ಭಾರಿ ಡಿಸ್ಕೌಂಟ್..! ಆಫರ್ ಗಳ ಸುರಿಮಳೆಯೋ ಸುರಿಮಳೆ.. ಹೌದು, ಫ್ಲಿಪ್‌ಕಾರ್ಟ್ ಈ ವಾರಾಂತ್ಯದಲ್ಲಿ ಜುಲೈ 12 ರಿಂದ ಭಾರತದಲ್ಲಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ (GOAT) ಸೇಲ್‌ನ್ನು ಶುರುಮಾಡಲು ಸಜ್ಜಾಗಿದೆ. ಗ್ರಾಹರರಿಗೆ ಭಾರೀ ರಿಯಾತಿಯನ್ನು ನೀಡಿದೆ.
ಫ್ಲಿಪ್‌ಕಾರ್ಟ್ಮಾ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಮಾರಾಟದಲ್ಲಿ ವಿವಿಧ ವಿವಿಧ ಬ್ರಾಂಡ್‌ಗಳ ಮೇಲೆ ಭಾರೀ ಡಿಸ್ಕೌಂಟ್ ಗಳನ್ನು ಘೋಷಣೆಯನ್ನು ಮಾಡಿದೆ. ಸ್ಮಾರ್ಟ್‌ಫೋನ್‌ಗಳು, ಎಲ್‌ಇಡಿ ಟಿವಿಗಳು, ಗೃಹೋಪಯೋಗಿ ವಸ್ತುಗಳು, ಗ್ರಾಹಕ ಎಲೆಕ್ಟ್ರಾನಿಕ್ಸ್ ಪರಿಕರಗಳು, ಕ್ರೀಡಾ ಉಪಕರಣಗಳು, ಫ್ಯಾಷನ್ ಉಡುಪುಗಳು ಮತ್ತು ಇನ್ನೂ ಹೆಚ್ಚಿನ ಉತ್ಪನ್ನಗಳ ಮೇಲೆ ದೊಡ್ಡ ರಿಯಾಯಿತಿಗಳನ್ನು ನೀಡಿದೆ.

ಐಫೋನ್ ಗ್ರಾಹರನ್ನು ತನ್ನ ಕಡೆ ಸಳಡಯಲು ಫ್ಲಿಪ್‌ಕಾರ್ಟ್ ಐಫೋನ್ 16 ಬೆಲೆಗಳನ್ನು ಅತಿ ಕಡಿಮೆಮ ಬೆಲೆಗಳಿಗೆ ಘೋಷಿಸಿದೆ. ಸೆಪ್ಟೆಂಬರ್ 2024 ರಲ್ಲಿ 79,999 ರೂ.ಗಳಿಗೆ ಬಿಡುಗಡೆಯಾದ ಐಫೋನ್ 59,999 ರೂ.ಗಳಿಗೆ ಲಭ್ಯವಿರುತ್ತದೆ. ಅಂದರೆ ಬರೋಬ್ಬರಿ 20,000 ರೂ. ರಿಯಾಯಿತಿ ಐಫೋನ್ ಬೆಲೆಗಳ ಮೇಲೆ ಇರುತ್ತದೆ.
128GB, 256GB ಮತ್ತು 512GB ಐಫೋನ್ 16 ಬೆಲೆಗಳು ಕಡಿಮೆ ಬೆಲೆಗೆ ಸಿಗುತ್ತದೆ.
ಐಫೋನ್ 16 6.1 ಇಂಚಿನ XDR ಸೂಪರ್ ರೆಟಿನಾ OLED ಡಿಸ್‌ಪ್ಲೇಯನ್ನು ಹೊಂದಿದೆ. ಇದರ ಪಿಕ್ಸೆಲ್ ಸಾಮಾಥ್ಯ 460 ppi (ಪಿಕ್ಸೆಲ್‌ಗಳು ಪ್ರತಿ ಇಂಚಿಗೆ), 60Hz ರಿಫ್ರೆಶ್ ದರ ಮತ್ತು 2,000 nits ಅನ್ನು ಒಳಗೊಂಡಿದೆ.
ಐಫೋನ್ 16 ಹೊರಗಿನ ಕವರ್ ಕೇಸ್ ಏರೋಸ್ಪೇಸ್-ಗ್ರೇಡ್ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆ ಮತ್ತು, ಡಿಸ್‌ಪ್ಲೇಯನ್ನು ಸೆರಾಮಿಕ್ ಶೀಲ್ಡ್‌ನಿಂದ ಆವೃತ್ತಗೊಂಡಿದೆ ಮಾರುಕಟ್ಟೆಯಲ್ಲಿರುವ ಯಾವುದೇ ಇತರ ಸ್ಮಾರ್ಟ್‌ಫೋನ್‌ನಲ್ಲಿರುವ ಗಾಜಿನ ಗಿಂತ 2 ಪಟ್ಟು ಗಟ್ಟಿಮುಟ್ಟನ್ನು ಒಳಗೊಂಡಿದೆ. ಸಾಧನವು IP68 ನೀರು ಮತ್ತು ಧೂಳು ನಿರೋಧಕ ರೇಟಿಂಗ್‌ನೊಂದಿಗೆ ಬರುವುದರಿಂದ ನೀರಿಗೆ ಹಾಕಿದ್ದರು ಸಹ ಏನು ಆಗುವುದಿಲ್ಲ.
ಇದು ಡ್ಯುಯಲ್-ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದೆ. ಮುಖ್ಯ 48MP ವೈಡ್-ಆಂಗಲ್ (f/1.6, 2x ಟೆಲಿಫೋಟೋ) ಮತ್ತು 12MP 120°-ಡಿಗ್ರಿ ಅಲ್ಟ್ರಾ ವೈಡ್ (f/2.2) ಆಟೋಫೋಕಸ್ ಸೆಕೆಂಡರಿ ಕ್ಯಾಮೆರಾವನ್ನು ಹಿಂಭಾಗದಲ್ಲಿ ಮ್ಯಾಕ್ರೋ ಫೋಟೋಗ್ರಫಿ ಮತ್ತು LED ಫ್ಲ್ಯಾಷ್‌ನೊಂದಿಗೆ ಹೊಂದಿದೆ. ಇದು 12MP ಟೂಡೆಪ್ (f/1.9) ಮುಂಭಾಗದ ಕ್ಯಾಮೆರಾ, ಫೋಕಸ್ ಪಿಕ್ಸೆಲ್‌ಗಳೊಂದಿಗೆ ಆಟೋಫೋಕಸ್ ಅನ್ನು ಸಹ ಬಳಗೊಂಡಿದೆ.
ಇದು ಆಪಲ್ A18 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು,ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ. ನೋಟ್ಸ್, ಕೀನೋಟ್ಸ್, ಐಮೆಸೇಜ್, ಮೇಲ್, ಫೋಟೋಸ್ ಅಪ್ಲಿಕೇಶನ್ ಮತ್ತು ಎಲ್ಲಾ ಆಪಲ್ ಸಾಧನಗಳಲ್ಲಿ ಸ್ಥಾಪಿಸಲಾದ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳಂತಹ ಸ್ಥಳೀಯ ಅಪ್ಲಿಕೇಶನ್‌ಗಳನ್ನು ಒಳಗೊಂಡಂತೆ ಇದು ಸಿಸ್ಟಮ್‌ವೈಡ್‌ನಲ್ಲಿ ಸರಾಗವಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ, ಆಪಲ್ ಸಿರಿ ಮತ್ತು ಇತರ ಆಪಲ್ ಇಂಟೆಲಿಜೆನ್ಸ್-ಬೆಂಬಲಿತ ಅಪ್ಲಿಕೇಶನ್‌ಗಳನ್ನು ಓಪನ್‌ಎಐನ ಚಾಟ್‌ಜಿಪಿಟಿ-40 ನೊಂದಿಗೆ ಸಂಯೋಜಿಸುವ ಆಯ್ಕೆಯನ್ನು ನೀಡುತ್ತದೆ, ಇದು ವರ್ಧಿತ ಬಳಕೆದಾರ ಅನುಭವವನ್ನು ನೀಡುತ್ತದೆ.
ಧ್ವನಿ ಮತ್ತು ಪಠ್ಯ ಪ್ರತಿಕ್ರಿಯೆಗಳ ಜೊತೆಗೆ, ಇಮೇಜ್ ಪ್ಲೇಗ್ರೌಂಡ್‌ನೊಂದಿಗೆ ಸಂಯೋಜಿಸಲ್ಪಟ್ಟ ಆಪಲ್ ಇಂಟೆಲಿಜೆನ್ಸ್, ಐಫೋನ್‌ಗಳಲ್ಲಿ ಹೆಚ್ಚಿನ ಉತ್ತಮ ಗುಟ್ಟಮಟ್ಟದ ಫೋಟೋಗಳನ್ನು ತಗೆಯಲು ಸಹಾಯಕವಾಗುತ್ತದೆ.


Click it and Unblock the Notifications