ದಿನಬಳಕೆ ವಸ್ತುಗಳ ಬೆಲೆ ಕನಿಷ್ಠ 5ರಿಂದ 8% ಏರಿಕೆಗೆ ಸಿದ್ಧತೆ

ದಿನಬಳಕೆ ವಸ್ತುಗಳಿಗೆ ಗ್ರಾಹಕರು ಹೆಚ್ಚಿನ ದರ ತೆರಬೇಕಾಗಬಹುದು. ಏಕೆಂದರೆ ಪ್ರಮುಖ ಕಚ್ಚಾ ವಸ್ತುಗಳ ದರ ಏರಿಕೆ ಆಗಿರುವುದರಿಂದ ಎಫ್ ಎಂಸಿಜಿ ಕಂಪೆನಿಗಳು ದಿನಬಳಕೆ ವಸ್ತುಗಳ ಬೆಲೆಯನ್ನು ಏರಿಕೆ ಮಾಡುವ ಬಗ್ಗೆ ಆಲೋಚನೆ ಮಾಡುತ್ತಿವೆ. ಮಾರಿಕೋ ಮತ್ತಿತರ ಕಂಪೆನಿಗಳು ಈಗಾಗಲೇ ಬೆಲೆ ಏರಿಕೆ ಮಾಡಿವೆ. ಡಾಬರ್, ಪಾರ್ಲೆ ಮತ್ತು ಪತಂಜಲಿ ಸೇರಿದಂತೆ ಇತರ ಕಂಪೆನಿಗಳು ಸನ್ನಿವೇಶದ ಪರಾಮರ್ಶೆ ಮಾಡುತ್ತಿವೆ.

ತೆಂಗಿನ ಎಣ್ಣೆ, ಅಡುಗೆ ಎಣ್ಣೆ, ತಾಳೆ ಎಣ್ಣೆ ಸೇರಿದಂತೆ ಇತರ ಕಚ್ಚಾ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಹೀಗೆ ಬೆಲೆ ಏರಿಕೆ ಆಗುವುದರಿಂದ ಕಂಪೆನಿಗಳ ಲಾಭದ ಪ್ರಮಾಣ ಕಡಿಮೆ ಆಗಿದೆ. ಆ ಕಾರಣಕ್ಕೆ ಬೆಲೆ ಏರಿಕೆ ಮಾಡುವುದು ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತವೆ ಮೂಲಗಳು.

ಹಾಗಿದ್ದರೆ ಎಷ್ಟು ಬೆಲೆ ಏರಿಕೆ ಆಗಬಹುದು ಎಂಬ ಪ್ರಶ್ನೆ ಮುಂದಿಟ್ಟರೆ, ಕನಿಷ್ಠ 4ರಿಂದ 5 ಪರ್ಸೆಂಟ್ ಹೆಚ್ಚಳವಾಗಬಹುದು ಎನ್ನುತ್ತಾರೆ. ನೆಲ್ಲಿ ಮತ್ತು ಚಿನ್ನ ಸೇರಿದಂತೆ ಇತರ ಕೆಲವು ಮುಖ್ಯ ಕಚ್ಚಾ ವಸ್ತುಗಳ ಬೆಲೆಯಲ್ಲಿ ಹಣದುಬ್ಬರ ಕಾಣಿಸಿಕೊಂಡಿರುವುದರಿಂದ ಏರಿಕೆ ಅನಿವಾರ್ಯ ಎನ್ನುವುದನ್ನು ಕೆಲವು ಮೂಲಗಳು ಮತ್ತೆ ಖಾತ್ರಿ ಪಡಿಸುತ್ತವೆ.

ದಿನಬಳಕೆ ವಸ್ತುಗಳ ಬೆಲೆ ಕನಿಷ್ಠ 5ರಿಂದ 8% ಏರಿಕೆಗೆ ಸಿದ್ಧತೆ

ಆದರೂ ಹರಿದ್ವಾರ ಮೂಲದ ಪತಂಜಲಿ ಆಯುರ್ವೇದದಿಂದ ಈಗಿನ ಸನ್ನಿವೇಶದಲ್ಲಿ ಕಾದುನೋಡುವ ತೀರ್ಮಾನಕ್ಕೆ ಬಂದಿದೆ. ಇನ್ನು ಸಫೋಲಾ ಮತ್ತು ಪ್ಯಾರಾಶುಟ್ ಬ್ರ್ಯಾಂಡ್ ಹೊಂದಿರುವ ಮಾರಿಕೋಗೆ ಹಣದುಬ್ಬರದ ಹೊರೆ ಬಿದ್ದಿರುವುದರಿಂದ ಬೆಲೆ ಏರಿಕೆಯನ್ನು ಈಗಾಗಲೇ ಮಾಡಿಯಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+