ಬೆಂಗಳೂರು, ಆಗಸ್ಟ್ 16: ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತದ ಬಳಿಯ ಪಂಚತಾರಾ ಹೋಟೆಲ್ ಮತ್ತು ರೋಪ್ ವೇ ನಿರ್ಮಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದ್ದು, ಇದು ಪರಿಸರವಾದಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ರಾಜ್ಯವು ಮತ್ತೊಮ್ಮೆ ಪ್ರಸ್ತಾವನೆ ಕಳುಹಿಸಿದೆ. ಈ ಪೈವ್ ಸ್ಟಾರ್ ಹೋಟೆಲ್ ಪ್ರಾಜೆಕ್ಟ್ ಅನ್ನು 2014 ರಲ್ಲಿ ಕೇಂದ್ರ ಸರ್ಕಾರ ತಿರಸ್ಕರಿಸಿತ್ತು.
ಪಶ್ಚಿಮ ಘಟ್ಟದ ಜೋಗ ಜಲಪಾತದ ಬಳಿ ಪರಿಸರ ಪ್ರವಾಸೋದ್ಯಮಕ್ಕಾಗಿ, ಪಂಚತಾರಾ ಹೋಟೆಲ್ ನಿರ್ಮಿಸಲು ಜೋಗ ಜಲಪಾತ ನಿರ್ವಹಣಾ ಪ್ರಾಧಿಕಾರವು ಕರ್ನಾಟಕ ಅರಣ್ಯ ಇಲಾಖೆಗೆ (ಕೆಎಫ್‌ಡಿ) ಸಲ್ಲಿಸಿದ ಪ್ರಸ್ತಾವನೆ ಬಗ್ಗೆ ಪರಿಸರ ಸಂರಕ್ಷಣಾ ತಜ್ಞರು ಮತ್ತು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇಂತಹ ದುರ್ಬಲ ಪ್ರದೇಶದಲ್ಲಿ ಪಂಚತಾರಾ ಅಥವಾ ಪರಿಸರ ಪ್ರವಾಸೋದ್ಯಮ ಹೋಟೆಲ್‌ಗೆ ಅವಕಾಶ ನೀಡಬಾರದು. ಜಲವಿದ್ಯುತ್ ಯೋಜನೆಗಳು, ಅಣೆಕಟ್ಟುಗಳು, ರಸ್ತೆಗಳು, ರೈಲುಮಾರ್ಗಗಳು ಸೇರಿದಂತೆ ವಿವಿಧ ಮೂಲಸೌಕರ್ಯ ಯೋಜನೆಗಳಿಂದ ಶರಾವತಿ ಕಣಿವೆ ಈಗಾಗಲೇ ಅಪಾಯದಲ್ಲಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ಶರಾವತಿ ಕಣಿವೆಯಲ್ಲಿ ಅಸ್ತಿತ್ವದಲ್ಲಿರುವ PWD (ಸಾರ್ವಜನಿಕ ಕಾಮಗಾರಿ ಇಲಾಖೆ) ಅತಿಥಿ ಗೃಹದ ಜಾಗದಲ್ಲಿ ಈ ಫೈವ್ ಸ್ಟಾರ್ ಹೊಟೇಲ್ ನಿರ್ಮಿಸಲು ಪ್ರಸ್ತಾಪಿಸಲಾಗಿದ್ದು ಇದಕ್ಕಾಗಿ ಇಲ್ಲಿರುವ 2.3 ಹೆಕ್ಟೇರ್‌ಗಿಂತಲೂ ಹೆಚ್ಚು ಅರಣ್ಯ ಭೂಮಿಯ ಅಗತ್ಯವಿದೆ. ಪರಿಸರ (ಸಂರಕ್ಷಣೆ) ಕಾಯಿದೆ 1986 ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಇದು ಯಾವುದೇ ಸಂರಕ್ಷಿತ ಪ್ರದೇಶ ಅಥವಾ ಪರಿಸರ-ಸೂಕ್ಷ್ಮ ವಲಯವಲ್ಲದ ಕಾರಣ ಈ ಯೋಜನೆಗೆ ಯಾವುದೇ ಅನುಮತಿ ಅಗತ್ಯವಿಲ್ಲ ಎಂದು ಪರಿವೇಶ್ ಪೋರ್ಟಲ್‌ನಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
2014 ರಲ್ಲಿ ಜೋಗ್ ನಿರ್ವಹಣಾ ಪ್ರಾಧಿಕಾರವು ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವನ್ನು (MoEF&CC) ಸಂಪರ್ಕಿಸಿದಾಗ ಕೇಂದ್ರ ಸರ್ಕಾರ ಇದರ ಅಪ್ರಸ್ತುತತೆಯನ್ನು ಉಲ್ಲೇಖಿಸಿ ಮೊದಲ ಬಾರಿಗೆ ಪ್ರಸ್ತಾವನೆಯನ್ನು ತಿರಸ್ಕರಿಸಿತು. ಇದಾದ ಬಳಿಕ ರಾಜ್ಯ ಸರ್ಕಾರ ಜೂನ್ 3, 2021ರಲ್ಲಿ ಮತ್ತೊಮ್ಮೆ ಪ್ರಯತ್ನ ಮಾಡಿತ್ತು. ತನ್ನ ಅರ್ಜಿಯಲ್ಲಿ, ಪ್ರಾಧಿಕಾರವು 20 ಕೋಟಿ ರೂ. ರೋಪ್‌ವೇ ಜೊತೆಗೆ 75 ಕೋಟಿ ವೆಚ್ಚದಲ್ಲಿ ಅಸ್ತಿತ್ವದಲ್ಲಿರುವ PWD ಅತಿಥಿ ಗೃಹಕ್ಕೆ ಬದಲಾಗಿ 10,000 ಚದರ ಮೀಟರ್‌ನಲ್ಲಿ ಪಂಚತಾರಾ ಹೋಟೆಲ್ ನಿರ್ಮಿಸಲು ಅನುಮತಿ ಕೇಳಿದೆ. ಈ ಬಾರಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ನಡವಾಡ ತಳಕಳಲೆ ಗ್ರಾಮದಲ್ಲಿ 0.8536 ಹೆಕ್ಟೇರ್ ಅರಣ್ಯ ಭೂಮಿಯನ್ನು ಡೈವರ್ಷನ್ ಮಾಡಲು ಅನುಮತಿ ಕೋರಿ ಹಾಗೂ ಪಿಡಬ್ಲ್ಯುಡಿ ಅತಿಥಿ ಗೃಹದ ಜಾಗದಲ್ಲಿ ಪಂಚತಾರಾ ಹೋಟೆಲ್ ನಿರ್ಮಾಣಕ್ಕೆ ಉದ್ದೇಶಿಸಿ ಕೇಂದ್ರ ಸಚಿವಾಲಯವನ್ನು ಸಂಪರ್ಕಿಸಿತು; ಆದರೆ ಸ್ಥಳೀಯರು ಮತ್ತು ಸಂರಕ್ಷಣಾಕಾರರಿಂದ ಆಕ್ಷೇಪಣೆಗಳಿಂದ ಈ ಯೋಜನೆ ಮತ್ತೆ ಮುಂದುವರಿದಿರಲಿಲ್ಲ.
ತನ್ನ ಅರ್ಜಿಯಲ್ಲಿ, ಪ್ರಾಧಿಕಾರವು 20 ಕೋಟಿ ರೂ. ರೋಪ್‌ವೇ ಜೊತೆಗೆ 75 ಕೋಟಿ ವೆಚ್ಚದಲ್ಲಿ ಅಸ್ತಿತ್ವದಲ್ಲಿರುವ PWD ಅತಿಥಿ ಗೃಹಕ್ಕೆ ಬದಲಾಗಿ 10,000 ಚದರ ಮೀಟರ್‌ನಲ್ಲಿ ಪಂಚತಾರಾ ಹೋಟೆಲ್ ನಿರ್ಮಿಸಲು ಅನುಮತಿ ಕೇಳಿದೆ.
ಪರಿವೇಶ್ ವೆಬ್‌ಸೈಟ್ ಪ್ರಕಾರ, ಜೋಗ ನಿರ್ವಹಣಾ ಪ್ರಾಧಿಕಾರವು ಮೂರನೇ ಬಾರಿಗೆ ಅದೇ ಯೋಜನೆಗೆ ಅನುಮತಿ ಕೋರಿದ್ದು, ಈ ಬಾರಿ ಅಗತ್ಯವಿರುವ ಒಟ್ಟು ಭೂ ಪರಿವರ್ತನೆಯು 2.392 ಹೆಕ್ಟೇರ್‌ಗಳಿಗೆ ಹೆಚ್ಚಾಗಿದೆ. ಇನ್ನೊಂದೆಡೆ ಜೋಗ ಜಲಪಾತ ಅಭಿವೃದ್ಧಿ ಪ್ರಾಧಿಕಾರಕ್ಕೆ ಅರಣ್ಯಭೂಮಿ ವರ್ಗಾಯಿಸಲು ಶಿವಮೊಗ್ಗ ಜಿಲ್ಲಾಡಳಿತ ಒಪ್ಪಿಗೆ ನೀಡಿದ್ದು, ಪರ್ಯಾಯವಾಗಿ ನಾಗರಿಕ ಉದ್ದೇಶಕ್ಕೆ ಮೀಸಲಾದ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಒಪ್ಪಿಗೆ ನೀಡಿದ್ದಾರೆ.
"ಅಭಿವೃದ್ಧಿಯ ಹೆಸರಿನಲ್ಲಿ ಶರಾವತಿ ಕಣಿವೆಯನ್ನು ಧ್ವಂಸಗೊಳಿಸಬೇಕಾಗುತ್ತದೆ. ಕೇರಳದ ವಯನಾಡ್ ಮತ್ತು ಅಂಕೋಲದ ಶಿರೂರಿನಂತೆ ಶರಾವತಿ ಕಣಿವೆಯೂ ಪರಿಸರ ಸೂಕ್ಷ್ಮ ಪ್ರದೇಶ. ಪಶ್ಚಿಮ ಘಟ್ಟಗಳ ಕುರಿತು ಮಾಧವ್ ಗಾಡ್ಗೀಳ್ ಅವರ 2011 ರ ವರದಿಯು ಶರಾವತಿ ನದಿ ಜಲಾನಯನ ಪ್ರದೇಶವನ್ನು ಪಶ್ಚಿಮ ಘಟ್ಟಗಳ "ಅತ್ಯಂತ ಪರಿಸರೀಯವಾಗಿ ದುರ್ಬಲ ಪ್ರದೇಶ" ಎಂದು ವರ್ಗೀಕರಿಸಿದೆ" ಎಂದು ಸ್ಥಳೀಯರು ಆರೋಪಿಸಿದ್ದಾರೆ.


Click it and Unblock the Notifications