2020ನೇ ಸಾಲಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಸೆಲೆಬ್ರಿಟಿ ಎಂಬ ಫೋರ್ಬ್ಸ್ ಪಟ್ಟಿಯ ಮೊದಲ ಸ್ಥಾನವನ್ನು ಅಮೆರಿಕನ್ ರಿಯಾಲಿಟಿ ಟೀವಿ ತಾರೆ ಕೈಲಿ ಜೆನ್ನರ್ ಅಲಂಕರಿಸಿದ್ದಾರೆ. E! ನ್ಯೂಸ್ ಪ್ರಕಾರ, ಅತಿ ಹೆಚ್ಚು ಸಂಭಾವನೆ ಗಳಿಸಿದ ತಾರೆಯರು ಎಂಬ ಮೊದಲ ಎರಡು ಸ್ಥಾನವನ್ನು ಕೈಲಿ ಜೆನ್ನರ್ ಹಾಗೂ ಕಾನ್ಯೆ ವೆಸ್ಟ್ ಪಡೆದಿದ್ದಾರೆ. ಇಬ್ಬರ ಗಳಿಕೆ ಒಟ್ಟು ಸೇರಿ, 2020ರಲ್ಲಿ 610 ಕೋಟಿ ಅಮೆರಿಕನ್ ಡಾಲರ್ ಆಗಿದೆ.
ಫೋರ್ಬ್ಸ್ ಬಳಿಯ ಕೈಲಿಯ ಇತಿಹಾಸವನ್ನು ಪಕ್ಕಕ್ಕಿಟ್ಟು, ಹಣಕಾಸು ತಜ್ಞರು ಲೆಕ್ಕ ಹಾಕುವಂತೆ ಹೇಳುವುದಾದರೆ ಈ ವರ್ಷ ಆಕೆಯ ಗಳಿಕೆ 590 ಮಿಲಿಯನ್ ಅಮೆರಿಕನ್ ಡಾಲರ್. ಆಕೆಯ ಬ್ಯೂಟಿ ಬ್ರ್ಯಾಂಡ್ ಕೋಟಿ ಕಂಪೆನಿಯ ಬಹು ಪಾಲನ್ನು ಮಾರಿದ ನಂತರ ಗಳಿಕೆ ಇಷ್ಟು ಪ್ರಮಾಣದಲ್ಲಿದೆ.
ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಇರುವುದು ಕಾನ್ಯೆ ವೆಸ್ಟ್. ಆತನ ಗಳಿಕೆ 170 ಮಿಲಿಯನ್ ಯುಎಸ್ ಡಿ. ಜೆನ್ನರ್ ಗೆ ಆತ ಸಂಬಂಧಿಯೇ ಆಗಬೇಕು. ಇಷ್ಟು ದೊಡ್ದ ಮೊತ್ತದಲ್ಲಿ ಸಂಭಾವನೆ ಕಾನ್ಯೆ ವೆಸ್ಟ್ ಗೆ ದೊರೆಯಲು ಕಾರಣವಾಗಿದ್ದು ಅಡಿಡಾಸ್ ಜತೆಗಿನ ಒಪ್ಪಂದ.

E! ನ್ಯೂಸ್ ತಿಳಿಸುವಂತೆ, ಟೈಲರ್ ಪೆರಿ, ಹೊವಾರ್ಡ್ ಸ್ಟೆರ್ನ್, ಡ್ವೇನ್ ಜಾನ್ಸನ್ ಜತೆಗೆ ಎ ಪಟ್ಟಿಯಲ್ಲಿನ ಅಥ್ಲೀಟ್ ಗಳಾದ ರೋಜರ್ ಫೆಡರರ್, ಕ್ರಿಸ್ಟಿಯಾನೊ ರೊನಾಲ್ಡೊ, ಲಯೋನೆಲ್ ಮೆಸ್ಸಿ, ನೆಯ್ಮರ್ ಟಾಪ್ ಟೆನ್ ನಲ್ಲಿ ಇದ್ದಾರೆ. ಕೊರೊನಾದ ಪರಿಣಾಮವಾಗಿ ಮನರಂಜನಾ ಕ್ಷೇತ್ರದ ಒಟ್ಟಾರೆ ಆದಾಯ 610 ಕೋಟಿ ಅಮೆರಿಕ ಡಾಲರ್ ಆಗಿದೆ. ಕಳೆದ ವರ್ಷಕ್ಕಿಂತ ಈ ಪ್ರಮಾಣ 200 ಮಿಲಿಯನ್ ಯುಎಸ್ ಡಿ ಕಡಿಮೆ ಆಗಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications