For Quick Alerts
ALLOW NOTIFICATIONS  
For Daily Alerts

ಗ್ರಾಹಕ ಇಂಟರ್ನೆಟ್ ವ್ಯವಸ್ಥೆಯ ಅಭಿವೃದ್ಧಿಗೆ ಫ್ಲಿಪ್‌ಕಾರ್ಟ್‌ನಿಂದ $3.6 ಬಿಲಿಯನ್ ಸಂಗ್ರಹ

|

ಭಾರತದ ಪ್ರಮುಖ ಗ್ರಾಹಕ ಇಂಟರ್ನೆಟ್‌ ವ್ಯವಸ್ಥೆಯಾದ ಫ್ಲಿಪ್‌ಕಾಟ್‌ ಗ್ರೂಪ್‌, ಭಾರತದಲ್ಲಿ ಡಿಜಿಟಲ್‌ ವಾಣಿಜ್ಯ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಮತ್ತು ಮುನ್ನೆಲೆಗೆ ತರುವ ಉದ್ದೇಶದಿಂದ ಇಂದು $3.6 ಬಿಲಿಯನ್‌ ಹೂಡಿಕೆಯನ್ನು ಸಂಗ್ರಹಿಸಿದ್ದಾಗಿ ಹೇಳಿದೆ. ಈ ಹೂಡಿಕೆಯನ್ನು ಪ್ರಮುಖ ಹೂಡಿಕೆದಾರರದಾದ ಜಾಗತಿಕ ಹೂಡಿಕೆದಾರರಾದ ಸವರಿನ್‌ ಫಂಡುಗಳು, ಖಾಸಗಿ ಈಕ್ವಿಟಿ ಮತ್ತು ವಾಲ್‌ಮಾಟ್‌ನ ಪೂರಕ ಹೂಡಿಕೆ ವ್ಯವಸ್ಥೆಗಳ ಮೂಲಕ ಮಾಡಲಾಗಿದೆ.

ಈ ಹೂಡಿಕೆ ಕ್ರೋಡೀಕರಣವನ್ನು ಹಣಕಾಸು ಹೂಡಿಕೆದಾರರಾದ ಜಿಐಸಿ, ಕೆನಡಾದ ನಿವೃತ್ತಿ ವೇತನ ಹೂಡಿಕೆ ಮಂಡಳಿ (ಸಿಪಿಪಿ ಇನ್‌ವೆಸ್ಟ್‌ಮೆಂಟ್ಸ್‌), ಸಾಫ್ಟ್‌ ಬ್ಯಾಂಕ್‌ ವಿಷನ್‌ ಫಂಡ್‌ ಮತ್ತು ವಾಲ್‌ಮಾಟ್‌ ಮತ್ತು ಡಿಸ್‌ರಪ್ಟ್‌ ಎಡಿಯ ಸವರಿನ್‌ ಫಂಡಗಳು, ಖತಾರ್‌ ಇನ್‌ವೆಸ್ಟ್‌ ಮೆಂಟ್‌ ಅಥಾರಿಟಿ, ಖಝಾನಾ ನಾಸಿನಲ್‌ ಬೆರ್ಹಾದ್, ಮರ್ಕ್ಯೂಯಿ ಇನ್‌ವೆಸ್ಟರ್ಸ್‌ ಟೀಸೆಂಟ್‌, ವಿಲ್ಲೋಗ್ಬಿ ಕ್ಯಾಪಿಟಲ್‌, ಅಂತಾರಾ ಕ್ಯಾಪಿಟಲ್‌, ಫ್ರಾಂಕ್ಲಿನ್‌ ಟೆಂಪ್ಲೆಟನ್‌ ಮತ್ತು ಟೈಗರ್‌ ಗ್ಲೋಬಲ್‌ಗಳ ಮೂಲಕ ಸಂಗ್ರಹಿಸಲಾಗಿದೆ. ಈ ಗುಂಪುಗಳ ಒಟ್ಟು ಹೂಡಿಕೆ ನಂತರದ ಮೊತ್ತವು $37.6 ಬಿಲಿಯನ್‌ ಆಗಿರಲಿದೆ.

ಫ್ಲಿಪ್‌ಕಾರ್ಟ್‌ನಿಂದ $3.6 ಬಿಲಿಯನ್ ಸಂಗ್ರಹ

ಈ ಬೆಳವಣಿಗೆಯ ಕುರಿತಾಗಿ ಪ್ರತಿಕ್ರಿಯಿಸಿದ ಫ್ಲಿಪ್‌ಕಾರ್ಟ್‌ ಸಮೂಹದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಕಲ್ಯಾಣ್‌ ಕೃಷ್ಣಮೂರ್ತಿ ಅವರು, "ಗ್ರಾಹಕರಿಗೆ ಸುಲಭ ಲಭ್ಯತೆ ಮತ್ತು ಮೌಲ್ಯಗಳೊಂದಿಗೆ ಭಾರತದಲ್ಲಿ ಗ್ರಾಹಕ ಅಂತರ್ಜಾಲ ಪರಿಸರ ವ್ಯವಸ್ಥೆಯನ್ನು ಪರಿವರ್ತನೆಗೊಳಿಸಲು ಫ್ಲಿಪ್‌ಕಾರ್ಟ್‌ ಬದ್ಧವಾಗಿದೆ. ಹೂಡಿಕೆದಾರರ ಹೂಡಿಕೆಯು ಭಾರತದಲ್ಲಿ ಡಿಜಿಟಲ್‌ ವಾಣಿಜ್ಯದ ಮೇಲಿನ ಭರವಸೆ ಮತ್ತು ಫ್ಲಿಪ್‌ಕಾರ್ಟ್‌ ಮೇಲಿನ ಭರವಸೆಯನ್ನು ಪ್ರತಿಬಿಂಬಿಸುತ್ತದೆ. ನಾವು ಗ್ರಾಹಕರ ಸೇವೆಯಲ್ಲಿ ತೊಡಗಿಕೊಂಡಿರುವಂತೆ ಇದು ಕಿರಾಣಿ ಅಂಗಡಿಗಳೂ ಸೇರಿದಂತೆ ಭಾರತದ ಲಕ್ಷಾಂತರ ಸಣ್ಣ ಮತ್ತು ಮಧ್ಯಮ ವ್ಯಾಪಾರ ನಡೆಸುವ ಉದ್ಯಮದಾರರ ಅಭಿವೃದ್ಧಿಗೆ ನೆರವು ನೀಡಲಿದೆ '' ಎಂದು ಹೇಳಿದ್ದಾರೆ.

ಭಾರತದ ಡಿಜಿಟಲ್‌ ವಾಣಿಜ್ಯಿಕ ವ್ಯವಸ್ಥೆಯ ಮೇಲೆ ಜಾಗತಿಕ ಹೂಡಿಕೆದಾರರಿಗಿರುವ ನಂಬಿಕೆಯನ್ನು ಇದು ಪ್ರತಿಬಿಂಬಿಸುತ್ತಿದೆ. ಇದರೊಂದಿಗೆ ಫ್ಲಿಪ್‌ಕಾರ್ಟ್‌, ಭಾರತದಲ್ಲಿ ತ್ವರಿತವಾಗಿ ಬೆಳವಣಿಗೆಯಾಗುತ್ತಿರುವ ಗ್ರಾಹಕ ವಲಯಕ್ಕೆ ಬೇಕಾದ ರೀತಿಯಲ್ಲಿ ಜನರು, ತಂತ್ರಜ್ಞಾನ, ಪೂರೈಕೆ ವ್ಯವಸ್ಥೆ, ಮೂಲಸೌಕರ್ಯ ವ್ಯವಸ್ಥೆಗಳನ್ನು ಸ್ಥಾಪಿಸುವತ್ತ ಮುಂದುವರಿಯಲಿದೆ.

ಭಾರತದಾದ್ಯಂತ ಫ್ಲಿಪ್‌ಕಾರ್ಟ್‌ 350 ಮಿಲಿಯನ್‌ ನೋಂದಾಯಿತ ಬಳಕೆದಾರರನ್ನು ಹೊಂದಿದ್ದು, ಪ್ರಮುಖ ವಿಭಾಗಗಳಾದ ಫ್ಯಾಶನ್‌, ಪ್ರವಾಸ, ದಿನಸಿ ವಸ್ತುಗಳು ಮುಂತಾದುವುಗಳಲ್ಲಿ ಹೂಡಿಕೆ ಮಾಡುತ್ತಿದೆ. ಇದು ಭಾರತದ ಪ್ರಬುದ್ಧಗೊಳ್ಳುತ್ತಿರುವ ಡಿಜಿಟಲ್‌ ವಾಣಿಜ್ಯ ಉದ್ಯಮ ಕ್ಷೇತ್ರವನ್ನು ಪ್ರತಿಬಿಂಬಿಸುತ್ತದೆ. ಸಮೂಹದ ಫ್ಯಾಶನ್‌ ಘಟಕವಾದ ಮಿಂತ್ರಾ, ಈ ವಿಭಾಗದಲ್ಲಿ ನಾಯಕನಾಗಿ ಹೊರಹೊಮ್ಮಿದ್ದು, ಫ್ಲಾಶನ್‌ ಕ್ಷೇತ್ರದಲ್ಲಿ ಸಮಗ್ರ ಮತ್ತು ಅತ್ಯಾಧುನಿಕ ಆಯ್ಕೆಗಳೊಂದಿಗೆ ಇತ್ತೀಚಿನ ಸಂಗ್ರಹಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ.

ಫ್ಲಿಪ್‌ಕಾರ್ಟ್‌ ಮಾರುಕಟ್ಟೆ ತಾಣದಲ್ಲಿ 3 ಲಕ್ಷಕ್ಕೂ ಅಧಿಕ ನೋಂದಾಯಿತ ಮಾರಾಟಗಾರರಿದ್ದು, ಇವರಲ್ಲಿ ಶೇ. 60ರಷ್ಟಕ್ಕೂ ಹೆಚ್ಚಿನವರು 2ನೇ ಹಂತದ ನಗರದವರು. ಜತೆಗೆ ಭಾರತಾದ್ಯಂತ 1.6 ಮಿಲಿಯನ್‌ಗೂ ಅಧಿಕ ಕಿರಾಣಿ ಅಂಗಡಿಯವರೊಂದಿಗೆ ಪ್ಲಿಪ್‌ಕಾರ್ಟ್‌ ಸಂಯೋಜನೆ ಹೊಂದಿದ್ದು, ಕೊನೆಯವರೆಗೆ ಪೂರೈಕೆ ವ್ಯವಸ್ಥೆ, ಕಿರಾಣಿಗಳಿಗೆ ಪೂರಕ ಉದ್ಯೋಗಾವಕಾಶವನ್ನು ಒದಗಿಸುತ್ತಿದೆ.

Read more about: flipkart fund
English summary

Flipkart Raises $3.6 Billion In Funding At $37 Billion Valuation

The Flipkart Group, which is preparing for a public listing, on Monday said that it has raised $3.6 billion as a part of fresh funding led by financial investors GIC, Canada Pension Plan Investment Board (CPP Investments), and others
Story first published: Monday, July 12, 2021, 19:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X