"ಶೀಘ್ರದಲ್ಲೇ ಕೇಂದ್ರದಿಂದ ಇನ್ನೊಂದು ಸುತ್ತಿನ ಆರ್ಥಿಕ ಪ್ಯಾಕೇಜ್"

ಕೊರೊನಾ ಬಿಕ್ಕಟ್ಟಿನಿಂದ ಪೆಟ್ಟು ಬಿದ್ದಿರುವ ಭಾರತದ ಆರ್ಥಿಕತೆ ಚೇತರಿಕೆಗಾಗಿ ಸದ್ಯದಲ್ಲೇ ಮುಂದಿನ ಕಂತಿನ ಆರ್ಥಿಕ ಪ್ಯಾಕೇಜ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಲಿದ್ದಾರೆ ಎಂದು ಮಂಗಳವಾರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.

ಆರ್ಥಿಕತೆಯ ವಿವಿಧ ವಲಯಗಳಿಂದ ಬಂದಿರುವ ಸಲಹೆ ಹಾಗೂ ಬೇಡಿಕೆಗಳನ್ನು ಹಣಕಾಸು ಸಚಿವಾಲಯವು ಪರಿಶೀಲನೆ ನಡೆಸುತ್ತಿದೆ ಎಂದು ವರ್ಚುವಲ್ ಕಾರ್ಯಕ್ರಮದಲ್ಲಿ ಮಾಧ್ಯಮಗಳಿಗೆ ಅವರು ತಿಳಿಸಿದ್ದಾರೆ.

"ನಾವು ಆ ವಿಚಾರ ಚರ್ಚೆ ನಡೆಸುತ್ತಿದ್ದೇವೆ. ಇಂಥದ್ದೇ ದಿನಾಂಕ ಎಂದು ನನಗೆ ಹೇಳಲು ಕಷ್ಟ. ವಿವಿಧ ವಲಯಗಳಿಂದ ನಾನಾ ಬೇಡಿಕೆ ಮತ್ತು ಸಲಹೆಗಳು ಬಂದಿವೆ. ಅವುಗಳ ಪರಿಶೀಲನೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಬಹಿರಂಗ ಮಾಡುತ್ತೇವೆ. ಹಣಕಾಸು ಸಚಿವೆಯೇ ಈ ಬಗ್ಗೆ ಮಾತನಾಡಲಿದ್ದಾರೆ," ಎಂದು ಅವರು ಹೇಳಿದ್ದಾರೆ.

ಬೇಡಿಕೆ ಹೆಚ್ಚಾಗಲಿ ಮತ್ತು ಬಂಡವಾಳ ವೆಚ್ಚಕ್ಕೆ ಪ್ರೋತ್ಸಾಹ ಸಿಗಲಿ ಎಂಬ ಕಾರಣಕ್ಕೆ ಕಳೆದ ತಿಂಗಳು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೆಲವು ಘೋಷಣೆಗಳನ್ನು ಮಾಡಿದ್ದರು. ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡ ನಂತರದ ಮೂರನೇ ಉತ್ತೇಜನಾ ಪ್ಯಾಕೇಜ್ ಅದಾಗಿತ್ತು.

ಕಳೆದ ಮಾರ್ಚ್ ತಿಂಗಳಲ್ಲಿ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನಾ ಅಡಿಯಲ್ಲಿ 1.70 ಲಕ್ಷ ಕೋಟಿ ಹಾಗೂ ಆತ್ಮನಿರ್ಭರ್ ಭಾರತ್ ಅಭಿಯಾನ್ ಪ್ಯಾಕೇಜ್ ಅಡಿಯಲ್ಲಿ 20.97 ಲಕ್ಷ ಕೋಟಿ ರುಪಾಯಿಯನ್ನು ಕೇಂದ್ರದಿಂದ ಘೋಷಣೆ ಮಾಡಲಾಗಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+