ಫ್ಲಿಪ್‌ಕಾರ್ಟ್‌ನ ಸಹಸಂಸ್ಥಾಪಕ ಬಿನ್ನಿ ಬನ್ಸಾಲ್ ಫೋನ್‌ಪೇಯಲ್ಲಿ ಸುಮಾರು 100ರಿಂದ 150 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಈ ಹೂಡಿಕೆಯು ಸಂಪೂರ್ಣವಾದರೆ ಇದು ಉದಯೋನ್ಮುಖ ಸಂಸ್ಥೆಯು ಮಾಡುತ್ತಿರುವ ಅತೀ ದೊಡ್ಡ ಹೂಡಿಕೆಯಾಗಲಿದೆ. ಆದರೆ ವರದಿ ಪ್ರಕಾರ ಮೊತ್ತವನ್ನು ಈವರೆಗೆ ನಿರ್ಧಾರ ಮಾಡಿಲ್ಲ. ಶೀಘ್ರವೇ ಈ ಒಪ್ಪಂದವು ಕೊನೆಯಾಗುವ ಸಾಧ್ಯತೆಯಿದೆ.
ಸುಮಾರು 12 ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿರುವ ಫೋನ್‌ಪೇ ಪಿಇ ಹೆವಿವೇಟ್ಸ್ ಜನರಲ್ ಅಟ್ಲಾಂಟಿಕ್, ಟೈಗರ್ ಗ್ಲೋಬಲ್, ರಿಬ್ಬಿಟ್ ಕ್ಯಾಪಿಟಲ್ ಮತ್ತು ಇತರೆ ಸಂಸ್ಥೆಗಳಿಗೆ ಫೋನ್‌ಪೇಗೆ ಪ್ರಾಥಮಿಕ ಫಂಡಿಂಗ್ ರೂಪದಲ್ಲಿ 450 ಮಿಲಿಯನ್ ಡಾಲರ್ ಲಭ್ಯವಾಗಿದೆ. ವಾಲ್‌ಮಾರ್ಟ್ ಫೋನ್‌ಪೇಯಲ್ಲಿ ಒಟ್ಟು ಶೇಕಡ 70ರಷ್ಟು ಸ್ಟೇಕ್ ಅನ್ನು ಹೊಂದಿದೆ. ಹಾಗಾಗಿ ಫೋನ್‌ಪೇನಲ್ಲಿ ಅತೀ ದೊಡ್ಡ ಹೂಡಿಕೆದಾರ ಸಂಸ್ಥೆ ಇದಾಗಿದೆ.

ಫ್ಲಿಪ್‌ಕಾರ್ಟ್ ಸಂಸ್ಥೆಯು ಸದ್ಯ ಹೊಸ ಮಾಲೀಕತ್ವ ರಚನೆಯ ಸಿದ್ಧತೆಯಲ್ಲಿದೆ, ಹಾಗಾಗಿ ಇತರೆ ಫ್ಲಿಪ್‌ಕಾರ್ಟ್ ಷೇರುದಾರರು, ಟೈಗರ್ ಗ್ಲೋಬರ್, ಟೆನ್‌ಸೆಂಟ್, ಕತಾರ್ ಇನ್‌ವೆಸ್ಟ್‌ಮೆಂಟ್ ಅಥಾರಿಟಿ, ಮೈಕ್ರೋಸಾಫ್ಟ್ ಹೊಸ ಷೇರುಗಳನ್ನು ಖರೀದಿ ಮಾಡುವ ಸಾಧ್ಯತೆಯಿದೆ. ವಾಲ್‌ಮಾರ್ಟ್‌ನ ಅಂತಾರಾಷ್ಟ್ರೀಯ ಸಿಇಒ ಜುಡಿತ್ ಮೆಕೆನ್ನಾ ಕೂಡಾ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
ಫ್ಲಿಪ್‌ಕಾರ್ಟ್ ಒಂದು ಸ್ಪರ್ಧಾತ್ಪಕ ಆಪ್
ಜುಡಿತ್ ಮೆಕೆನ್ನಾ ಪ್ರಕಾರ ಆನ್‌ಲೈನ್ ಪಾವತಿ ಆಪ್‌ನಲ್ಲಿ ಪ್ರತಿ ತಿಂಗಳು ಸರಾಸರಿ ಬಿಲಿಯನ್ ವಹಿವಾಟು ನಡೆಯುತ್ತದೆ. ಯುಪಿಐ ವ್ಯವಸ್ಥೆಯಲ್ಲಿ ಗೂಗಲ್ ಪೇ, ಅಮೆಜಾನ್ ಪೇ, ವಾಟ್ಸಾಪ್ ಪೇಗಳಂತೆಯೇ ಫ್ಲಿಪ್‌ಕಾರ್ಟ್ ಕೂಡಾ ಅತೀ ದೊಡ್ಡ ಸ್ಪರ್ಧಾತ್ಪಕ ಆಪ್ ಆಗಿದೆ. 2016ರಲ್ಲಿ ಫ್ಲಿಪ್‌ಕಾರ್ಟ್ ಫೋನ್‌ಪೇ ಅನ್ನು ಖರೀದಿಸಿದೆ. ಈ ಖರೀದಿ ಪ್ರಕ್ರಿಯೆಯಲ್ಲಿ ಸಂಪೂರ್ಣ ನಿರ್ವಹಣೆಯನ್ನು ಬಿನ್ನಿ ಬನ್ಸಾಲ್ ನಡೆಸಿದ್ದಾರೆ.
ಮಾಹಿತಿ ಪ್ರಕಾರ ಬಿನ್ನಿ ಬನ್ಸಾಲ್ ಬೋರ್ಡ್‌ನಲ್ಲಿ ಸೇವೆ ಮುಂದುವರಿಸಿದ್ದಾರೆ. ಹಾಗೆಯೇ ಫೋನ್‌ಪೇನ ಸಹಸಂಸ್ಥಾಪಕರಾದ ಸಮೀರ್ ನಿಗಮ್ ಮತ್ತು ರಾಹುಲ್ ಛಾರಿ ನಡುವೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಸಚಿನ್ ಬನ್ಸಾಲ್ ಜೊತೆ ಸೇರಿ ಬಿನ್ನಿ ಬನ್ಸಾಲ್ ಫ್ಲಿಪ್‌ಕಾರ್ಟ್‌ನ ಸಹ ಸಂಸ್ಥಾಪನೆ ಮಾಡಿದ್ದಾರೆ. ತನ್ನ ಹೂಡಿಕೆ ತಂತ್ರಗಳ ಮೂಲಕವೇ ಹೆಚ್ಚು ಸುದ್ದಿಯಾಗಿದ್ದಾರೆ.


Click it and Unblock the Notifications