For Quick Alerts
ALLOW NOTIFICATIONS  
For Daily Alerts

ಹಬ್ಬದ ಸೀಸನ್ ಮಾರಾಟ: ಅಮೆಜಾನ್ ಹಿಂದಿಕ್ಕಿದ ಫ್ಲಿಪ್ ಕಾರ್ಟ್

|

ಹಬ್ಬದ ಸೀಸನ್ ಮಾರಾಟದ ಸ್ಪರ್ಧೆಯಲ್ಲಿ ಅಮೆಜಾನ್ ಗಳಿಕೆಯನ್ನು ವಾಲ್-ಮಾರ್ಟ್‌ ಒಡೆತನದ ಫ್ಲಿಪ್‌ಕಾರ್ಟ್ ಹಿಂದಿಕ್ಕಿದೆ. ಅಕ್ಟೋಬರ್ 16 ರಿಂದ 21ರ ಹಬ್ಬದ ಸೇಲ್ ಸಂದರ್ಭದಲ್ಲಿ ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ಎರಡೂ ಭರ್ಜರಿ ರಿಯಾಯಿತಿ ಘೋಷಿಸಿದ್ದವು. ಆದರೆ, ಅಮೆಜಾನ್ ಗೆ ಹೋಲಿಸಿದರೆ ಫ್ಲಿಪ್ ಕಾರ್ಟ್ ನಲ್ಲಿ ಸ್ಮಾರ್ಟ್ ಫೋನ್ ಮಾರಾಟ ಎರಡು ಪಟ್ಟು ಅಧಿಕವಾಗಿದೆ ಎಂದು ಮಾರುಕಟ್ಟೆ ತಜ್ಞ ಸಂಸ್ಥೆ ರೆಡ್ ಸೀರ್ ವರದಿ ಮಾಡಿದೆ.

ಮೊದಲ ವಾರದ ಇ ಕಾಮರ್ಸ್ ಮಾರಾಟ ವರದಿಯಂತೆ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಒಟ್ಟಾಗಿ 90 ಪ್ರತಿಶತದಷ್ಟು ಮಾರಾಟವನ್ನು ಕಂಡಿವೆ. ಹಬ್ಬದ ಅವಧಿಯಲ್ಲಿ ಏಳು ದಿನಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಮೊದಲ ವಾರದಲ್ಲಿ ಆನ್‌ಲೈನ್ ಮಾರಾಟವು 55 ಪ್ರತಿಶತದಷ್ಟು ಹೆಚ್ಚಾಗಿದೆ. ಅಂದಾಜು 29,000 ಕೋಟಿ ರೂ. ಈ ವರ್ಷ 68% ಮಾರಾಟಗಳು ಫ್ಲಿಪ್‌ಕಾರ್ಟ್‌ನಲ್ಲಿ ದಾಖಲಾಗಿವೆ.

 

ಆನ್‌ಲೈನ್ ಶಾಪರ್‌ಗಳ ಸಂಖ್ಯೆ 52 ಮಿಲಿಯನ್ ತಲುಪಿದೆ. ಕಳೆದ ವರ್ಷ ಈ ಸಂಖ್ಯೆ 28 ಮಿಲಿಯನ್ ಆಗಿತ್ತು. ರೆಡ್ ಸಿಯರ್ ನಿರ್ದೇಶಕರು ಈ ವರ್ಷ ಆನ್‌ಲೈನ್ ಮಾರಾಟವು ನಿರೀಕ್ಷೆಗಳನ್ನು ಮೀರಿದೆ ಮತ್ತು ಹಬ್ಬದ ಋತುವಿನ ಆರಂಭದಲ್ಲಿ ಘೋಷಿಸಿದ ರಿಯಾಯಿತಿಗಳು ಫಲ ನೀಡಿವೆ ಎಂದಿದ್ದಾರೆ. ಆನ್‌ಲೈನ್ ಮಾರುಕಟ್ಟೆ ಮಧ್ಯಮ ಮತ್ತು ಸಣ್ಣ ಪಟ್ಟಣಗಳಿಗೆ ವಿಸ್ತರಿಸಿರುವುದೇ ಇದಕ್ಕೆ ಕಾರಣ ಎಂದಿದ್ದಾರೆ.

ಹಬ್ಬದ ಸೀಸನ್ ಮಾರಾಟ: ಅಮೆಜಾನ್ ಹಿಂದಿಕ್ಕಿದ ಫ್ಲಿಪ್ ಕಾರ್ಟ್

2019 ರ ಹಬ್ಬದ ಸಮಯದಲ್ಲಿ, 28 ಮಿಲಿಯನ್ ಮಾರಾಟವು ಮೆಟ್ರೊದಲ್ಲಿ 30 ರಿಂದ 35 ಶೇಕಡಾ, ಶ್ರೇಣಿ 1 ರಲ್ಲಿ 20 ರಿಂದ 25 ಶೇಕಡಾ, ಶ್ರೇಣಿ 2 ರಲ್ಲಿ 45 ರಿಂದ 50 ಶೇಕಡಾ, ಈ ಬಾರಿ (2020) 52 ಮಿಲಿಯನ್, ಇದರಲ್ಲಿ 25 ಮಿಲಿಯನ್ ಮೆಟ್ರೋಗಳು, 18 ಮಿಲಿಯನ್ ಶ್ರೇಣಿ 1, ಟೈರ್ 2 ರಲ್ಲಿ 57. ಆದರೂ ಈ ಬಾರಿ ಅಮೆಜಾನ್ ಮಾರಾಟವು ಶೇಕಡಾ 32 ರಷ್ಟಿದ್ದರೆ, ಫ್ಲಿಪ್‌ಕಾರ್ಟ್ ಗ್ರೂಪ್ ಮಾರಾಟವು ಶೇಕಡಾ 68 ರಷ್ಟಿದೆ. ಮಿಂಟ್ರಾ ಫ್ಲಿಪ್ಕಾರ್ಟ್ ಸ್ವಲ್ಪ ವಿಳಂಬದ ನಂತರ ಅ.29ರಿಂದ ಮತ್ತೆ ಪೂರ್ಣಪ್ರಮಾಣದ ಮಾರಾಟಕ್ಕಿಳಿಯಲಿದೆ.

English summary

Flipkart vs Amazon Sales: Flipkart Have Beaten Amazon During The Festive Sale Between October 16-21

Walmart-owned Flipkart seems to have beaten Amazon fair and square in the first week of the festive sale between October 16-21. A report by market tracker RedSeer Consulting claimed that Flipkart is estimated to have posted a little over double the sales of closest rival Amazon.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X