ಫ್ಲಿಪ್‌ಕಾರ್ಟ್‌ನ ಸಹ ಸಂಸ್ಥಾಪಕ ಬಿನ್ನಿ ಬನ್ಸಾಲ್ ಇತ್ತೀಚೆಗೆ ಫ್ಲಿಪ್‌ಕಾರ್ಟ್‌ನಲ್ಲಿ ತಮ್ಮ ಉಳಿದ ಪಾಲನ್ನು ಮಾರಾಟ ಮಾಡಿದ ನಂತರ ಗಡಿಯಾಚೆಗಿನ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಹೊಸ ಸ್ಟಾರ್ಟ್‌ಅಪ್ ಅನ್ನು ಆರಂಭ ಮಾಡಲು ತಯಾರಿ ನಡೆಸಿದ್ದಾರೆ. ಬಿನ್ನಿ ಬನ್ಸಾಲ್ ಭಾರತೀಯ ಮತ್ತು ಅಂತಾರಾಷ್ಟ್ರೀಯ ಇ-ಕಾಮರ್ಸ್ ಸಂಸ್ಥೆಗಳಿಗೆ ವಿನ್ಯಾಸ, ಸರಕುಗಳು ಮತ್ತು ಕಾರ್ಮಿಕರ ಲಭ್ಯತೆ ವಿಚಾರದಲ್ಲಿ ಸಹಾಯ ಮಾಡುವ ಸ್ಟಾರ್ಟ್‌ಅಪ್ ಅನ್ನು ಸ್ಥಾಪನೆ ಮಾಡುವ ಚಿಂತನೆ ನಡೆಸಿದ್ದಾರೆ.
ಆರಂಭದಲ್ಲಿ ವಾಣಿಜ್ಯ ಉದ್ಯಮಗಳಿಗೆ ಬ್ಯಾಕೆಂಡ್ ಕಾರ್ಯಾಚರಣೆಗಳಿಗೆ ಸಹಾಯ ಮಾಡುವ ನಾಲೇಜ್ ಪ್ರೋಸೆಸ್ ಔಟ್‌ಸೋರ್ಸಿಂಗ್ (Knowledge Process Outsourcing/ ಕೆಪಿಒ) ಕಂಪನಿಯಾಗಿ ಕಾರ್ಯನಿರ್ವಹಣೆ ಮಾಡಲಿದೆ. ಮೂಲಗಳ ಪ್ರಕಾರ, ಬನ್ಸಾಲ್ ತಮ್ಮ ಸ್ವಂತ ಹಣವನ್ನು ಹೂಡಿಕೆ ಮಾಡುತ್ತಾರೆ. ಆದರೆ ದಿನನಿತ್ಯ ಕಾರ್ಯಚರಣೆಯನ್ನು ನೋಡಿಕೊಳ್ಳಲು ಸಾಧ್ಯವಾಗದ ಕಾರಣದಿಂದಾಗಿ ಸ್ಟಾರ್ಟ್‌ಅಪ್ ಮೇಲ್ವಿಚಾರಣೆ ಮಾಡಲು ಸಿಇಒರನ್ನು ಹುಡುಕುತ್ತಿದ್ದಾರೆ.

ವಾಲ್‌ಮಾರ್ಟ್ 2018 ರಲ್ಲಿ ಸುಮಾರು 16 ಬಿಲಿಯನ್ ಡಾಲರ್‌ಗೆ ಸ್ವಾಧೀನಪಡಿಸಿಕೊಂಡ ಫ್ಲಿಪ್‌ಕಾರ್ಟ್‌ನಿಂದ ಬಿನ್ನಿ ಬನ್ಸಾಲ್ ಸಂಪೂರ್ಣವಾಗಿ ದೂರವಾಗಿದ್ದಾರೆ, ಇದಾದ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ. ಮಾರಾಟ ಒಪ್ಪಂದದ ಭಾಗವಾಗಿದ್ದ ಐದು ವರ್ಷಗಳ ಒಪ್ಪಂದ ಈ ವರ್ಷ ಮುಕ್ತಾಯಗೊಂಡಿದೆ. ಈಗ ಹೊಸ ಇ-ಕಾಮರ್ಸ್ ವ್ಯವಹಾರ ಪ್ರಾರಂಭಕ್ಕೆ ಬನ್ಸಾಲ್ ಮುಂದಾಗಿದ್ದಾರೆ.
ಬನ್ಸಾಲ್ ಅವರು ಫ್ಲಿಪ್‌ಕಾರ್ಟ್ ತೊರೆದ ನಂತರ ಏಂಜೆಲ್ ಹೂಡಿಕೆದಾರರಾಗಿ ಸಕ್ರಿಯರಾಗಿದ್ದಾರೆ. ಹಲವಾರು ಉದ್ಯಮಗಳಲ್ಲಿ ಬಹು ವ್ಯವಹಾರಗಳನ್ನು ಬೆಂಬಲಿಸುತ್ತಿದ್ದಾರೆ. ಬನ್ಸಾಲ್ ಹೊಸ ವ್ಯವಹಾರವನ್ನು ತನ್ನದೇ ಆದ ಹೂಡಿಕೆಯಿಂದ ಆರಂಭ ಮಾಡಿದ್ದಾರೆ. ಸಾಲ ಅಥವಾ ಬೇರೆ ಹೂಡಿಕೆದಾರರ ಸಹಾಯವನ್ನು ಬನ್ಸಾಲ್ ಕೋರಿಲ್ಲ ಎಂದು ವರದಿಯಾಗಿದೆ.
ಬನ್ಸಾಲ್ ತಮ್ಮ ಸ್ವಂತ ಸಂಪತ್ತು ಮತ್ತು ಅನುಭವವನ್ನು ಬಳಸಿಕೊಂಡು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಇ-ಕಾಮರ್ಸ್ ವ್ಯವಹಾರಗಳಿಗೆ ನಿರ್ಣಾಯಕ ಸಹಾಯವನ್ನು ನೀಡುವ ಜಾಗತಿಕ ಕಂಪನಿಯನ್ನು ರಚಿಸಲು ಈಗ ನಿರ್ಧಾರ ಮಾಡಿದ್ದಾರೆ.
ಫೋನ್‌ಪೇಯಲ್ಲಿ ಹೂಡಿಕೆಗೆ ಚಿಂತನೆ?
ಫ್ಲಿಪ್‌ಕಾರ್ಟ್‌ನ ಸಹಸಂಸ್ಥಾಪಕ ಬಿನ್ನಿ ಬನ್ಸಾಲ್ ಫೋನ್‌ಪೇಯಲ್ಲಿ ಸುಮಾರು 100ರಿಂದ 150 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಮುಂದಾಗಿದ್ದಾರೆ ಎಂದು ಈ ಹಿಂದೆ ವರದಿಯಾಗಿದೆ. ಯುಪಿಐ ವ್ಯವಸ್ಥೆಯಲ್ಲಿ ಗೂಗಲ್ ಪೇ, ಅಮೆಜಾನ್ ಪೇ, ವಾಟ್ಸಾಪ್ ಪೇಗಳಂತೆಯೇ ಫ್ಲಿಪ್‌ಕಾರ್ಟ್ ಕೂಡಾ ಅತೀ ದೊಡ್ಡ ಸ್ಪರ್ಧಾತ್ಪಕ ಆಪ್ ಆಗಿದೆ. 2016ರಲ್ಲಿ ಫ್ಲಿಪ್‌ಕಾರ್ಟ್ ಫೋನ್‌ಪೇ ಅನ್ನು ಖರೀದಿಸಿದೆ. ಈ ಖರೀದಿ ಪ್ರಕ್ರಿಯೆಯಲ್ಲಿ ಸಂಪೂರ್ಣ ನಿರ್ವಹಣೆಯನ್ನು ಬಿನ್ನಿ ಬನ್ಸಾಲ್ ನಡೆಸಿದ್ದಾರೆ.
ಮಾಹಿತಿ ಪ್ರಕಾರ ಬಿನ್ನಿ ಬನ್ಸಾಲ್ ಬೋರ್ಡ್‌ನಲ್ಲಿ ಸೇವೆ ಮುಂದುವರಿಸಿದ್ದಾರೆ. ಹಾಗೆಯೇ ಫೋನ್‌ಪೇನ ಸಹಸಂಸ್ಥಾಪಕರಾದ ಸಮೀರ್ ನಿಗಮ್ ಮತ್ತು ರಾಹುಲ್ ಛಾರಿ ನಡುವೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಸಚಿನ್ ಬನ್ಸಾಲ್ ಜೊತೆ ಸೇರಿ ಬಿನ್ನಿ ಬನ್ಸಾಲ್ ಫ್ಲಿಪ್‌ಕಾರ್ಟ್‌ನ ಸಹ ಸಂಸ್ಥಾಪನೆ ಮಾಡಿದ್ದಾರೆ. ತನ್ನ ಹೂಡಿಕೆ ತಂತ್ರಗಳ ಮೂಲಕವೇ ಹೆಚ್ಚು ಸುದ್ದಿಯಾಗಿದ್ದಾರೆ.


Click it and Unblock the Notifications