ಜೀವನದಲ್ಲಿ ಒಮ್ಮೆಯಾದರೂ ವಿಮಾನ ಪ್ರಯಾಣ ಮಾಡಬೇಕೆಂಬ ಆಸೆ ಅಂತೂ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ.ಆದರೆ ವಿಮಾನ ಟಿಕೆಟ್‌ಗಳು ಬೆಲೆ ಕೇಳಿದ್ದಾರೆ ಬೇಡಪ್ಪಾ ..ಬೇಡ ಇದರ ಸಹವಾಸ ಇದು ನಮ್ಮ ಕೈಗೆ ಎಟುಕದ ವಸ್ತು ಇದು ಕೇವಲ ಶ್ರೀಮಂತರಿಗೆ ಮಾತ್ರ ಎಂದು ಸಮ್ಮನೆ ಇರುತ್ತವೆ. ಆದರೆ ನಿಮ್ಮ ಅನಿಸಿಕೆ ಸುಳ್ಳಾಗಿಸಲು ಪ್ರಮುಖ ವಿದೇಶಿ ವಿಮಾನಯಾನ ಸಂಸ್ಥೆ ವಿಯೆಟ್ ಜೆಟ್ ಏರ್ ಒಂದು ವಿನೂತನ ಆಫರ್ ನೀಡಿದೆ.
ಹೌದು, ಹೋಳಿ ಹಬ್ಬದ ಪ್ರಯುಕ್ತ ವಿಯೆಟ್ನಾಂ ವಿಮಾನಯಾನ ಸಂಸ್ಥೆ ವಿಯೆಟ್‌ಜೆಟ್ ವಿಶೇಷ ಆಫರ್ ವೊಂದನ್ನು ಘೋಷಣೆ ಮಾಡಿದೆ. ಈ ಆಫರ್ ನಲ್ಲಿ ಜಸ್ಟ್ 11 ರೂಪಾಯಿಗೆ ಭಾರತದಿಂದ ವಿಯೆಟ್ನಾಂಗೆ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಬಹುದು.

ಈ ಆಫರ್ ಎಷ್ಟು ದಿನದವರೆಗೂ ಲಭ್ಯ?
ಫೆಬ್ರವರಿ 21 ರಿಂದ ಫೆಬ್ರವರಿ 28 ರವರೆಗೆ ಮಾತ್ರ ಅವಕಾಶವಿರುತ್ತದೆ.
ಎಲ್ಲೆಲ್ಲಿ ಪ್ರಯಾಣ ಮಾಡಬಹುದು?
ಬೆಂಗಳೂರು, ನವದೆಹಲಿ, ಹೈದರಾಬಾದ್, ಮುಂಬೈ, ಕೊಚ್ಚಿ ಮತ್ತು ಅಹಮದಾಬಾದ್‌ನಿಂದ ಹನೋಯ್, ಹೋಚಿ ಮಿನ್ ಸಿಟಿ ಮತ್ತು ದಾನಾಂಗ್‌ನಂತಹ ವಿಯೆಟ್ನಾಂ ನಗರಗಳಿಗೆ ಪ್ರಯಾಣವನ್ನು ಮಾಡಬಹುದು. ನೀವು ಇದೇ ಆಫರ್ ಅಡಿ 2025ರ ಮಾರ್ಚ್ 10 ರಿಂದ ಸೆಪ್ಟೆಂಬರ್ 30 ರವರೆಗೆ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಬಹುದು. ಟಿಕೆಟ್ ಬೆಲೆ ಜೊತೆಗೆ ತೆರಿಗೆ ಮತ್ತು ಇತರ ಶುಲ್ಕಗಳು ಕೂಡ ಅನ್ವಯವಾಗುತ್ತವೆ.
ಟಿಕೆಟ್ ಬುಕ್ಕಿಂಗ್ ಮಾಡುವುದು ಹೇಗೆ?
ವಿಯೆಟ್ಜೆಟ್ ವಿಮಾನ ಟಿಕೆಟ್‌ಗಳಿಗಾಗಿ ಕಂಪನಿ ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿಸಬೇಕು ಅಥವಾ ಮೊಬೈಲ್ ಆ್ಯಪ್ ಮೂಲಕ ಸಹ ಬುಕ್ ಮಾಡಬಹುದು.
ಹಣ ಪಾವತಿಗೆ ನೀವು ವೀಸಾ ಮತ್ತು ಮಾಸ್ಟರ್‌ಕಾರ್ಡ್ ಕ್ರೆಡಿಟ್ ಕಾರ್ಡ್‌ಗಳನ್ನು ಬಳಕೆ ಮಾಡಿಕೊಳ್ಳಬಹುದು.
ಟಿಕೆಟ್ ಆಫರ್ ವಿವರಗಳು
ವಿಮಾನದ ಟಿಕೆಟ್ ದರ: ಕೇವಲ 11 ರೂ.ಗೆ ಎಕಾನಮಿ ಕ್ಲಾಸ್ ಟಿಕೆಟ್
ಶುಲ್ಕ: ಇತರ ವಸ್ತುಗಳಿಗೆ ಹೆಚ್ಚುವರಿ ಶುಲ್ಕಗಳಿವೆ.
ಬುಕ್ಕಿಂಗ್ ದಿನಾಂಕ: ಫೆಬ್ರವರಿ 28ರ ವರೆಗೆ.
ಪ್ರಯಾಣ ದಿನಾಂಕಗಳು: ಮಾರ್ಚ್ 10 ರಿಂದ ಸೆಪ್ಟೆಂಬರ್ 30ರ ವರೆಗೆ
ಯಾವ ಸ್ಥಳಗಳಿಗೆ ಅವಕಾಶ: ಬೆಂಗಳೂರು, ನವದೆಹಲಿ, ಹೈದರಾಬಾದ್, ಮುಂಬೈ, ಕೊಚ್ಚಿ ಮತ್ತು ಅಹಮದಾಬಾದ್‌ನಿಂದ ಹನೋಯ್, ಹೋಚಿ ಮಿನ್ ಸಿಟಿ ಮತ್ತು ದಾನಾಂಗ್‌ನಂತಹ ವಿಯೆಟ್ನಾಂ ನಗರಗಳಿಗೆ ಪ್ರಯಾಣವನ್ನು ಮಾಡಬಹುದು.
ವಿಯೆಟ್ನಾಂ (Vietnam) ದಕ್ಷಿಣ ಪೂರ್ವ ಏಷ್ಯಾದ ಒಂದು ಸುಂದರವಾದ ದೇಶ. ಇದು ತನ್ನ ವೈವಿಧ್ಯಮಯ ಸಂಸ್ಕೃತಿ, ಐತಿಹಾಸಿಕ ಪರಂಪರೆ, ಪ್ರವಾಸೋದ್ಯಮ ಹಾಟ್ ಸ್ಪಾಟ್‌ಗಳು, ಆಹಾರ ಸಂಸ್ಕೃತಿ ಮತ್ತು ಪ್ರಕೃತಿ ವೈಭವದಿಂದ
ಹೆಚ್ಚಿನ ಪ್ರಸಿದ್ದಿಯನ್ನು ಹೊಂದಿದೆ.
ವಿಯೆಟ್ನಾಂ ಕೆಲವು ಪ್ರಮುಖ ಸ್ಥಳಗಳು:
ಹನೋಯ್: ವಿಯೆಟ್ನಾಂ ರಾಜಧಾನಿ. ವೈವಿಧ್ಯಮಯ ಪ್ರಾಚೀನ ನಗರ, ಜನಪ್ರಿಯ ಸ್ಥಳಗಳಲ್ಲಿ ಹೋನ್ಗಿಯೆನ್ ಹೊಲಿಗಳು, ಒಲ್ಡ್ ಕ್ವಾರ್ಟರ್ ಮತ್ತು ಲೋಟಸ್ ಚರ್ಚ್ ಮೊದಲಾದವುಗಳು ಇಲ್ಲಿ ಇವೆ.
ಹೋ ಚಿ ಮಿನ್ಹ್ ಸಿಟಿ: ಇದು ದಕ್ಷಿಣ ವಿಯೆಟ್ನಾಂನ ಆರ್ಥಿಕ ರಾಜಧಾನಿ ಮತ್ತು ವೈವಿಧ್ಯಮಯ ಮಾರ್ಕೆಟ್ಸ್, ಮಾಯಾ ಕಂಪ್ಲೆಕ್ಸ್ಗಳು ಮತ್ತು ಕಾಫಿ ಸಂಸ್ಕೃತಿಯು ಹೆಸರಾಗಿರುವ ನಗರ.
ಡಾ ನಾಂಗ್: ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ನಗರ, ಇಲ್ಲಿಗೆ ಬಂದರೆ ನೀವು ಉತ್ತಮ ಪರಿಸರ ಮತ್ತು ಪರ್ವತ ಸೌದರ್ಯವನ್ನು ಸವಿಯಬಹುದು.
ಹಾಲಾಂಗ್ ಬೇ: ಅತಿ ಪ್ರಸಿದ್ಧ ಪ್ರವಾಸೋದ್ಯಮ ಸ್ಥಳ, ಇಲ್ಲಿಯ ಸುಂದರ ಕಲ್ಲುನಡೆದ ದ್ವೀಪಗಳು ಮತ್ತು ತಂಪಾದ ನೀರುಗಳಲ್ಲಿ ಕಾಯಕಿಂಗ್ ಮಾಡಬಹುದು.
ವಿಯೆಟ್ನಾಂ ವಿಶ್ವದ ಅತ್ಯಂತ ಸುಂದರವಾದ ದೇಶಗಳಲ್ಲಿ ಒಂದಾಗಿದ್ದು, ಇನ್ನೂ ಹಲವಾರು ಅದ್ಭುತ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ಈ ಹೋಳಿ ಆಫರ್ ವಿಯೆಟ್ನಾಂಗೆ ಪ್ರಯಾಣಿಸಲು ಬಯಸುವರಿಗೆ ಉತ್ತಮ ಅವಕಾಶವೆಂದೇ ಹೇಳಬಹುದು.


Click it and Unblock the Notifications