2023ರ ಕೇಂದ್ರ ಆಯವ್ಯಯದಲ್ಲಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್, ಹಿರಿಯ ನಾಗರೀಕರಿಗೆ ಆಕರ್ಷಕ ಬಡ್ಡಿದರ, ಸ್ಕೀಂ ಘೋಷಿಸಿದ ನಂತರ ದೇಶದ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳು ತಮ್ಮ ಬ್ಯೂಸಿನೆಸ್ ಪ್ಲ್ಯಾನ್ ಗಳನ್ನು ಬದಲಾಯಿಸಿಕೊಂಡಿದೆ.
ಅನೇಕ ಬ್ಯಾಂಕುಗಳು ನಿಶ್ಚಿತ ಠೇವಣಿ (Fixed Deposit) ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿವೆ. ವಿಶೇಷವಾಗಿ ಹಿರಿಯ ನಾಗರೀಕರಿಗೆ ಈ ಸೌಲಭ್ಯಗಳನ್ನು ನೀಡಲು ಬ್ಯಾಂಕುಗಳು ಮುಂದಾಗಿವೆ. ಫೆಬ್ರವರಿ ತಿಂಗಳ ಆರಂಭದಲ್ಲಿ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಶೇ. 6.5ಹೆಚ್ಚಿಸಿದಾಗಿನಿಂದ ಬ್ಯಾಂಕುಗಳು ಬಡ್ಡಿದರದಲ್ಲಿ ಬದಲಾವಣೆಯನ್ನು ತಂದಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ ಡಿಎಫ್ ಸಿ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಏಕ್ಸಿಸ್ ಬ್ಯಾಂಕ್ ಸೇರಿದಂತೆ ಪ್ರಮುಖ ಬ್ಯಾಂಕುಗಳು ಬಡ್ಡಿದರದಲ್ಲಿ ಗಮನಾರ್ಹ ಪರಿಷ್ಕರಣೆಯನ್ನು ಜಾರಿಗೆ ತಂದಿದೆ.
ರಾಷ್ಟ್ರೀಕೃತ ಬ್ಯಾಂಕುಗಳು ನಿಶ್ಚಿತ ಠೇವಣಿಯ ಮೇಲೆ ಶೇ. 7.5 - 8ರಷ್ಟು ಬಡ್ಡಿದರವನ್ನು ನೀಡಿದರೆ, ಸಣ್ಣ ಫೈನಾನ್ಸ್ ಬ್ಯಾಂಕುಗಳು ಶೇ. 9.5ರಷ್ಟು ಬಡ್ಡಿ ನೀಡುವುದಾಗಿ ಪ್ರಕಟಿಸಿದೆ. ಹಿರಿಯ ನಾಗರೀಕರಿಗೆ ಠೇವಣಿಯ ಮೇಲೆ ಶೇ. 0.5ಹೆಚ್ಚುವರಿ ಬಡ್ಡಿ ನೀಡುವುದಾಗಿ ಬಹುತೇಕ ಎಲ್ಲಾ ಬ್ಯಾಂಕುಗಳು ಪ್ರಕಟಿಸಿವೆ.
ಅರವತ್ತು ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಮತ್ತು ಎಂಬತ್ತು ವರ್ಷ ಮೇಲ್ಪಟ್ಟ ಸೂಪರ್ ಸೀನಿಯರ್ ಸಿಟಿಜನ್ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಠೇವಣಿ ಮೇಲಿನ ಬಡ್ಡಿಗೆ ತೆರಿಗೆ ಪಾವತಿಸ ಬೇಕಾಗಿರುವುದರಿಂದ ಟ್ಯಾಕ್ಸ್ ರಿಬೇಟ್ ಪಡೆದುಕೊಳ್ಲಲೂ ಇದು ಸಹಾಯಕವಾಗಲಿದೆ.
ರಾಷ್ಟ್ರೀಕೃತ, ಖಾಸಗಿ ಬ್ಯಾಂಕುಗಳಿಗಿಂತಲೂ ಹಿರಿಯ ನಾಗರೀಕರಿಗೆ ಹೆಚ್ಚಿನ ಬಡ್ಡಿ (ನಿಶ್ಚಿತ ಠೇವಣಿಯ ಮೇಲೆ) ನೀಡುವ ಐದು ಫೈನಾನ್ಸ್ ಸಂಸ್ಥೆಗಳು ಹೀಗಿವೆ:
1. ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಬೆಸ್ಟ್ ಸ್ಲ್ಯಾಬ್: ಶೇ. 9.5
ಸ್ಕೀಂ : 1,001 ದಿನ
ಸ್ಕೀಂ: 181-201 ದಿನ ಮತ್ತು 501 ದಿನಕ್ಕೆ ಬಡ್ಡಿ: ಶೇ. 9.25
2. ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಬೆಸ್ಟ್ ಸ್ಲ್ಯಾಬ್: ಶೇ. 8.51 (730 -999 ದಿನ)
ಸ್ಕೀಂ : 999 ದಿನಕ್ಕೆ ಶೇ. 8.76
3. ಜನ ಸ್ಮಾಲ್ ಬ್ಯಾಂಕ್
ಬೆಸ್ಟ್ ಸ್ಲ್ಯಾಬ್: ಶೇ. 8.80 (730 -999 ದಿನ)
ಸ್ಕೀಂ : 2-3 ವರ್ಷಕ್ಕಾದರೆ ಶೇ. 0.7 ಹೆಚ್ಚುವರಿ ಬಡ್ಡಿ
4. ಬಂಧನ್ ಬ್ಯಾಂಕ್
ಬೆಸ್ಟ್ ಸ್ಲ್ಯಾಬ್: ಶೇ. 8.50 (600 ದಿನ)
5. ಐಡಿಬಿಐ ಬ್ಯಾಂಕ್
ಬೆಸ್ಟ್ ಸ್ಲ್ಯಾಬ್: ಶೇ. 7.5 (1, 2ವರ್ಷಕ್ಕೆ, 444 & 700 ದಿನಕ್ಕೆ ಹೊರತಾಗಿ)


Click it and Unblock the Notifications