"ಮೊದಲು 13 ಕೋಟಿ ಕುಟುಂಬಗಳಿಗೆ ತಲಾ 5 ಸಾವಿರ ರುಪಾಯಿ ನೀಡಿ"

"Covid- 19 ಆರ್ಥಿಕ ಉತ್ತೇಜನ ಘೋಷಿಸಿದ ಕೇಂದ್ರ ಸರ್ಕಾರವು ಇದರಲ್ಲಿ ಲಕ್ಷಾಂತರ ಸಂಖ್ಯೆಯ ಬಡ ಹಾಗೂ ಹಸಿದ ವಲಸಿಗ ಕಾರ್ಮಿಕರಿಗೆ ಏನೂ ನೀಡಿಲ್ಲ. ಆ ವಲಸಿಗ ಕಾರ್ಮಿಕರಲ್ಲಿ ನಡೆದುಕೊಂಡೇ ತಮ್ಮ ಮನೆಗಳನ್ನು ಸೇರಿಕೊಂಡವರು ಇದ್ದಾರೆ" ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಪಿ. ಚಿದಂಬರಂ ಟೀಕಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರದಂದು ಮಾಡಿದ ಘೋಷಣೆ ಬಗ್ಗೆ ನಿರಾಸೆ ವ್ಯಕ್ತಪಡಿಸಿದ ಅವರು, ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಧ್ಯಮದವರ ಜತೆ ಮಾತನಾಡಿದ್ದಾರೆ. ಕೇಂದ್ರ ಸರ್ಕಾರವು ಸಣ್ಣ ಉದ್ಯಮಗಳಿಗೆ ಶೂರಿಟಿ ಇಲ್ಲದಂತೆ 3 ಲಕ್ಷ ಕೋಟಿ ರುಪಾಯಿ ವಿತರಿಸಿವುದಾಗಿ ಘೋಷಿಸಿತು. ಆದರೆ ಬಾಕಿ 16.4 ಲಕ್ಷ ಕೋಟಿ ರುಪಾಯಿ ಎಲ್ಲಿ ಎಂದು ಪ್ರಶ್ನೆ ಮಾಡಿದ್ದಾರೆ.

MSMEಗೆ ಘೋಷಿಸಿದ ಪ್ಯಾಕೇಜ್ ಹೊರತುಪಡಿಸಿ ಉಳಿದ ಘೋಷಣೆಗಳು ನಿರಾಶಾದಾಯಕ ಆಗಿದೆ. ಈ ಸರ್ಕಾರವು ಅದರದೇ ಅಜ್ಞಾನ ಮತ್ತು ಭಯದ ಕೈದಿಯಂತೆ ಆಗಿದೆ. ಸರ್ಕಾರವು ಹೆಚ್ಚು ಖರ್ಚು ಮಾಡಬೇಕು. ಆದರೆ ಈ ಸರ್ಕಾರಕ್ಕೆ ಆ ಸಾಮರ್ಥ್ಯ ಇಲ್ಲ. ಸರ್ಕಾರವು ಹೆಚ್ಚು ಸಾಲ ಮಾಡಬೇಕಿದೆ. ಅದು ಕೂಡ ಈ ಸರ್ಕಾರಕ್ಕೆ ಆಗುತ್ತಿಲ್ಲ. ಇನ್ನು ರಾಜ್ಯ ಸರ್ಕಾರಗಳು ಹೆಚ್ಚು ಸಾಲ ಮಾಡಿ, ಖರ್ಚು ಹೆಚ್ಚು ಮಾಡಬೇಕು. ಅದಕ್ಕೂ ಅವಕಾಶ ನೀಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಸರ್ಕಾರವು ಮೊದಲಿಗೆ ಏನು ಮಾಡಬೇಕು ಅಂದರೆ, ಜನಸಂಖ್ಯೆಯಲ್ಲಿ ತಳ ಮಟ್ಟದಲ್ಲಿ ಇರುವ 13 ಕೋಟಿ ಕುಟುಂಬಗಳಿಗೆ ತಲಾ 5 ಸಾವಿರ ರುಪಾಯಿಯನ್ನು ನೀಡಬೇಕು. ಅಂದರೆ, ಅದಕ್ಕಾಗಿ ಸರ್ಕಾರಕ್ಕೆ 65 ಸಾವಿರ ಕೋಟಿ ರುಪಾಯಿ ವೆಚ್ಚವಾಗುತ್ತದೆ. ಇನ್ನು ಕ್ಷೇತ್ರವಾರು ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು. ಪ್ರತಿ ವಲಯಕ್ಕೂ ಆರ್ಥಿಕ ಬೆಂಬಲ ನೀಡಬೇಕು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+