ತಿಂಗಳ ಮೊದಲ ದಿನ ಆರಂಭವಾಗುತ್ತಿದಂತೆ ಹಲವಾರು ಬದಲಾವಣೆಗಳು ಆಗುತ್ತಿವೆ ಅದರಲ್ಲೂ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಬದಲಾವಣೆಗಳು ಅಂತೂ ಆಗುತ್ತಲ್ಲೇ ಇರುತ್ತದೆ. ಹಾಗಿದ್ರೆ ಜುಲೈ 1 ರಿಂದ ಏನೆಲ್ಲಾ ಹಣಕಾಸು ನಿಯಮಗಳು ಬದಲಾಗುತ್ತೇವೆ ಎಂಬ ಹೆಚ್ಚಿನ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ ಬನ್ನಿ
ಹೌದು, ಇಂದಿನಿಂದ ಆದಾಯ ತೆರಿಗೆ ರಿಟರ್ನ್ಸ್, ಪ್ಯಾನ್ ಕಾರ್ಡ್‌ಗೆ ಆರ್ಧಾರ್ ಕಡ್ಡಾಯ, ರೈಲು ಟಿಕೆಟ್‌ಗಳನ್ನು ಬುಕ್ಕಿಂಗ್ ದರ ಹೆಚ್ಚಳ, ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮದಲ್ಲಿ ಬದಲಾವಣೆ, ಯುಪಿಐ ಪಾವತಿಯಲ್ಲಿ ಸ್ವೀಕರಿಸುವವರ ಹೆಸರು ನಿಮ್ಮಗೆ ಕಾಣುತ್ತದೆ, ಕ್ರೆಡಿಟ್ ಕಾರ್ಡ್ ಹೆಚ್ಚುವರಿ ಶುಲ್ಕ ಅನ್ವಯ,ಈ ಹೊಸ ನಿಯಮಗಳು ನೇರವಾಗಿ ಹಣಕಾಸಿನ ಮೇಲೆ ಪರಿಣಾಮವನ್ನು ಬೀರುತ್ತದೆ.

ಜುಲೈ 1ರಿಂದ ಜಾರಿಯಾಗುತ್ತಿರು ಹಣಕಾಸು ಬದಲಾವಣೆಗಳು ನಿಮ್ಮ ಜೇಬು,ಹಾಗೂ ಹಣಕಾಸು ಯೋಜನೆಯ ಮೇಲೆ ನೇರ ಪರಿಣಾಮ ಬೀರಲಿದೆ ಏನೆಲ್ಲಾ ಬದಲಾವಣೆ ಆಗಿದೆ ಎಂಬುದನ್ನು ಮುಂದೆ ಓದಿ..
ಹೊಸ ಪ್ಯಾನ್ ಕಾರ್ಡ್ ಅರ್ಜಿಗಳಿಗೆ ಆಧಾರ್ ಕಡ್ಡಾಯ
ಇಂದಿನಿಂದ ನೀವು ಹೊಸ ಪ್ಯಾನ್ ಕಾರ್ಡ್ ಅರ್ಜಿಯನ್ನು ಸಲ್ಲಿಸುತ್ತಿದ್ದರೆ ಆಧಾರ್ ಕಡ್ಡಾಯವಾಗಿದೆ. ಈ ಕುರಿತು ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಎಲ್ಲಾ ಹೊಸ ಪ್ಯಾನ್ ಕಾರ್ಡ್ ಅರ್ಜಿಗಳಿಗೆ ಆಧಾರ್ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ ಎಂದು ಅಧೀಕೃತವಾಗಿ ಮಾಹಿತಿಯನ್ನು ತಿಳಿಸಿದೆ.ಹೊಸ ಪ್ಯಾನ್ ಕಾರ್ಡ್ ಅರ್ಜಿ ಇಲ್ಲಿಯವರೆಗೆ,ಅರ್ಜಿದಾರರು ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಅಥವಾ ಜನನ ಪ್ರಮಾಣಪತ್ರದಂತಹ ಸರ್ಕಾರ ದಾಖಲೆಗಳನ್ನು ನೀಡಿ ಅರ್ಜಿಯನ್ನು ಸಲ್ಲಿಸಬಹುದಿತ್ತು. ಆದರೆ ಇಂದಿನಿಂದ ಆಧಾರ್ ಕಡ್ಡಾಯವನ್ನು ಮಾಡಲಾಗಿದೆ. ಪ್ರಸ್ತುತ ಪ್ಯಾನ್ ಕಾರ್ಡ್ ಹೊಂದಿರುವವರು ಡಿಸೆಂಬರ್ 31, 2025 ರೊಳಗೆ ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬೇಕು. ತೆರಿಗೆ ವಂಚನೆಗಾಗಿ ಬಳಸುವ ನಕಲಿ ಪ್ಯಾನ್‌ಗಳನ್ನು ತೆಗೆದುಹಾಕಲು ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿದೆ. ನಿಮ್ಮ ಪ್ಯಾನ್ ಇನ್ನೂ ಲಿಂಕ್ ಆಗಿಲ್ಲದಿದ್ದರೆ, ಆದಾಯ ತೆರಿಗೆ ಸಲ್ಲಿಕೆಯಲ್ಲಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ತತ್ಕಾಲ್ ಟಿಕೆಟ್ ಬುಕಿಂಗ್‌ಗೆ ಆಧಾರ್ ಕಡ್ಡಾಯ
ರೈಲ್ವೆ ಸಚಿವಾಲಯವು ತತ್ಕಾಲ್ ರೈಲು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಲು ಹೊಸ ನಿಯಮವನ್ನು ಅಧಿಕೃತವಾಗಿ ಘೋಷಣೆಯನ್ನು ಮಾಡಿದ್ದು, ಇಂದಿನಿಂದ ತತ್ಕಾಲ್ ಟಿಕೆಟ್ ಬುಕಿಂಗ್ ಮಾಡಲು ಆಧಾರ್ ಲಿಂಕ್ ಅನ್ನು ಕಡ್ಡಾಯ ಮಾಡಲಾಗಿದೆ.ಆಧಾರ್ ಲಿಂಕ್ ಇಲ್ಲದಿದ್ದರೆ ತತ್ಕಾಲ್ ಟಿಕೆಟ್ ಸಿಗಲ್ಲ. ಆಧಾರ್ ಲಿಂಕ್ ಮಾಡಿದ ಪ್ರಯಾಣಿಕರಿ ಮಾತ್ರ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ತತ್ಕಾಲ್ ಸೀಟುಗಳನ್ನು ಬುಕ್ ಮಾಡಲು ಅವಕಾಶವನ್ನು ನೀಡಲಾಗಿದೆ.
ಜುಲೈ 15 ರಿಂದ ಆನ್‌ಲೈನ್ ಮತ್ತು ಕೌಂಟರ್ ಬುಕಿಂಗ್‌ಗಳಿಗೆ ಎರಡು ನಿಯಮಗಳನ್ನು ಕಡ್ಡಾಯವಾಗಿಸಿದೆ. ಇದರಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಒಟಿಪಿ (OTP)ಯನ್ನು ಕೂಡ ಕಡ್ಡಾಯಗೊಳಿಸಲಾಗಿದೆ.
ಕ್ರೆಡಿಟ್ ಕಾರ್ಡ್ ಶುಲ್ಕಗಳಲ್ಲಿ ಬದಲಾವಣೆಗಳು
ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಸೇರಿದಂತೆ ಬ್ಯಾಂಕ್‌ಗಳಲ್ಲಿ ಇಂದಿನಿಂದ ಶುಲ್ಕಗಳು, ಹೊಸನಿಯಮಗಳು ಜಾರಿಗೆ ಬರುತ್ತವೆ. ಎಸ್‌ಬಿಐ ಕ್ರೆಡಿಟ್ ಕಾರ್ಡ್ ಗಳು ಎಲೈಟ್ ಮತ್ತು ಎಸ್‌ಬಿಐ ಮೈಲ್ಸ್‌ನಂತಹ ಕಾರ್ಡ್‌ಗಳಲ್ಲಿ ನೀಡಲಾಗುವ ವಿಮಾ ಪ್ರಯೋಜನವನ್ನು ಕ್ಲೋಸ್ ಮಾಡಲಾಗಿದೆ. ಎಸ್‌ಬಿಐ ಮಾಸಿಕ ಬಿಲ್‌ಗಳಿಗೆ ಕನಿಷ್ಠ ಬಾಕಿ ಮೊತ್ತವನ್ನು (MAD) ಲೆಕ್ಕಾಚಾರ ಮಾಡುವ ಹೊಸ ವಿಧಾನದಲ್ಲೂ ಕೂಡ ಬದಲಾವಣೆಯನ್ನು ಮಾಡಲಾಗಿದೆ. ಐಸಿಐಸಿಐ ಬ್ಯಾಂಕ್ ಬಳಕೆದಾದರು ಉಚಿತ ವಹಿವಾಟು ಮಿತಿಯನ್ನು ಮೀರಿ ನಗದು ಹಿಂಪಡೆದ್ದರೆ ಇಂದಿನೀಮದ ಪ್ರತಿ ವಹಿವಾಟಿಗೆ 23 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ.ಎಚ್ ಡಿ ಎಫ್ ಸಿ ಬ್ಯಾಂಕ್ ಬಳಕೆದಾದರು ಇಂದಿನಿಂದ ಪೇಟಿಎಂ, ಪೋನ್ ಪೇ, ಗೂಗಲ್ ಪೇ ಮುಂತಾದ ಮೂರನೇ ವ್ಯಕ್ತಿಯ ಪ್ಲಾಟ್‌ಫಾರ್ಮ್‌ಗಳ ಮೂಲಕ ತಮ್ಮ ಬಿಲ್‌ಗಳನ್ನು ಪಾವತಿಸುವಾಗ ಹೆಚ್ಚುವರಿ ಶುಲ್ಕಗಳನ್ನು ಕಟ್ಟಬೇಕಾಗುತ್ತದೆ. ನೀವು ಇಂತಹ ಪಾವತಿಗಳನ್ನು ಮಾಡಿದ್ದರೆ ಶೇ 1 ರಷ್ಟು ಶುಲ್ಕವನ್ನು ಕಟ್ಟಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ ಯುಟಿಲಿಟಿ ಬಿಲ್ ಪಾವತಿಗಳಿಗೆ ಹೆಚ್ಚುವರಿ ಶುಲ್ಕಗಳುನ್ನು ಬಿಧಿಸಲಾಗುತ್ತದೆ.
ರೈಲ್ವೆ ಟಿಕೆಟ್ ದರ ಏರಿಕೆ
ರೈಲು ಪ್ರಯಾಣ ಇಂದಿನಿಂದ ದುಬಾರಿಯಾಗಿದೆ. ಭಾರತೀಯ ರೈಲ್ವೆ ಸಚಿವವಾಲಯ ಕಾರ್ಯಾಚರಣೆಯ ವೆಚ್ಚವನ್ನು ಸರಿದೂಗಿಸಲು ಸ್ಲೀಪರ್ ಮತ್ತು ಎಸಿ ಕೋಚ್‌ಗಳಲ್ಲಿ ದರ ಏರಿಕೆಯನ್ನು ಜಾರಿಗೆ ತರುವುದಾಗಿ ಹೇಳಿತ್ತು. ಅದರಂತೆ ಜುಲೈ 1 ರಿಂದ ರೈಲ್ವೆ ಟಿಕೆಟ್ ಕೂಡ ಸ್ವಲ್ಪ ಮಟ್ಟದಲ್ಲಿ ಏರಿಕೆಯಾಗುತ್ತದೆ.ಈ ಹೆಚ್ಚಳವು ಸ್ವಲ್ಪವೆನಿಸಿದರೂ ದೂರದ ಪ್ರಯಾಣಕ್ಕೆ ಮಾಡುವವರಿಗೆ ದುಬಾರಿಯಾಗುತ್ತದೆ. ರೈಲುನಲ್ಲಿ ಸ್ಲೀಪರ್ ಕೋಚ್ ದರಗಳು ಪ್ರತಿ ಕಿ.ಮೀ.ಗೆ 0.01 ರೂ. ಮತ್ತು ಎಸಿ ಕೋಚ್‌ಗಳಲ್ಲಿ ದರಗಳು ಪ್ರತಿ ಕಿ.ಮೀ.ಗೆ 0.02 ರೂ. ಹೆಚ್ಚಾಗುತ್ತವೆ.
ತತ್ಕಾಲ್ ಟಿಕೆಟ್ ಬುಕಿಂಗ್‌ಗೆ ನಿಯಮದಲ್ಲಿ ಬದಲಾವಣೆ
ರೈಲ್ವೆ ಸಚಿವಾಲಯವು ತತ್ಕಾಲ್ ರೈಲು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಲು ಹೊಸ ನಿಯಮವನ್ನು ಅಧಿಕೃತವಾಗಿ ಪ್ರಕಟಿಸಿದೆ.ಈ ನಿಯಮಗಳು ಜುಲೈ 1ರಿಂದಲ್ಲೇ ಜಾರಿಗೆ ಬರುತ್ತೇವೆ.ಈ ನಿಯದ ಪ್ರಕಾರ IRCTC ಖಾತೆಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವುದು ಕಡ್ಡಾಯ. ಆಧಾರ್ ಲಿಂಕ್ ಇಲ್ಲದಿದ್ದರೆ ತತ್ಕಾಲ್ ಟಿಕೆಟ್ ಸಿಗಲ್ಲ. ಆಧಾರ್ ಲಿಂಕ್ ಮಾಡಿದ ಪ್ರಯಾಣಿಕರಿ ಮಾತ್ರ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ತತ್ಕಾಲ್ ಸೀಟುಗಳನ್ನು ಬುಕ್ ಮಾಡಲು ಅವಕಾಶವನ್ನು ನೀಡಲಾಗಿದೆ.
ಐಟಿಆರ್ ಸಲ್ಲಿಕೆ ಗಡುವು ವಿಸ್ತರಣೆ
ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವ ಗಡುವನ್ನು ಜುಲೈ 31 ರಿಂದ ಸೆಪ್ಟೆಂಬರ್ 15 ರವರೆಗೆ ವಿಸ್ತರಣೆಯನ್ನು ಮಾಡಲಾಗಿದೆ.
ಯುಪಿಐ ಪಾವತಿಯಲ್ಲಿ ಸ್ವೀಕರಿಸುವವರ ಹೆಸರು ಕಾಣುತ್ತದೆ.
ನೀವು ಯುಪಿಐ ಮೂಲಕ ಇಹಣವನ್ನು ಪಾವತಿ ಮಾಡಿದ್ದರೆ ನಾವು ಯಾರಿಗೆ ಹಣವನ್ನು ವರ್ಗಾಹಿಸಿದ್ಧೆವೆ ಎಂಬುವುದು ಅವರ ಹೆಸಗರಿನ ಮೂಕಲ ತಿಳಿಯುತ್ತದೆ. ಈ ನಿಯಮವನ್ನು ಜಾರಿಗೊಳಿಸಲು ಎಲ್ಲಾ ಯುಪಿಐ ಅಪ್ಲಿಕೇಶನ್‌ಗಳಿಗೆ ಜೂನ್ 30ರ ಗಡುವನ್ನು ನೀಡಲಾಗಿತ್ತು. ಇಂದಿನ ಯುಪಿಐ ಪಾವತಿಯಲ್ಲಿ ಈ ಬದಲಾವಣೆಯನ್ನು ಕಾಣಬಹುದು.
ಒಟ್ಟಾರೆ, ಹೊಸ ನಿಯಮಗಳ ಈ ಬದಲಾವಣೆಗಳು ಸಾಮಾನ್ಯ ಜನರ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಹೀಗಾಗಿ ಎಲ್ಲಾದಕ್ಕೂ ಸಿದ್ದರಾಗಿ


Click it and Unblock the Notifications