ವಿದೇಶೀಯರ ವೀಸಾ ಅವಧಿ ಉಚಿತವಾಗಿ ವಿಸ್ತರಿಸಿದ ಕೇಂದ್ರ ಗೃಹ ಸಚಿವಾಲಯ

ಕೊರೊನಾ ವ್ಯಾಪಿಸಿರುವ ಕಾರಣಕ್ಕೆ ಪ್ರಯಾಣದ ಮೇಲೆ ನಿರ್ಬಂಧ ಹೇರಿರುವುದರಿಂದ ಭಾರತದಲ್ಲೇ ಉಳಿದುಕೊಂಡಿರುವ ವಿದೇಶೀಯರಿಗೆ ಏಪ್ರಿಲ್ 30, 2020ರ ತನಕ ದೂತಾವಾಸ ಸೇವೆಯನ್ನು ಉಚಿತವಾಗಿ ಒದಗಿಸುವ ಬಗ್ಗೆ ಸೋಮವಾರ ಕೇಂದ್ರ ಗೃಹ ಸಚಿವಾಲಯವು ಸ್ಪಷ್ಟನೆ ನೀಡಿದೆ. ವಿದೇಶಿ ನಾಗರಿಕರ ಸಾಮಾನ್ಯ ಹಾಗೂ ಇ- ವೀಸಾಗಳಿಗೆ ಈಗಿನ ವಿಸ್ತರಣೆ ಅನ್ವಯಿಸುತ್ತದೆ.

ಜಗತ್ತಿನಾದ್ಯಂತ ಕೊರೊನಾ ವ್ಯಾಪಿಸಿದ್ದು, ವಿಮಾನ ಹಾರಾಟವನ್ನು ನಿರ್ಬಂಧಿಸಲಾಗಿದೆ. ಇನ್ನು ಭಾರತದ ಅಧಿಕಾರಿಗಳು ಸಹ ಪ್ರಯಾಣದ ಮೇಲೆ ನಿರ್ಬಂಧ ಹೇರಿದ್ದಾರೆ. ಆ ಕಾರಣಕ್ಕೆ ಫೆಬ್ರವರಿ 1ರಿಂದ ಏಪ್ರಿಲ್ 30ರ ಮಧ್ಯೆ ಯಾರ ವೀಸಾ ಅವಧಿ ಮುಕ್ತಾಯ ಆಗಿರುತ್ತದೋ ಅಥವಾ ಆಗುತ್ತದೋ ಅಂಥ ವಿದೇಶೀಯರು ಆನ್ ಲೈನ್ ನಲ್ಲಿ ಅಪ್ಲೈ ಮಾಡಿದರೆ ಉಚಿತವಾಗಿ ಅವಧಿ ವಿಸ್ತರಣೆ ಮಾಡಲಾಗುತ್ತದೆ ಎಂದು ಗೃಹ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ವಿದೇಶೀಯರ ವೀಸಾ ಅವಧಿ ಉಚಿತವಾಗಿ ವಿಸ್ತರಿಸಿದ ಕೇಂದ್ರ ಗೃಹ ಸಚಿವಾಲಯ

ಭಾರತದಲ್ಲಿ ಈ ತನಕ 9352 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 324 ಮಂದಿ ಸಾವನ್ನಪ್ಪಿದ್ದಾರೆ. ಏಪ್ರಿಲ್ 14ನೇ ತಾರೀಕಿಗೆ 21 ದಿನಗಳ ದೇಶಾದ್ಯಂತದ ಲಾಕ್ ಡೌನ್ ಅವಧಿ ಮುಕ್ತಾಯ ಆಗಲಿದ್ದು, ಮಂಗಳವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+