ಎಲ್ಲಾದರೂ ತುರ್ತಾಗಿ ಹೋಗುವಾಗ, ಜಾತ್ರೆ ಸಮಾರಂಭಗಳಲ್ಲಿ ಲಕ್ಷಾಂತರ ಬೆಲೆ ಬಾಳುವ ಸ್ಮಾರ್ಟ್‌ಫೋನ್‌ಗಳನ್ನು ಕಳೆದುಕೊಂಡುಬಿಡುತ್ತೇವೆ. ಇನ್ನೂ ಕೆಲವೊಮ್ಮೆ ಕಳ್ಳರ ಕಳ್ಳಾಟದಿಂದಾಗಿ ಕಿಸೆಯಲ್ಲಿದ್ದ ಸ್ಮಾರ್ಟ್‌ಫೋನ್ ಕ್ಷಣಮಾತ್ರದಲ್ಲಿ ಮಾಯವಾಗುತ್ತೆ. ಈ ಎರಡೂ ಸಂದರ್ಭಗಳಲ್ಲೂ ಚಿಂತೆ ಮಾಡುವುದಲ್ಲದೇ, ಅದನ್ನು ಹುಡುಕೋದು ಹೇಗೆ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಇನ್ನು ಪೊಲೀಸ್ ಪ್ರಕರಣ ದಾಖಲಿಸೋದು ವ್ಯರ್ಥ ಎಂಬ ಭಾವನೆ ಕೆಲವರಲ್ಲಿದ್ದರೆ, ಇನ್ನೂ ಕೆಲವರು ಕಳೆದ ಹೋದ ಸ್ಮಾರ್ಟ್‌ಫೋನ್ ಹುಡುಕಾಟ ನಡೆಸುವ ಪ್ರಯತ್ನವೂ ಮಾಡಲ್ಲ. ಆದರೆ ಇದೀಗ ಕಳೆದಹೋದ ಸ್ಮಾರ್ಟ್‌ಪೋನ್ ಅನ್ನು ಕೇವಲ ಒಂದು ಆಪ್ ಮೂಲಕ ಪತ್ತೆ ಮಾಡಬಹುದು.

ಹೌದು, ಬೆಂಗಳೂರಿನಂತಹ ಮಹಾನಗರಗಳಲ್ಲಿ ಸ್ಮಾರ್ಟ್‌ಫೋನ್ ಕಳೆದುಹೋದ್ರೆ, ಮತ್ತೆ ಸಿಗುತ್ತೆ ಅನ್ನೋದು ಕನಸು. ಒಂದು ವೇಳೆ ಸಿಕ್ರೆ ಅವರಷ್ಟು ಪುಣ್ಯವಂತರೂ ಯಾರೂ ಇಲ್ಲ. ಆದ್ರೆ ಇನ್ಮೇಲೆ ಚಿಂತೆ ಮಾಡ್ಬೇಕಾಗಿಲ್ಲ, ಕೇವಲ ಒಂದೇ ಒಂದು ಆಪ್‌ನಿಂದ ನಿಮ್ಮ ಕಳೆದುಹೋದ ಸ್ಮಾರ್ಟ್‌ಫೋನ್ ಅನ್ನು ಪತ್ತೆ ಮಾಡಬಹುದು. ಹೇಗೆ ಎಂಬುದರ ಮಾಹಿತಿ ಇಲ್ಲಿದೆ ಓದಿ.
ಕಳೆದುಹೋದ ಸ್ಮಾರ್ಟ್‌ಫೋನ್ ಅನ್ನು ಹೀಗೆ ಪತ್ತೆ ಮಾಡಿ!
ಬೆಂಗಳೂರು ನಗರ ಪೊಲೀಸರೇ ಇದೀಗ ಸಾರ್ವಜನಿಕರಿಗಾಗಿ ಆಪ್ ಒಂದನ್ನು ಪರಿಚಯಿಸಿದ್ದು, ಈ ಮೂಲಕ ಯಾವುದೇ ದೂರನ್ನು ಈ ಅಪ್ಲಿಕೇಶನ್ ಮೂಲಕ ಪಡೆಯಬಹುದು. ಇನ್ನು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ "ಸಹಾಯವಾಗಲಿ, ದೂರಾಗಲಿ ಅಥವಾ ನೆರವಾಗಲಿ- KSP App ನಿಮ್ಮನ್ನು ಪೊಲೀಸರೊಂದಿಗೆ ನೇರವಾಗಿ ಸಂಪರ್ಕಿಸುತ್ತದೆ. ಸ್ಮಾರ್ಟ್ ಸಿಟಿ... ಸ್ಮಾರ್ಟ್ ಸುರಕ್ಷತೆ" ಎಂದು ಬರೆದುಕೊಂಡು ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದೆ. ಈ ಮೂಲಕ ಯಾವುದೇ ದೂರನ್ನಾಗಲಿ, ಪೋನ್ ಕಳೆದುಕೊಂಡರೂ ಈ ಆಪ್‌ನಲ್ಲಿ ದೂರು ನೀಡುವ ಮೂಲಕ ಪತ್ತೆ ಮಾಡುವಂತೆ ಮಾಡಬಹುದು.
ಪೊಲೀಸ್ ಇಲಾಖೆಯ ಈ ಅಪ್ಲಿಕೇಶನ್‌ನಿಂದ ಸಾರ್ವಜನಿಕರಿಗೆ ಹಲವು ರೀತಿಯಲ್ಲಿ ನೆರವಾಗಲಿದೆ. ಅಂದರೆ ಈ ಒಂದು ಆಪ್‌ನಲ್ಲಿ ಸಾರ್ವಜನಿಕರು ಹಲವು ದೂರನ್ನು ಸಲ್ಲಿಸಬಹುದು. ಅಲ್ಲದೇ ಮೊಬೈಲ್ ಕಳೆದುಹೋದರೂ ಜನರು ಈ ಆಪ್ ಮೂಲಕ ದೂರು ನೀಡುವ ಮೂಲಕ ತಕ್ಷಣ ಪತ್ತೆ ಮಾಡುವಂತೆ ಮಾಡಬಹುದು.
ಬೆಂಗಳೂರು ಜನರೂ ಆಗಬಹುದು ಟ್ರಾಫಿಕ್ ಪೊಲೀಸ್!
ಬೆಂಗೂರು ಸಂಚಾರ ಪೊಲೀಸರು ಇದೀಗ ಸಾರ್ವಜನಿಕರಿಗಾಗಿ ಹೊಸ ಅಭಿಯಾನ ಶುರು ಮಾಡಿದೆ. ಈ ಮೂಲಕ ಸಾರ್ವಜನಿಕರೂ ಒಂದು ದಿನ ಟ್ರಾಫಿಕ್ ಕಂಟ್ರೋಲ್ ಮಾಡಬಹುದು. ಸಾರ್ವಜನಿಕರನ್ನೂ ಸಂಚಾರ ದಟ್ಟಣೆಗೆ ಸ್ವಯಂ ಸೇವಕರನ್ನಾಗಿ ಬಳಸಿಕೊಳ್ಳುವ ಉದ್ದೇಶದಿಂದ ಬೆಂಗಳೂರು ಟ್ರಾಫಿಕ್ ಪೊಲೀಸರು ಹೊಸ ಅಭಿಯಾನವನ್ನು ಜಾರಿಗೆ ತರಲು ಸಜ್ಜಾಗಿದೆ. ನವೆಂಬರ್ ಅಂತ್ಯದೊಳಗೆ ಈ ಅಭಿಯಾನ ಆಯೋಜನೆಯಾಗಲಿದೆ ಎಂದು ವರದಿಯಾಗಿದೆ.
"Be a Traffic Cop For a Day" ಎಂಬ ಅಭಿಯಾನವನ್ನು ಆಯೋಜಿಸಲು ಬೆಂಗಳೂರು ಟ್ರಾಫಿಕ್ ಪೊಲೀಸರು ನಿರ್ಧರಿಸಿದ್ದಾರೆ. ಈ ಅಭಿಯಾನ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ, ಸಂಚಾರ ಪೊಲೀಸರು ಎದುರಿಸುವ ಸವಾಲುಗಳ ಬಗ್ಗೆ ಸಾರ್ವಜನಿಕರಿಗೂ ಅನುಭವವಾಗುವಂತೆ ಮಾಡಲಿದೆ. ಈ ಅಭಿಯಾನದಲ್ಲಿ ಭಾಗವಹಿಸಲು ಇಚ್ಛಿಸುವವರು 18 ವರ್ಷ ಮೇಲ್ಪಟ್ಟವರಾಗಿರಬೇಕು. ಅಲ್ಲದೇ ಬೆಂಗಳೂರು ಅಸ್ಟ್ರಾಮ್ ಮೊಬೈಲ್ ಆಪ್ ಮೂಲಕ (Astram App) ರಿಜಿಸ್ಟರ್ ಮಾಡಿಕೊಂಡಿರಬೇಕು.


Click it and Unblock the Notifications