ಸರ್ಕಾರಿ ಕೆಲಸಕ್ಕಾಗಿ ಎಲ್ಲರೂ ಈಗ ರೇಸಿನಲ್ಲಿರುವಂತಹ ಕಾಲ ಇದು. ಹೀಗಾಗೆ ಕೆಲವು ಹುದ್ದೆಗಳಲ್ಲಿ ಸರ್ಕಾರ ಒಂದಿಷ್ಟು ಬದಲಾವಣೆಗಳನ್ನ ಮಾಡುವ ಮೂಲಕ ಸರ್ಕಾರಿ ನೌಕರಿ ಕಷ್ಟ ಎನ್ನುವಂತೆ ಮಾಡಿದೆ. ಅಲ್ಲದೇ ಈಗಂತು ಎಲ್ಲರು ಸರ್ಕಾರಿ ಕೆಲಸಕ್ಕಾಗಿ ವರ್ಷಗಟ್ಟಲೆ ಶ್ರಮಿಸುತ್ತಿದ್ದಾರೆ. ಹಾಗೆ ವರ್ಷ ಕಳೆದಂತೆ ಕೆಲಸಗಳಿಗಾಗಿ ಸ್ಪರ್ಧೆ, ಜೊತೆಗೆ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಕೂಡ ಹೆಚ್ಚಾಗಿದ್ದಾರೆ. ಹೀಗಾಗಿ ಸರ್ಕಾರ ಹತ್ತು ಹಲವು ಕಡ್ಡಾಯ ನಿಯಮಗಳನ್ನ ಪರಿಕ್ಷಾರ್ಥಿಗಳ ಮುಂದಿಡ್ತಿದೆ. ಹೀಗಾಗಿ ಇನ್ನು ಮೇಲೆ ಪರಿಕ್ಷಾರ್ಥಿಗಳು ತಮ್ಮ ಹೈಸ್ಕೂಲ್ ಅಂಕಗಳು ಅಥವಾ ಡಿಪ್ಲೋಮಾಗಳನ್ನು ಮರೆಯ ಬೇಕಾಗುತ್ತದೆ.
ಇನ್ನು ಕರ್ನಾಟಕದಲ್ಲಿ ಗ್ರೂಪ್ ಡಿ ಪವರ್ ಸೆಕ್ಟರ್ ಉದ್ಯೋಗಕ್ಕೆ ಸಾವಿರಾರು ಆಕಾಂಕ್ಷಿಗಳು ಆಯ್ಕೆಯಾಗಿದ್ದು, ಮತ್ತೆ ಅವರಲ್ಲಿ ಒಂದಿಷ್ಟು ಜನರನ್ನ ಆಯ್ಕೆ ಮಾಡುವ ಸಲುವಾಗಿ ಸರ್ಕಾರ ಆಕಾಂಕ್ಷಿಗಳಿಗೆ 8-ಮೀಟರ್ ಕಾಂಕ್ರೀಟ್ ಕಂಬವನ್ನು ಹತ್ತಬೇಕು ಎನ್ನುವ ದೈಹಿಕ ಪರೀಕ್ಷೆಯನ್ನ ತಂದಿದೆ. ಈ ಆಯ್ಕೆಯ ವೇಳೆ ಆಕಾಂಕ್ಷಿಗಳ ಶೈಕ್ಷಣಿಕ ಮೌಲ್ಯವನ್ನು ಒಂದು ಕಡೆಯಿಟ್ಟು, 10 ಅಭ್ಯರ್ಥಿಗಳಲ್ಲಿ ಎಂಟು ಮಂದಿಯನ್ನು ತೆಗೆದುಹಾಕಲಾಗಿದೆ.

ಈ ಸವಾಲು ಗ್ರೂಪ್ ಡಿ ವಿದ್ಯುತ್ ವಲಯದ ಉದ್ಯೋಗಕ್ಕಾಗಿ ಕಾಯುತ್ತಿರುವ ಕರ್ನಾಟಕದ ಸಾವಿರಾರು ಆಕಾಂಕ್ಷಿಗಳಿಗೆ ಗಮನಾರ್ಹ ತಡೆಗೋಡೆಯಾಗಿ ಮಾರ್ಪಟ್ಟಿದೆ. ಅಲ್ಲದೆ ದೈಹಿಕ ಸಾಮರ್ಥ್ಯ ಪರೀಕ್ಷೆಯನ್ನ ಒಳಗೊಂಡಿರುವುದರಿಂದ, ಅನೇಕ ಅರ್ಹ ಅಭ್ಯರ್ಥಿಗಳನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ. ಇನ್ನು ಇದರಿಂದಾಗಿ ಕರ್ನಾಟಕದ ವಿದ್ಯುತ್ ವಲಯದ ನೇಮಕಾತಿಯಲ್ಲಿ 80% ಉದ್ಯೋಗಾಕಾಂಕ್ಷಿಗಳು ವಿಫಲರಾಗಿದ್ದಾರೆ.
ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಮತ್ತು ಐದು ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಮ್‌ಗಳು)ನ್ನೊಳಗೊಂಡ ಸುಮಾರು 3,000 ಗ್ರೂಪ್ ಡಿ ಉದ್ಯೋಗಗಳ ನೇಮಕಾತಿಯ ವೇಳೆ ದೈಹಿಕ ಸಾಮರ್ಥ್ಯದ ಪರೀಕ್ಷೆಯನ್ನ ಕೂಡ ಅವರು ಎದುರಿಸಬೇಕಾಗುತ್ತದೆ. ಇದರಿಂದಾಗಿ ಅನೇಕ ಅರ್ಹ ಅಭ್ಯರ್ಥಿಗಳಿಗೆ ಈ ಎರಡು ಹಂತವನ್ನ ಎದುರಿಸಬಾಕಾದಂತ ಸವಾಲು ಎದುರಾಗಿದೆ.
2015ರಲ್ಲಿ ಪರಿಚಯಿಸಲಾದ ಈ ವಿದ್ಯುತ್ ಕಂಬ ಹತ್ತುವ ಕಡ್ಡಾಯ ಪರೀಕ್ಷೆಯು ಜೂನಿಯರ್ ಸ್ಟೇಷನ್ ಅಟೆಂಡೆಂಟ್ (ಜೆಎಸ್ಎ) ಮತ್ತು ಜೂನಿಯರ್ ಪವರ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗಮನಾರ್ಹವಾಗಿ ಅಡಚಣೆಯನ್ನ ಉಂಟುಮಾಡಿದೆ.
ಇನ್ನು ಈ ಈ ನೇರ ನೇಮಕಾತಿಯನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ಲಿಖಿತ ಪರೀಕ್ಷೆಗಳಂತೆ ಬದಲಾಯಿಸಲು ಕನ್ನಡ ಪರ ಗುಂಪುಗಳು ಮತ್ತು ಹಲವು ಆಕಾಂಕ್ಷಿಗಳು ಪ್ರತಿಭಟನೆಯನ್ನು ಕೂಡ ಮಾಡಿದ್ದರು.
ಅಲ್ಲದೆ KPTCL ಅಧಿಕಾರಿಗಳ ಪ್ರಕಾರ, ಉತ್ತಮ ಅಂಕಗಳನ್ನ ಗಳಿಸಿದ 80% ಅಭ್ಯರ್ಥಿಗಳು ಈ ದೈಹಿಕ ಪರೀಕ್ಷೆಯನ್ನ ಎದುರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಲಾಗ್ತಿದೆ. ಅಲ್ಲದೆ ಈ ನಿಯಮ ಎಲ್ಲರಿಗೂ ಅನ್ವಯವಾಗಿದ್ದು, ಗಂಡು, ಹೆಣ್ಣು ಎಂದು ಲೆಕ್ಕಿಸದೇ ಇಬ್ಬರೂ ಕೂಡ ಈ ಪರೀಕ್ಷೆಯನ್ನ ಎದುರಿಸಬೇಕಾಗಿದೆ. ಅಲ್ಲದೆ ಕೆಲವು ಕೆಪಿಟಿಸಿಎಲ್ ಮತ್ತು ಎಸ್ಕಾಮ್‌ಗಳ ಎಲ್ಲಾ ಉಪವಿಭಾಗಗಳು ಅಗತ್ಯ ಕಂಬ ಏರುವ ಸಾಧನಗಳನ್ನು ಹೊಂದಿಲ್ಲ ಎನ್ನುವುದು ತಿಳಿದುಬಂದಿದೆ.
ಹೆಚ್ಚಿನ ಅಭ್ಯರ್ಥಿಗಳು ಮೊದಲ ಒಂದೆರಡು ಮೀಟರ್‌ಗಳನ್ನ ಯಶಸ್ವಿಯಾಗಿ ಏರುತ್ತಾರೆ ಎಂದು KPTCL ಅಧಿಕಾರಿಯೊಬ್ಬರು ಹೇಳಿದ್ದಾರೆ. ಯಶಸ್ವಿಯಾಗಿ ಹತ್ತುವವರಲ್ಲಿ ಬಹಳಷ್ಟು ಮಂದಿ ಪ್ರಾದೇಶಿಕ ಭಾಗದವರು ರಂಬುದು ತಿಳಿದುಬರುತ್ತದೆ.
ಮರ ಹತ್ತುವ ಅಭ್ಯಾಸವಿರುವ ಉತ್ತರ ಕರ್ನಾಟಕದ ಅಭ್ಯರ್ಥಿಗಳು ಯಶಸ್ವಿಯಾಗಿ ಕಂಬವನ್ನ ಏರಿದರೆ, ಇನ್ನು ಇತ್ತ ದಕ್ಷಿಣ ಕರ್ನಾಟಕದವರು ಕಂಬ ಹತ್ತುವುದನ್ನು ಸಾಮಾಜಿಕ ಕಳಂಕ ಎಂದು ಭಾವಿಸುತ್ತಾರೆ.
ಇತ್ತೀಚೆಗೆ ಸವಾಲು ಎಷ್ಟು ಮಹತ್ವದ್ದಾಗಿದೆ ಎಂದರೆ 2014ರಲ್ಲಿ ಇಂಧನ ಇಲಾಖೆ ತನ್ನ ನೇಮಕಾತಿ ನೀತಿಯನ್ನು ಕೂಡ ಪರಿಷ್ಕರಿದೆ. ರಾಜ್ಯದಲ್ಲಿರುವ ಪ್ರತಿಭಾನ್ವಿತರನ್ನು ವಿಸ್ತರಿಸಲು ಶೈಕ್ಷಣಿಕ ಅರ್ಹತೆಯನ್ನು 12ನೇ ತರಗತಿ ಪಾಸ್ ಅಥವಾ ಐಟಿಐ ಡಿಪ್ಲೋಮಾ ಮಾಡಿದವರು ಹಾಗೆ ಎಸ್‌ಎಸ್‌ಎಲ್‌ಸಿ ಅಥವಾ 10 ನೇ ಪಾಸ್ ಆಗಿರುವವರಿಗೆ ಉದ್ಯೋಗ ಅವಕಾಶವನ್ನ ಕಲ್ಪಿಸಿದೆ.
ಪ್ರಾದೇಶಿಕ ಅಸಮಾನತೆ
ಈ ಹೊಂದಾಣಿಕೆಗಳನ್ನ ಹೊರತುಪಡಿಸಿ ಕೂಡ, 2015 ಮತ್ತು 2019ರ ನಡುವೆ, 16,300 ನೇಮಕಾತಿಗಳಲ್ಲಿ ಹೆಚ್ಚಿನವರು ಉತ್ತರ ಕರ್ನಾಟಕ ಜಿಲ್ಲೆಗಳಿಂದ ಬಂದಿದ್ದು, ಇದು ಪ್ರಾದೇಶಿಕ ಅಸಮಾನತೆಯನ್ನು ಬಿಂಬಿಸುತ್ತದೆ. ಜೊತೆಗೆ ಇಂಧನ ಇಲಾಖೆಯ ಅಧಿಕಾರಿಗಳು ಕೂಡ ತಮ್ಮ ನಿಲುವನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ. ಅಲ್ಲದೆ ಹಿಂದಿನ ನೇಮಕಾತಿ ಸವಾಲುಗಳನ್ನು ಎದುರಿಸಲು ಕಡಿಮೆ ಅರ್ಹತೆಯ ಮಟ್ಟಗಳು ಮತ್ತು ನೇರ ನೇಮಕಾತಿಗೆ ಇವೆಲ್ಲವೂ ಕೂಡ ಅಗತ್ಯವಾಗಿದೆ ಎಂದು ಹೇಳಿದರು.
ಉದ್ಯೋಗಗಳಿಗೆ 12ನೇ ತರಗತಿ ಉತ್ತೀರ್ಣರ ಅಗತ್ಯವಿದ್ದಾಗ, ಅಭ್ಯರ್ಥಿಗಳು ಈ ಗುಂಪು D ಉದ್ಯೋಗಗಳನ್ನು ಬಿಡುವ ಮೂಲಕ ಒಂದಿಷ್ಟು ಉತ್ತಮ ಸ್ಥಾನಗಳನ್ನು ಅಭ್ಯರ್ಥಿಗಳು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಪ್ರಸ್ತುತ ವ್ಯವಸ್ಥೆಯು ಇತ್ತೀಚಿನ ವರ್ಷಗಳಲ್ಲಿ 16,300ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಆಯ್ಕೆಮಾಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications