ಗರಿಗರಿಯಾದ ದೋಸೆಯನ್ನು ತಿನ್ನಲು ಯಾರಿಗೆ ಇಷ್ಟ ಆಗುವುದಿಲ್ಲ ಹೇಳಿ ಎಲ್ಲಗೂ ಬಿಸಿ ಬಿಸಿ ದೋಸೆಯೆಂದರೆ ಅಚ್ಚು-ಮೆಚ್ಚು. ಹೌದು, ಬೆಂಗಳೂರು ನಗರದ ದೋಸೆ ಪ್ರಿಯರಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ನಗರದ ಪುರಾತನ ದೋಸೆ ಹೋಟೆಲ್ ಈಗ ತನ್ನ ಶಾಖೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರಂಭ ಮಾಡಿದೆ.
ಬೆಂಗಳೂರು ಟ್ರಾಫಿಕ್ ಜಂಜಾಟದಿಂದ ಹೊರಬಂದು ಲಾಂಗ್ ಡ್ರೈವ್ ಹೋಗಲು ಬಯಸುವವರು ಏರ್‌ಪೋರ್ಟ್‌ಗೆ ಹೋಗಿ ಸಿಟಿಆರ್ ದೋಸೆ ಸವಿದು, ಬಿಸಿ ಬಿಸಿ ಫಿಲ್ಟರ್ ಕಾಫಿ ಕುಡಿದು ವಾಪಸ್ ಬರಬಹುದುಕ್ಕೆ ಒಂದು ಒಳ್ಳೆಯ ಸ್ಥಳವೆಂದು ಹೇಳಬಹುದು.

ಏರ್‌ಪೋರ್ಟ್‌ನಲ್ಲಿ ಆಹಾರಗಳು ಮಳಿಗೆ
ಟರ್ಮಿನಲ್ 2 ರಲ್ಲಿ ನೆಲೆಗೊಂಡಿರುವ ಹೊಸ ಸಿಟಿಆರ್ ಮಳಿಗೆಯು ಪ್ರಯಾಣಿಕರಿಗೆ ದೋಸೆ ಮತ್ತು ಇಡ್ಲಿ ಸೇರಿದಂತೆ ಜನಪ್ರಿಯ ದಕ್ಷಿಣ ಭಾರತದ ಉಪಹಾರಗಳನ್ನು ನೀಡುತ್ತದೆ. ಸ್ಥಳೀಯ ರುಚಿಗಳನ್ನು ಬಯಸುವ ಗ್ರಾಹಕರಿಗೆ ಏರ್‌ಪೋರ್ಟ್‌ನಲ್ಲಿಯೇ ಈಗ ಈ ಆಹಾರಗಳು ಸಿಗಲಿದೆ.
ಬೆಂಗಳೂರು ಏರ್‌ಪೋರ್ಟ್‌ನ ಮುಖ್ಯ ವ್ಯವಸ್ಥಾಪಕ ಹೇಳಿದ್ದೇನು?
ಬೆಂಗಳೂರು ಏರ್‌ಪೋರ್ಟ್‌ನ ಮುಖ್ಯ ವ್ಯವಸ್ಥಾಪಕ ಅಧಿಕಾರಿ (ಸಿಒಒ) ಸತ್ಯಕಿ ರಘುನಾಥ್,'ಇದು ನಾನು ಎದುರಿಸಿದ ಅತ್ಯಂತ ಉತ್ತವಾದ ಅನುಭವ. ಬೆಂಗಳೂರು ಏರ್‌ಪೋರ್ಟ್‌ನ ಟರ್ಮಿನಲ್ 2 ಹೊರಗೆ ಸಿಟಿಆರ್‌ಅನ್ನು ನೋಡಿದ್ದಕ್ಕೆ ಬಹಳ ಖುಷಿ ಇದೆ. ನನ್ನ ಬಾಲ್ಯದ ಹೆಚ್ಚಿನ ದಿನಗಳನ್ನು ಮಲ್ಲೇಶ್ವರಂನಲ್ಲಿಯೇ ಕಳೆದ ನನಗೆ ಇದು ದಿ ಬೆಸ್ಟ್ ಫೀಲಿಂಗ್. ನಾನು ಇಂದು ಮೊದಲ ಬೆಣ್ಣೆ ದೋಸೆಯನ್ನು ಇಲ್ಲಿ ಸವಿದೆ. ರುಚಿಕರವಾಗಿತ್ತು ಎಂದು ಎಕ್ಸ್‌ನಲ್ಲಿ ಅವರು ಅಭಿಪ್ರಾಯನ್ನು ಹಂಚಿಕೊಂಡಿದ್ದಾರೆ.
ಜನರ ಬಹುದಿನಗಳ ಕನಸು ನನಸು
ಬೆಂಗಳೂರಿಗರ ಸ್ಥಳೀಯ ಜನರ ಬಹುದಿನಗಳ ಬೇಡಿಕೆ ಕೊನೆಗೂ ಇದರೊಂದಿಗೆ ಈಡೇರಿದಂತಾಗಿದೆ. ಏರ್‌ಪೋರ್ಟ್‌ನಲ್ಲಿ ಸ್ಥಳೀಯ ಖಾದ್ಯಗಳ ಮಳಿಗೆಗೆ ಹೆಚ್ಚಿನ ಆದ್ಯತೆ ಸಿಗಬೇಕು ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಫುಡ್‌ಚೈನ್‌ಗಳು ಮಾತ್ರವೇ ಮಳಿಗೆಗಳನ್ನು ಹೊಂದಿದ್ದವು.ಈ ಬಗ್ಗೆ ಕಾಮೆಂಟ್ ಮಾಡಿರುವ ಯೂಸರ್ ಒಬ್ಬರು. 'ಫ್ಯಾನ್ಸಿ ಫುಡ್ ಹಾಗೂ ಡೆಸಾರ್ಟ್ ಶಾಪ್‌ಗಳ ಬದಲಿಗೆ ಕರ್ನಾಟಕದ ಅಥೆಂಟಿಕ್ ಆಗಿರುವ ಉಪಹಾರಗಳು ಏರ್‌ಪೋರ್ಟ್‌ನಲ್ಲಿ ಸಿಗುವಂತಾಗಲಿ ಎಂದು ಹೇಳಿದ್ದರು.
ಏರ್ ಪೋರ್ಟ್‌ಗಳು ಆಯಾ ನಗರದ ಪಾಕ ಪದ್ಧತಿ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆಯಾ ನಗರ ಶೈಲಿಯ ಪಾಕ ಪದ್ಧತಿ ಯನ್ನು ಪ್ರತಿನಿಧಿಸುವಂತಿರಬೇಕು ಎಂದು ಬರೆದಿದ್ದಾರೆ.
ರಾಮೇಶ್ವರಂ ಕೆಫೆ ಟರ್ಮಿನಲ್ 1ರಲ್ಲಿ ಓಪನ್
ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಇನ್ನೊಂದು ಐಕಾನಿಕ್ ಬೆಂಗಳೂರು ಹೋಟೆಲ್ ಆದ ರಾಮೇಶ್ವರಂ ಕೆಫೆಯನ್ನೂ ಸ್ವಾಗತಿಸಲು ಸಜ್ಜಾಗಿದೆ.ಇದು ಟರ್ಮಿನಲ್ 1ರಲ್ಲಿ ಓಪನ್ ಆಗಲಿದ್ದು, ದೇಶದ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗುತ್ತದೆ.ಮಲ್ಲೇಶ್ವರಂನಲ್ಲಿರುವ ಮೂಲ ಸ್ಥಳದಿಂದ ಹೊರತಾಗಿ ಸಿಟಿಅರ್‌ನ ಮೊದಲ ಮಳಿಗೆ ಇದಾಗಿದೆ. ಈಗ ಇಂಟರ್‌ನ್ಯಾಷನಲ್ ಹಾಗೂ ಆಯ್ದ ದೇಶದ ವಿಮಾನ ಪ್ರಯಾಣಿಕರಿಗೆ ಟರ್ಮಿನಲ್ 2ನಲ್ಲಿ ಉಪಹಾರವನ್ನು ನೀಡಲಿದೆ.
ದೋಸೆ ದರ ಎಷ್ಟು?
1920ರಲ್ಲಿ ಮಲ್ಲೇಶ್ವರದಲ್ಲಿ ಆರಂಭವಾದ ಸಿಟಿಆರ್ ಬೆಣ್ಣೆ ಮಸಾಲೆ ದೋಸೆ, ಫಿಲ್ಟರ್ ಕಾಫಿಗೆ ಅತ್ಯಂತ ಜನಪ್ರಿಯವಾಗಿದೆ. ಸಿನಿಮಾ ತಾರೆಯರು, ಕ್ರಿಕೆಟ್ ಆಟಗಾರರು, ರಾಜಕಾರಣಿಗಳು ಇಲ್ಲಿನ ಬಿಸಿ ಬಿಸಿ ದೋಸೆ ಸವಿದಿದ್ದಾರೆ, ವಾರಾಂತ್ಯದಲ್ಲಿ ಈಗಲೂ ಸಿಟಿಆರ್‌ಗೆ ಹೋದರೆ ದೋಸೆ ಸವಿಯಲು ಹೆಚ್ಚಿನ ಜನರು ಬರುತ್ತಾರೆ.
ಸಿಟಿಆರ್ ಮಲ್ಲೇಶ್ವರಕ್ಕೆ ಹೋಲಿಕೆ ಮಾಡಿದರೆ ಏರ್‌ಪೋರ್ಟ್‌ನಲ್ಲಿ ದೋಸೆಯ ದರ ಅಧಿಕವಾಗಿದೆ. ಸಿಟಿಆರ್‌ನ ಪ್ರಸಿದ್ಧ ಬೆಣ್ಣೆ ಮಸಾಲೆ ದೋಸೆ ದರ 90 ರೂ. ಆಗಿದೆ. ಆದರೆ ಏರ್‌ಪೋರ್ಟ್‌ನಲ್ಲಿ ಇದರ ದರ 285 ರೂ.ಗಳು ಇದೆ.
ಪುರಾತನ ದೋಸೆಗಳಿಗೆ ಹೆಸರುವಾಸಿ
ಸಿಟಿಆರ್ ನಗರದ ಅತ್ಯಂತ ಹಳೆಯ ಹಾಗೂ ಪ್ರೀತಿಪಾತ್ರ ದೋಸೆಗಳಿಗೆ ಹೆಸರುವಾಸಿಯಾಗಿದೆ.ನಿಮಗೆ ಗರಿಗರಿಯಾದ ಬೆಣ್ಣೆದೋಸೆಯನ್ನು ಮೆಚ್ಚದವರೇ ಇಲ್ಲ. ಸ್ಥಳೀಯ ಸಂಪ್ರದಾಯಗಳನ್ನು ಉತ್ತೇಜಿಸುವ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಾಂಸ್ಕೃತಿಕ ವಾತಾವರಣವನ್ನು ಸೃಷ್ಟಿಸಿಸಲು ಬಿಐಎಎಲ್ ಸಿದ್ದವಾಗಿದೆ.
ಡಿಜಿಟಲ್ ಪ್ರದರ್ಶನಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ
ವಿಮಾನ ನಿಲ್ದಾಣವು ಡಿಜಿಟಲ್ ಪ್ರದರ್ಶನಗಳಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಈವೆಂಟ್ ಅಪ್‌ಡೇಟ್‌ಗಳನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ಪ್ರಯಾಣಿಕರ ತೊಡಗಿಸಿಕೊಳ್ಳುತ್ತಾರೆ. ಚಟುವಟಿಕೆಗಳು ಕನ್ನಡ ಬಳಕೆಯನ್ನು ಉತ್ತೇಜಿಸುತ್ತದೆ. ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮತ್ತು ಪ್ರದರ್ಶಿಸುತ್ತದೆ.
75 ದೇಶಿಯ, 30 ಅಂತರಾಷ್ಟ್ರೀಯ ಮಾರ್ಗದ ಸಂಪರ್ಕವನ್ನು ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿದೆ. ದೇಶದ ಪ್ರಯಾಣಿಕ ದಟ್ಟಣೆಯ ವಿಮಾನ ನಿಲ್ದಾಣಗಳಲ್ಲಿ ಕೆಐಎ 3ನೇ ಸ್ಥಾನದಲ್ಲಿದೆ. 2024ರಲ್ಲಿ 40 ಲಕ್ಷ ಪ್ರಯಾಣಿಕರು ಏರ್‌ಪೋರ್ಟ್‌ಗೆ ಭೇಟಿ ನೀಡಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications