ನಿರ್ಮಲಾ ಸೀತಾರಾಮನ್ ರಿಂದ ಎರಡನೇ ಕಂತಿನ ಪ್ಯಾಕೇಜ್ ಘೋಷಣೆ ಇಂದು

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ಪ್ಯಾಕೇಜ್ ನ ಎರಡನೇ ಕಂತಿನ ಮಾಹಿತಿ ನೀಡಲಿದ್ದಾರೆ. ಮೇ 14ರ ಗುರುವಾರ ಸಂಜೆ 4ಕ್ಕೆ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಮುಂದಿನ ಕೆಲವು ಸಮಯದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ "ಆತ್ಮ ನಿರ್ಭರ್ ಅಭಿಯಾನ"ದ ಹೆಸರಿನಲ್ಲಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

ಮೊದಲನೇ ಕಂತಿನಲ್ಲಿ ಬುಧವಾರ ಅವರು ಮಾಹಿತಿ ಹಂಚಿಕೊಂಡರು. ಹದಿನೈದು ಆರ್ಥಿಕ ಹಾಗೂ ರೆಗ್ಯುಲೇಟರಿ ಕ್ರಮಗಳ ವಿವರಣೆ ನೀಡಿದರು. ಎಂಎಸ್ ಎಂಇ, ರಿಯಲ್ ಎಸ್ಟೇಟ್, ಎನ್ ಬಿಎಫ್ ಸಿ, ವಿದ್ಯುತ್ ವಿತರಣೆ ಕಂಪೆನಿಗಳು, ಕಾಂಟ್ರ್ಯಾಕ್ಟರ್ ಗಳು ಮತ್ತು ಸಾಮಾನ್ಯ ವ್ಯಾಪಾರ- ಉದ್ಯಮಗಳಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ಘೋಷಣೆ ಮಾಡಿದರು.

ಪಿಪಿಎಫ್ ಕೊಡುಗೆಗೆ ಸಂಬಂಧಿಸಿದಂತೆ ಕೆಲವು ಕ್ರಮಗಳನ್ನು ಘೋಷಣೆ ಮಾಡಿದರು. ಇನ್ನು ಟಿಡಿಎಸ್, ಟಿಸಿಎಸ್ ಕಡಿತ ವಿಚಾರವಾಗಿ ಕೆಲವು ವಿನಾಯಿತಿಗಳನ್ನು ಘೋಷಣೆ ಮಾಡಿದರು. ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ ನ ಗಡುವನ್ನು ಎಲ್ಲ ವಿಭಾಗದ ತೆರಿಗೆ ಪಾವತಿದಾರರಿಗೆ ನವೆಂಬರ್ 30ರ ತನಕ ವಿಸ್ತರಣೆ ಮಾಡಿದರು.

ನಿರ್ಮಲಾ ಸೀತಾರಾಮನ್ ರಿಂದ ಎರಡನೇ ಕಂತಿನ ಪ್ಯಾಕೇಜ್ ಘೋಷಣೆ ಇಂದು

ಕೊರೊನಾ ವ್ಯಾಪಿಸಿರುವ ಸನ್ನಿವೇಶದಲ್ಲಿ ಕೆಲವು ದಿಟ್ಟ ಕ್ರಮ ಮತ್ತು ಸುಧಾರಣೆಗಳನ್ನು ಕೈಗೊಳ್ಳುವ ಬಗ್ಗೆ ಮೋದಿ ಭರವಸೆ ನೀಡಿದ್ದರು. ಇದೀಗ ಆ ಬಗ್ಗೆ ಜನರು ಎದುರು ನೋಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+