ನಮ್ಮ ಮೆಟ್ರೋಗೆ ಚಾಲಕರಹಿತ ಮೆಟ್ರೋದ ಬೋಗಿಗಳ ರವಾನೆಯನ್ನು ಶೀಘ್ರಗೊಳಿಸುವ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೋ ತಂಡವು ಇತ್ತೀಚೆಗೆ ಚೀನಾಕ್ಕೆ ಪ್ರವಾಸ ಕೈಗೊಂಡಿದೆ. ಈಗ ನೆರೆಯ ದೇಶದಿಂದ ಸಂಪೂರ್ಣವಾಗಿ ಸಿದ್ಧವಾಗಿರುವ ಚಾಲಕ ರಹಿತ ರೈಲು ನವೆಂಬರ್ 20 ರಂದು ತಲುಪಲಿದೆ.
ಸಮುದ್ರ ಮಾರ್ಗವಾಗಿ ಚೆನ್ನೈ ಬಂದರಿಗೆ ಮೊದಲು ಬರಲಿದ್ದು, ಅಲ್ಲಿಂದ ಒಂದು ತಿಂಗಳ ಒಳಗಾಗಿ ಬೆಂಗಳೂರಿಗೆ ಬೋಗಿಗಳು ತಲುಪಲಿದೆ. ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಮೂಲಕ ಆರ್‌ವಿ ರಸ್ತೆ- ಬೊಮ್ಮಸಂದ್ರ ಲೈನ್ (ಹಳದಿ ರೇಖೆ) ಪ್ರಾರಂಭವು ಈ ರೈಲಿನ ಆಗಮನಕ್ಕಾಗಿ ಕಾಯುತ್ತಿದೆ. ಈಗಾಗಲೇ ಗಡುವು ದಾಟಿ ಸಾಗಿದೆ.

19.15 ಕಿಮೀ ನ ರೀಚ್-5 ಎಲಿವೇಟೆಡ್ ಲೈನ್ ಮೆಟ್ರೋ ನೆಟ್‌ವರ್ಕ್‌ಗೆ ದಿನಕ್ಕೆ ಸರಾಸರಿ 7.5 ಲಕ್ಷ ಪ್ರಯಾಣಿಕರು ಬರುವೆಡೆ ಹೆಚ್ಚುವರಿಯಾಗಿ ಸುಮಾರು 1.5 ಲಕ್ಷ ದೈನಂದಿನ ಪ್ರಯಾಣಿಕರು ಬರುವ ನಿರೀಕ್ಷೆಯಿದೆ. ಇದು ಜಯದೇವ ಆಸ್ಪತ್ರೆಯಲ್ಲಿ ಇಂಟರ್‌ಚೇಂಜ್‌ನೊಂದಿಗೆ 16 ನಿಲ್ದಾಣಗಳನ್ನು ಹೊಂದಿರುತ್ತದೆ. ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್‌ಗೆ ಡಬಲ್ ಡೆಕ್ಕರ್ ಫ್ಲೈಓವರ್ ಅನ್ನು ಹೊಂದಿರುತ್ತದೆ.
ಮೆಟ್ರೋ ಅಧಿಕಾರಿಗಳು ಹೇಳುವುದೇನು?
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್, "ಎಲ್ಲವೂ ಯೋಜಿಸಿದಂತೆ ನಡೆದರೆ, ಮೊದಲ ರೈಲು ಸೆಟ್ ನವೆಂಬರ್ 20 ರಂದು ಚೀನಾದಿಂದ ಚೆನ್ನೈಗೆ ಹೊರಡಲಿದೆ. ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ರಸ್ತೆ ಮೂಲಕ ಬೆಂಗಳೂರಿಗೆ ತರಲಾಗುವುದು," ಎಂದು ತಿಳಿಸಿದರು.
"ಡಿಸೆಂಬರ್ 20 ಅಥವಾ ಅದಕ್ಕೂ ಮೊದಲು ರೈಲು ಇಲ್ಲಿಗೆ ಬರಲಿದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ನಾವು ಜನವರಿ 2024 ರಿಂದ ಮೂರು ತಿಂಗಳವರೆಗೆ ಪ್ರಯೋಗಗಳನ್ನು ಪ್ರಾರಂಭಿಸಬಹುದು. ಮೆಟ್ರೋ ರೈಲು ಸುರಕ್ಷತೆಗಾಗಿ ಆಯುಕ್ತರು ಒಪ್ಪಿಗೆ ನೀಡಿದ ನಂತರ ರೀಚ್-5 ಗಾಗಿ ಏಪ್ರಿಲ್ 2024 ರ ಗಡುವನ್ನು ಪೂರೈಸಲಾಗುತ್ತದೆ," ಎಂದು ಅಂಜುಮ್ ಪರ್ವೇಜ್ ಮಾಹಿತಿ ನೀಡಿದರು.
12 ಕೋಚ್‌ಗಳ ಶೆಲ್‌ಗಳು 25 ದಿನಗಳ ಹಿಂದೆ ಕೋಲ್ಕತ್ತಾ ಬಳಿಯ ಟಿಟಾಗರ್ ವ್ಯಾಗನ್‌ಗೆ ಬಂದಿದ್ದು, ಅವುಗಳನ್ನು ಎರಡು ಹೊಸ ರೈಲುಗಳಾಗಿ ಸಿದ್ಧಪಡಿಸಲು ವಿವಿಧ ಸೌಲಭ್ಯಗಳನ್ನು ಅಳವಡಿಸಬೇಕಾಗುತ್ತದೆ ಎಂದು ಪರ್ವೇಜ್ ಹೇಳಿದರು.
"ಇದು ಒಂದು ಸೂಕ್ಷ್ಮ ಕಾರ್ಯವಾಗಿದೆ. ಮುಂದಿನ ವರ್ಷ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ," ಎಂದು ತಿಳಿಸಿದರು. ಇನ್ನು ಈ ಮಾರ್ಗದಲ್ಲಿಯೇ ಏಳು ರೈಲುಗಳ ಅಗತ್ಯವಿದೆ. ಮತ್ತೊಬ್ಬ ಹಿರಿಯ ಅಧಿಕಾರಿ, ನಿಎಂಆರ್‌ಸಿಎಲ್ ತಂಡದ ಭೇಟಿಯ ಮುಖ್ಯ ಉದ್ದೇಶವೆಂದರೆ ರೈಲು ಅಲ್ಲಿ ಪರೀಕ್ಷೆ ವೇಳೆ ಸರಿಯಾಗಿದೆಯೇ, ಅದನ್ನು ಭಾರತಕ್ಕೆ ರವಾನಿಸಬಹುದೇ ಎಂದು ಪರಿಶೀಲಿಸುವುದಾಗಿದೆ ಎಂದು ತಿಳಿಸಿದರು.
"ಬಿಎಂಆರ್‌ಸಿಎಲ್‌ನಿಂದ ಅನುಮತಿ ನೀಡಲಾಗಿದೆ ಮತ್ತು ತಂಡವು ಈ ವಾರದ ಆರಂಭದಲ್ಲಿ ಮರಳಿದೆ," ಎಂದ ಅಧಿಕಾರಿ, ಮೊದಲ ರೈಲಿನ ಆಗಮನಕ್ಕೆ ಮೊದಲಿನ ಗಡುವು ಅಕ್ಟೋಬರ್ 16 ಆಗಿತ್ತು, ಆದರೆ ಆ ಗಡುವು ಕಳೆಯಿತು. ಈಗ ನವೆಂಬರ್ 20 ರ ಒಳಗಾಗಿ ಬರಲಿದೆ," ಎಂದರು.


Click it and Unblock the Notifications