕು.

ಕ್ರೆಡಿಟ್ ಕಾರ್ಡ್ ಬಳಕೆ ನಿಯಮ ಬದಲಾವಣೆ
ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿದಂತೆ ಹಲವಾರು ಬದಲಾವಣೆಗಳು ಜಾರಿಗೆ ಬರುತ್ತಿವೆ. ಈ ಬದಲಾವಣೆಗಳಿಂದ ನಿಮ್ಮ ಹಣಕಾಸಿನ ಮೇಲೆ ಪ್ರಭಾವವನ್ನು ಬೀರಬಹುದು. ಆರ್ ಬಿಐ ಹೊಸ ನಿಯಮದಂತೆ ಕ್ರೆಡಿಟ್ ಕಾರ್ಡ್‌ನಿಂದ ಯಾವುದೇ ರೀತಿಯ ಬಿಲ್ ಅಥವಾ ಇಎಂಐ ಸ್ವಯಂ ಡೆಬಿಟ್‌ಗಳು ವಿಫಲವಾದರೆ ಶೇ. 2ರಷ್ಟ ದಂಡ ವಿಧಿಸಲಾಗುತ್ತದೆ ಎಂದು ಹೇಳಿದ್ಧಾರೆ. ವಿದ್ಯುತ್,ನೀರು ಇತರ ಸೌಲಭ್ಯ ಸೇವೆಗಳ ಬಿಲ್ ಪಾವತಿಗೆ ಹೆಚ್ಚುವರಿ ಶುಲ್ಕಗಳು ಕೂಡ ಹೆಚ್ಚಗಬಹುದು. ಜೊತಗೆ ಕ್ರಿಡಿಟ್ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ ನೀಡುವ ವಿಧಾನಗಳು ಸಹ ಬದಲಾಗಬಹುದು. ಆದರೆ ನೀವು ಮೊದಲಿ ಆಟೋ ಡಿಬಿಟ್ ಕಡೆಗೆ ಹೆಚ್ಚಿನ ಗಮನವನ್ನು ಕೊಡಿ.
EPFO 3.0 ಬಿಡುಗಡೆ
ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸದಸ್ಯರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಲು ಹೊಸ ಆವೃತ್ತಿ EPFO 3.0 ವ್ಯವಸ್ಥೆಯನ್ನು ಜೂನ್ 2025 ರಲ್ಲಿ ಜಾರಿಗೆ ತರಲು ಸಜ್ಜಾಗಿದೆ. ಈ ಹೊಸ ವ್ಯವಸ್ಥೆಯು ಭವಿಷ್ಯ ನಿಧಿ (PF) ಹಿಂಪಡೆಯುವಿಕೆಗಳನ್ನು ಸರಳಗೊಳಿಸುವುದು, KYC ನವೀಕರಣಗಳನ್ನು ವೇಗಗೊಳಿಸುವುದು ಮತ್ತು ಕ್ಲೈಮ್ ಪ್ರಕ್ರಿಯೆಯ ಸಮಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಎಟಿಎಂಗಳಿಂದ ಪಿಎಫ್ ಹಣವನ್ನು ಹಿಂಪಡೆಯುವ ಸೌಲಭ್ಯವೂ ಈ ತಿಂಗಳಿಂದ ಜಾರಿಗೆ ಬರಬಹುದು ಇದರಿಂದ ಪಿಎಫ್ ಖಾತೆದಾರಿಗೆ ಹೆಚ್ಚಿನ ಅನುಕೂಲವಾಗುತ್ತದೆ.
ಟಿಡಿಎಸ್ ಪ್ರಮಾಣಪತ್ರದ ಕೊನೆಯ ದಿನಾಂಕ
ಆದಾಯ ತೆರಿಗೆ ನಿಯಮದ ಪ್ರಕಾರ ತೆರಿಗೆದಾರರು ಜೂನ್ 15, 2025 ರೊಳಗೆ ಫಾರ್ಮ್ 16 ಮತ್ತು ಫಾರ್ಮ್ 16A ಸೇರಿದಂತೆ ತಮ್ಮ ಟಿಡಿಎಸ್ ಪ್ರಮಾಣಪತ್ರಗಳನ್ನು ಸ್ವೀಕರಿಸಬೇಕು.ನಿಖರವಾದ ತೆರಿಗೆ ಸಲ್ಲಿಕೆ ಮತ್ತು ಸಮನ್ವಯಕ್ಕೆ ಈ ಫಾರ್ಮ್‌ಗಳು ಅತ್ಯಗತ್ಯ .
ಆಕ್ಸಿಸ್ ಬ್ಯಾಂಕ್ ರಿವಾರ್ಡ್ಸ್ ಕ್ರೆಡಿಟ್ ಕಾರ್ಡ್ ನವೀಕರಣ
ಆಕ್ಸಿಸ್ ಬ್ಯಾಂಕ್ ತನ್ನ ರಿವಾರ್ಡ್ಸ್ ಕ್ರೆಡಿಟ್ ಕಾರ್ಡ್‌ನ ನಿಯಮಗಳನ್ನು ಜೂನ್ 20, 2025 ರಿಂದ ಬದಲಾವಣೆಯನ್ನು ಮಾಡಲಿದೆ. ರಿವಾರ್ಡ್ ಪಾಯಿಂಟ್‌ಗಳು ಮತ್ತು ಖರ್ಚು-ಆಧಾರಿತ ಶುಲ್ಕ ವಿನಾಯಿತಿಗಳ ಲೆಕ್ಕಾಚಾರವು ಈಗ ಸಾಂಪ್ರದಾಯಿಕ 4-ಅಂಕಿಯ ವ್ಯಾಪಾರಿ ಕೋಡ್‌ಗಳ ಬದಲಿಗೆ ಖರ್ಚು ವರ್ಗಗಳನ್ನು (ಬಾಡಿಗೆ, ವ್ಯಾಲೆಟ್ ಮತ್ತು ಇಂಧನದಂತಹ) ಆಧರಿಸಿರುತ್ತದೆ, ಇದು ಬಳಕೆದಾರರಿಗೆ ಅರ್ಹ ವಹಿವಾಟುಗಳನ್ನು ಅರ್ಥಮಾಡಿಕೊಳ್ಳಲು ಸುಲಭಗೊಳಿಸುತ್ತದೆ.
ಆಧಾರ್ ತಪ್ಪುಗಳ ತಿದ್ದುಪಡಿಗೆ ಅವಕಾಶ
ಆಧಾರ್ ವಿವರಗಳನ್ನು ಉಚಿತವಾಗಿ ನವೀಕರಿಸಲು ಯುಐಡಿಎಐ ಜೂನ್ 14, 2025 ರವರೆಗೆ ಗಡುವನ್ನು ವಿಸ್ತರಿಸಿದೆ, ಇದು ಹಿಂದಿನ ಡಿಸೆಂಬರ್ 14, 2024 ರ ಗಡುವಿನಿಂದ ವಿಸ್ತರಣೆಯಾಗಿದೆ. ಈ ದಿನಾಂಕದ ನಂತರ, ಆಧಾರ್ ಕೇಂದ್ರಗಳಲ್ಲಿ ಆಫ್‌ಲೈನ್ ನವೀಕರಣಗಳಿಗೆ ಶುಲ್ಕ ವಿಧಿಸಲಾಗುತ್ತದೆ. ಉಚಿತ ನವೀಕರಣ ಸೇವೆಯು myAadhaar ಪೋರ್ಟಲ್ ಮೂಲಕ ಮಾತ್ರ ಲಭ್ಯವಿದೆ. ಇಲ್ಲಿ ನೀವು ಉಚಿತವಾಗಿ ನಿಮ್ಮ ಆಧಾರ್ ಕಾರ್ಡ್ ನ ತಪ್ಪುಗಳನ್ನು ಸರಿಮಾಡಿಕೊಳ್ಳಬಹುದು.
LPG ಸಿಲಿಂಡರ್ ದುಬಾರಿಯಾಗುವ ಸಾಧ್ಯತೆ ಇದೆ
ಪ್ರತಿ ತಿಂಗಳ ಮೊದಲ ದಿನ ತೈಲ ಕಂಪನಿಗಳು ಬೆಲೆ ಪರಿಷ್ಕರಣೆಯನ್ನು ಮಾಡುತ್ತೇವೆ. ಆದರಿಂದ ತಿಂಗಳ ಮೊದಲ ದಿನ ಎಲ್‌ಪಿಜಿ ಸಿಲಿಂಡರ್ ದುಬಾರಿಯಾಗುವ ಸಾಧ್ಯತೆ ಇದೆ.
ಆರ್‌ಬಿಐ ಸಭೆ
ಜೂನ್ 6, 2025ರಂದು ನಡೆಯಲಿರುವ ಆರ್‌ಬಿಐ (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) ನ ಮೌಲ್ಯ ನೀತಿ ಸಮಿತಿಯ (Monetary Policy Committee) ಸಭೆ ಹಣಕಾಸು ಕ್ಷೇತ್ರದ ಮೇಲೆ ಬಹುಮುಖ್ಯ ಪರಿಣಾಮ ಬೀರುವ ಸಾಧ್ಯತೆಯಿದೆ. ಪ್ರಸ್ತುತ ಬ್ಯಾಂಕ್‌ಗಳು ಎಫ್‌ಡಿ ಮೇಲೆ ಶೇ. 6.5 ರಿಂದ ಶೇ. 7.5 ವರೆಗೆ ಬಡ್ಡಿಯನ್ನು ನೀಡುತ್ತದೆ. ಬಡ್ಡಿದ ವಿಚಾರದಲ್ಲಿ ಬದಲಾವಣೆಗಳು ಆಗುವ ಸಾಧ್ಯತೆ ಇರುತ್ತದೆ.


Click it and Unblock the Notifications