ಭಾರತದ ಇ-ಕಾಮರ್ಸ್ ಕಂಪನಿಯಾಗಿರುವ ಫ್ಲಿಪ್‌ಕಾರ್ಟ್ ತನ್ನ ಮಾರಾಟದ ಉತ್ಪನ್ನಗಳನ್ನು ಪ್ಯಾಕ್ ಮಾಡುವ ವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ಬದಲಾಯಿಸಿ ಪರಿಸರ ಸ್ನೇಹಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.
ಶೂನ್ಯ ತ್ಯಾಜ್ಯ ಉತ್ಪಾದನೆ ಪರಿಕಲ್ಪನೆಯ ಯೋಜನೆ ರೂಪಿಸಿರುವ ಫ್ಲಿಪ್‌ಕಾರ್ಟ್ ತನ್ನ ಮಾರಾಟದ ಉತ್ಪನ್ನಗಳ ಪ್ಯಾಕೇಕಿಂಗ್ ಪ್ಲಾಸ್ಟಿಕ್ ಬಳಕೆಯ ಪ್ರಮಾಣವನ್ನು ಹಂತ ಹಂತವಾಗಿ ಕಡಿಮೆ ಮಾಡುತ್ತಿದೆ. ಇದರ ಪರಿಣಾಮವಾಗಿ ತನ್ನದೇ ಆದ ವಲಯದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸುಮಾರು 50 ಪರ್ಸೆಂಟ್‌ರಷ್ಟು ಕಡಿಮೆ ಮಾಡಿದೆ.
ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಗುರಿಯನ್ನು ಹೊಂದಿರುವ ಫ್ಲಿಪ್‌ಕಾರ್ಟ್ ಮಹಾರಾಷ್ಟ್ರದಲ್ಲಿ ತನ್ನದೇ ಸ್ವಂತ ಸಪ್ಲೈ ಚೇನ್‍ನಲ್ಲಿ ಮೇ 1, 2020 ರಿಂದ ಸಂಪೂರ್ಣವಾಗಿ ಕಾಗದದ ಪೊಟ್ಟಣಗಳಲ್ಲಿ ಪ್ಯಾಕ್ ಮಾಡುವ ಮೂಲಕ ಪ್ಲಾಸ್ಟಿಕ್ ಮುಕ್ತಗೊಳಿಸಿದೆ.

ಜೊತೆಗೆ ಪರಿಸರ ಸ್ನೇಹಿ ಪೇಪರ್ ಶ್ರೆಡ್ಸ್ ಬಳಕೆ, ಪಾಲಿ ಪೌಚ್‌ಗಳ ಬದಲಿಗೆ ಪುನರ್ ಬಳಕೆ ಮಾಡಬಹುದಾದ ಪೇಪರ್ ಬ್ಯಾಗ್‌ಗಳ ಬಳಕೆ, ಬಬಲ್ ರ್ಯಾಪ್‍ಗಳು ಮತ್ತು ಏರ್ ಬ್ಯಾಗ್‌ಗಳ ಬದಲಾಗಿ ಕಾರ್ಟನ್ ವೇಸ್ಟ್ ಶ್ರೆಡೆಡ್ ಉತ್ಪನ್ನಗಳಂತಹ ಹಲವಾರು ಬಗೆಯ ಪರಿಸರಸ್ನೇಹಿ ಉತ್ಪನ್ನಗಳನ್ನು ಬಳಕೆ ಮಾಡಲು ಆರಂಭಿಸಿದೆ.
ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ಸೆಕ್ಯೂರಿಟಿ ಬ್ಯಾಗ್ ಗಳಿಗೆ ಬದಲಾಗಿ ಕಾಗದದಿಂದ ತಯಾರಿಸಲಾದ ಸೆಕ್ಯೂರಿಟಿ ಎನ್ವಲಪ್‍ಗಳ ಬಳಕೆ ಮಾಡಲಾಗುತ್ತಿದೆ. ರಾಪಿಂಗ್ ಫಿಲ್ಮ್‍ಗಳ ಬದಲಾಗಿ ಪುನರ್‍ಬಳಕೆ ಮಾಡಿದ ಕಾಗದದಿಂದ ತಯಾರಿಸಲಾಗಿರುವ ಕುಶನಿಂಗ್ ಉತ್ಪನ್ನಗಳನ್ನು ಬಳಸಲಾಗುತ್ತಿದೆ.
ಫ್ಲಿಪ್‍ಕಾರ್ಟ್ ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಮತ್ತು ಇತರೆ ಪರಿಸರ ಸ್ನೇಹಿ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ಸಂಪರ್ಕದಲ್ಲಿದ್ದುಕೊಂಡು ಸುಸ್ಥಿರ ಪರಿಸರ ನಿರ್ಮಾಣದತ್ತ ಹೆಜ್ಜೆ ಇರಿಸಿದೆ.


Click it and Unblock the Notifications