ಕೇಂದ್ರ ಸರ್ಕಾರದ ಆರ್ಥಿಕ ಪ್ಯಾಕೇಜ್ ಕೊನೆ ಕಂತು @ 11 am

'ಆತ್ಮ ನಿರ್ಭರ್ ಭಾರತ್' ಪ್ಯಾಕೇಜ್ 20 ಲಕ್ಷ ಕೋಟಿ ರುಪಾಯಿಯ ಕೊನೆ ಕಂತಿನ ಮಾಹಿತಿಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ (ಮೇ 17, 2020) ಬೆಳಗ್ಗೆ 11ಕ್ಕೆ ನೀಡಲಿದ್ದಾರೆ. ಶನಿವಾರ ಮಾತನಾಡಿದ್ದ ನಿರ್ಮಲಾ, ಕಲ್ಲಿದ್ದಲು ವಲಯದಲ್ಲಿ ಖಾಸಗಿ ವಲಯ ಭಾಗವಹಿಸುವುದರಿಂದ 50 ಸಾವಿರ ಕೋಟಿ ರುಪಾಯಿ ಮೂಲಸೌಲರ್ಯ ಅಭಿವೃದ್ಧಿ ಆಗುತ್ತದೆ. ಕೇಂದ್ರ ಸರ್ಕಾರವು ಸ್ಪರ್ಧಾತ್ಮಕತೆ ಹಾಗೂ ಪಾರದರ್ಶಕತೆ ತರುತ್ತದೆ ಎಂದಿದ್ದರು.

ಇನ್ನು ಶುಕ್ರವಾರದಂದು ನಿರ್ಮಲಾ ಸೀತಾರಾಮನ್ ಅವರು 1 ಲಕ್ಷ ಕೋಟಿ ರುಪಾಯಿ ಕೃಷಿ ಮೂಲಸೌಕರ್ಯ ನಿಧಿ ಸ್ಥಾಪನೆ, ಕಿರು ಆಹಾರ ಸಂಸ್ಥೆಗಳ ಸ್ಥಾಪನೆಗೆ 10 ಸಾವಿರ ಕೋಟಿ ರುಪಾಯಿ ಘೋಷಣೆ ಮಾಡಿದ್ದರು. ಇದರ ಜತೆಗೆ ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿಗೆ ಪ್ರಸ್ತಾವ ಮಾಡಿದ್ದರು. ಆ ಮೂಲಕ ರೈತರಿಗೆ ಉತ್ತಮ ಬೆಲೆ ದೊರೆಯಬೇಕು ಹಾಗೂ ಸರಕು ಪೂರೈಕೆಗೆ ಯಾವುದೇ ಮಿತಿ ವಿಧಿಸಬಾರದು ಎಂಬ ಉದ್ದೇಶ ಇಟ್ಟುಕೊಳ್ಳಲಾಗಿದೆ.

ಕಳೆದ ಗುರುವಾರದಂದು "ಒಂದು ದೇಶ ಒಂದು ಪಡಿತರ ಚೀಟಿ" ಮೂಲಕ ವಲಸಿಗ ಕಾರ್ಮಿಕರಿಗೆ ಆಹಾರ ಧಾನ್ಯ ಪೂರೈಕೆ, ಕೈಗೆಟುಕುವ ದರದಲ್ಲಿ ಬಾಡಿಗೆ ನಗರ ಪ್ರದೇಶದಲ್ಲಿ ವಸತಿ ಸಮುಚ್ಚಯ ನಿರ್ಮಾಣ ಮಾಡುವ ಬಗ್ಗೆ ಕೂಡ ಪ್ಯಾಕೇಜ್ ನಲ್ಲಿ ಘೋಷಣೆ ಮಾಡಿದ್ದರು.

ಕೇಂದ್ರ ಸರ್ಕಾರದ ಆರ್ಥಿಕ ಪ್ಯಾಕೇಜ್ ಕೊನೆ ಕಂತು @ 11 am

ಕೊರೊನಾದ ಕಾರಣಕ್ಕೆ ಆರ್ಥಿಕತೆಗೆ ಹೊಡೆತ ಬಿದ್ದಿರುವಾಗ ಸ್ವಾವಲಂಬಿ ಭಾರತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕ ಪ್ಯಾಕೇಜ್ ಬಗ್ಗೆ ಘೋಷಣೆ ಮಾಡಿದ್ದರು. ಆ ನಂತರ ಕಂತುಗಳಲ್ಲಿ ಯಾವ ವಲಯ ಹಾಗೂ ಉದ್ದೇಶಕ್ಕೆ ಎಷ್ಟು ಮೊತ್ತ ಎಂಬ ಬಗ್ಗೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+