ಫ್ಲಿಪ್ ಕಾರ್ಟ್ ನಿಂದ ಗುರುವಾರ ನೋಕಿಯಾ ಸ್ಮಾರ್ಟ್ ಟಿವಿ ಬಿಡುಗಡೆ ಮಾಡಲಾಗಿದೆ. ಸದ್ಯಕ್ಕೆ ನೋಕಿಯಾದಿಂದ 55 ಇಂಚಿನ ಟಿವಿ ಮಾತ್ರ ತಯಾರಿಸಿದ್ದು, ಬೆಲೆ 41,999 ರುಪಾಯಿ ನಿಗದಿ ಮಾಡಲಾಗಿದೆ. ಡಿಸೆಂಬರ್ ಹತ್ತನೇ ತಾರೀಕಿನಿಂದ ಫ್ಲಿಪ್ ಕಾರ್ಟ್ ನಲ್ಲಿ ಖರೀದಿಗೆ ಲಭ್ಯವಾಗಲಿದೆ.
ನೋಕಿಯಾ ಸ್ಮಾರ್ಟ್ ಟಿವಿಯ ಅಕೌಸ್ಟಿಕ್ಸ್ ಅನ್ನು ಜೆಬಿಎಲ್ ರೂಪಿಸಿದೆ. ಆದ್ದರಿಂದ ಧ್ವನಿಯ ಗುಣಮಟ್ಟ ಅತ್ಯುತ್ತಮವಾಗಿರುತ್ತದೆ ಎನ್ನಲಾಗಿದೆ. ಜೆಬಿಎಲ್ ಇದೇ ಮೊದಲ ಬಾರಿಗೆ ಭಾರತದಲ್ಲಿ ಟಿವಿಯೊಂದರಲ್ಲಿ ಆಡಿಯೋ ವ್ಯವಸ್ಥೆ ಒದಗಿಸಿದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.
ಟಿವಿಯಲ್ಲಿ ಇಪ್ಪತ್ನಾಲ್ಕು ವ್ಯಾಟ್ ನ ಬಿಲ್ಟ್ ಇನ್ ಸ್ಪೀಕರ್ ಗಳಿವೆ. ಡಿಟಿಎಸ್ ಟ್ರೂ ಸರೌಂಡ್ ಮತ್ತು ಡಾಲ್ಬಿ ಆಡಿಯೋ ಮೂಲಕ ಒಟ್ಟಾರೆ ಹೊಸ ಆಡಿಯೋ ಅನುಭವವನ್ನು ನೀಡುತ್ತದೆ. ಅಂದ ಹಾಗೆ ಫ್ಲಿಪ್ ಕಾರ್ಟ್ ನಿಂದ ಆರಂಭಿಕ ಕೊಡುಗೆಯಾಗಿ ನೋಕಿಯಾ ಬ್ರ್ಯಾಂಡೆಡ್ ಸ್ಮಾರ್ಟ್ ಟಿವಿಗೆ ಸಂಪೂರ್ಣ ಪ್ರೊಟೆಕ್ಷನ್ ಒದಗಿಸಲಿದ್ದು, ಅದಕ್ಕಾಗಿ 999 ರುಪಾಯಿ ಪಾವತಿಸಬೇಕು.

ಇಷ್ಟು ಮೊತ್ತ ಪಾವತಿಸಿದರೆ ಮೂರು ವರ್ಷದ ಅವಧಿಗೆ ಉತ್ಪಾದನೆ ಲೋಪ- ದೋಷಗಳು, ಆಕ್ಸಿಡೆಂಟಲ್ ಡ್ಯಾಮೇಜ್ ಕವರ್ ಆಗುತ್ತದೆ. ಜತೆಗೆ ಮೂರು ವರ್ಷದ ಕೊನೆಗೆ ಬೈ ಬ್ಯಾಕ್ ಮೌಲ್ಯದ ಖಾತ್ರಿ ನೀಡಲಾಗುತ್ತದೆ. ಆಂಡ್ರಾಯಿಡ್ ಆಪರೇಟಿಂಗ್ ಸಿಸ್ಟಮ್ ಜತೆ ಟಿವಿ ಬರಲಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications