ಬೆಂಗಳೂರು, ಏಪ್ರಿಲ್ 8: ವಿಸ್ತಾರಾ ವಿಮಾನಯಾನ ಸಂಸ್ಥೆ ಹಲವು ವಿಮಾನಗಳನ್ನು ರದ್ದು ಮಾಡಿರುವುದಾಗಿ ಘೋಷಿಸಿದೆ. ಇದರಿಂದ ಕಾರ್ಯಾಚರಣೆಯಿರುವ ವಿಮಾನಗಳಲ್ಲಿ ಪ್ರಯಾಣಿಕರಿಗೆ ಅನಾನೂಕೂಲ ಉಂಟಾಗಲಿದೆ. ಹೀಗಾಗಿ ಪ್ರಯಾಣಿಕರು ತಮ್ಮ ಏರ್‌ಲೈನ್‌ನಲ್ಲಿ ಕಾಯ್ದಿರಿಸಿದ ಟಿಕೆಟ್‌ಗಳನ್ನು ಸ್ವಯಂಪ್ರೇರಣೆಯಿಂದ ರದ್ದುಗೊಳಿಸುತ್ತಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸಂಕಟವನ್ನು ಹಂಚಿಕೊಂಡಿರುವ ಪ್ರಯಾಣಿಕರಉ, ವಿಮಾನ ಪ್ರಯಾಣ ದರವು ಈಗ ದುಬಾರಿಯಾಗಿದೆ. ಬೆಂಗಳೂರು-ಉದಯಪುರ, ಮುಂಬೈ-ಕೊಚ್ಚಿ, ದೆಹಲಿ-ಶ್ರೀನಗರ ಮತ್ತು ದೆಹಲಿ-ಇಂಧೋರ್ ಮಾರ್ಗಗಳಲ್ಲಿ ವಿಸ್ತಾರಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ರದ್ದತಿಗಳ ಕುರಿತು ಏರ್‌ಲೈನ್ ನಿಯಮಿತ ಅಪಡೇಟ್‌ಗಳನ್ನು ನೀಡುವುದರಿಂದ ಇದು ಪ್ರತಿದಿನ ಬದಲಾಗುತ್ತದೆ.

ಬೆಂಗಳೂರಿನಲ್ಲಿರುವ ಆಸ್ಪತ್ರೆಯ ಸುರಕ್ಷತಾ ಸಲಹೆಗಾರ ಅಶ್ವಿನ್ ಸಿದ್ದರಾಮಯ್ಯ ಅವರು ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್‌ನಲ್ಲಿ "ನಾನು ದೆಹಲಿಯಿಂದ ಬೆಂಗಳೂರಿಗೆ ವಿಮಾನವನ್ನು ಕಾಯ್ದಿರಿಸಲು 16,000 ರೂಪಾಯಿಗಳನ್ನು ಖರ್ಚು ಮಾಡಿದ್ದೇನೆ. ಕಾರಣ ನಾನು 7500 ಕ್ಕೆ ಬುಕ್ ಮಾಡಿದ ವಿಮಾನವನ್ನು ವಿಸ್ತಾರಾ ರದ್ದುಗೊಳಿಸಿದೆ ಎಂದು ಹೇಳಿಕೊಂಡಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಸ್ಟರ್ ಎಂದು ಕರೆದುಕೊಳ್ಳುವ ದೆಹಲಿ ಮೂಲದ ಪ್ರಯಾಣಿಕರು ವಿಸ್ತಾರಾಗೆ, ನೀವು ವಿಮಾನವನ್ನು ರದ್ದುಗೊಳಿಸಿದವರಿಗೆ ಹಣವನ್ನು ಮರುಪಾವತಿ ಮಾಡುತ್ತಿದ್ದೀರಾ? ಮತ್ತು ಯಾವಾಗ?" ಎಂದು ಪ್ರಶ್ನೆ ಕೇಳಿದ್ದಾರೆ.
ಮತ್ತೊಬ್ಬ ಪ್ರಯಾಣಿಕ ಅಂಕುರ್ ದೇಶಮುಖ್, ಅವರು ಮತ್ತು ಅವರ ಸ್ನೇಹಿತರು ಅಪಿಲ್ 1 ರಂದು ಬೆಂಗಳೂರಿನಿಂದ ಮುಂಬೈಗೆ ವಿಸ್ತಾರಾ ಯುಕೆ-864 ವಿಮಾನದಲ್ಲಿ ಮಧ್ಯರಾತ್ರಿ ಪ್ರಯಾಣಿಸಬೇಕಿತ್ತು. ಆದರೆ ವಿಮಾನ ವಿಳಂಬವಾಗಿ ನಂತರ ರದ್ದುಗೊಂಡಿದ್ದರಿಂದ ತಮ್ಮ ಸಂಕಷ್ಟದ ಅನುಭವವನ್ನು ಹಂಚಿಕೊಂಡಿದ್ದಾರೆ. ಇಂಡಿಗೋದೊಂದಿಗೆ ಪರ್ಯಾಯ ವಿಮಾನವನ್ನು ಕಾಯ್ದಿರಿಸಲು ಅವರು ಮುಂದಾದ್ದರಿಂದ ಅವರು ತಮ್ಮ ಮೇಲೆ ಆರ್ಥಿಕ ಒತ್ತಡ ಉಂಟಾಗಿರುವುದಾಗಿ ತಿಳಿಸಿದರು.
ಭಾರತೀಯ ಪ್ರವಾಸೋದ್ಯಮ ಮತ್ತು ಹಾಸ್ಪಿಟಾಲಿಟಿಯಲ್ಲಿ ಫೆಡರೇಶನ್ ಆಫ್ ಅಸೋಸಿಯೇಷನ್ಸ್‌ನ ಮಂಡಳಿಯ ಸದಸ್ಯ ಅಜಯ್ ಪ್ರಕಾಶ್, "ಗ್ರಾಹಕರ ನಡವಳಿಕೆಯ ಮೇಲೆ ತಕ್ಷಣದ ಪರಿಣಾಮ ಬೀರುತ್ತದೆ. ಪ್ರಯಾಣಿಕರು ಸದ್ಯಕ್ಕೆ ವಿಸ್ತಾರಾ ಸಂಸ್ಥೆಯನ್ನು ತೆಗಳುತ್ತಿದ್ದಾರೆ. ಬುಕಿಂಗ್ ಮಾಡಿದ್ದವರು ಪರ್ಯಾಯ ವಿಮಾನಗಳನ್ನು ಹುಡುಕುತ್ತಿದ್ದಾರೆ. ಸಮಸ್ಯೆಯನ್ನು ತುರ್ತಾಗಿ ಪರಿಹರಿಸದಿದ್ದರೆ ಮುಂಬರುವ ಬೇಸಿಗೆ ರಜಾದಿನಗಳಿಗೆ ಇದು ಒಳ್ಳೆಯದಲ್ಲ. ರಸ್ತೆಯ ಮೂಲಕ ಪ್ರಯಾಣ ಕೈಗೊಳ್ಳುವುದು ಆಶ್ಚರ್ಯವೇನಿಲ್ಲ ಎಂದು ತಿಳಿಸಿದ್ದಾರೆ.


Click it and Unblock the Notifications