ದೇಶದ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್‌ನ (ಆರ್‌ಐಎಲ್) ರಿಟೇಲ್ ವಿಭಾಗದ ರಿಲಯನ್ಸ್ ರಿಟೇಲ್ ವೆಂಚರ್ಸ್ (ಆರ್‌ಆರ್‌ವಿಎಲ್) ಸಲಹೆಗಾರರನ್ನಾಗಿ ಅಮುಲ್ ಬ್ರಾಂಡ್ ಅಡಿಯಲ್ಲಿ ಹಾಲು ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ (ಜಿಸಿಎಂಎಂಎಫ್) ಮಾಜಿ ಎಂಡಿ ಆರ್‌ಎಸ್ ಸೋಧಿಯವರನ್ನು ನೇಮಕ ಮಾಡಿಕೊಂಡಿದೆ. ಪ್ರಮುಖವಾಗಿ ರಿಲಯನ್ಸ್‌ನ ತಾಜಾ ಹಣ್ಣು ಮತ್ತು ತರಕಾರಿಗಳ ವ್ಯಾಪಾರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಿಲಯನ್ಸ್ ಸಲಹೆಗಾರ ಹುದ್ದೆಗೆ ಆರ್‌ಎಸ್ ಸೋಧಿಯವರನ್ನು ನೇಮಿಸಿದೆ.
ಟೈಮ್ಸ್ ಆಫ್ ಇಂಡಿಯಾ ಮಾಹಿತಿ ಪ್ರಕಾರ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ ಮಾಜಿ ಎಂಡಿಯಾದ ಆರ್‌ಎಸ್ ಸೋಧಿಯವರನ್ನು ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ನಿರ್ವಹಣೆ ಮಾಡುವ ರಿಟೇಲ್ ಸಂಸ್ಥೆಯ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಪ್ರಮುಖವಾಗಿ ಗ್ರಾಹಕ ಬ್ರಾಂಡ್‌ಗಳ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಹಣ್ಣುಗಳು ಮತ್ತು ತರಕಾರಿಗಳ ವಹಿವಾಟಿಗೆ ಒತ್ತು ನೀಡುವ ಮೂಲಕ ರಿಟೇಲ್ ವಹಿವಾಟಿನಲ್ಲಿ ವಿಸ್ತಾರವನ್ನು ಹೊಂದಲು ಬಯಸಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಅತೀ ದೊಡ್ಡ ಬ್ರ್ಯಾಂಡ್ ಆಗಿ ಮಾರ್ಪಾಡಗಿರುವ ಅಮುಲ್ ಮಾಜಿ ಎಂಡಿಯನ್ನು ನೇಮಿಸಿದೆ ಎಂದು ವರದಿಯಾಗಿದೆ.

41 ವರ್ಷದ ಬಳಿಕ ಅಮುಲ್ ಅನ್ನು ತೊರೆದ ಸೋಧಿ
ಆರ್‌ಎಸ್ ಸೋಧಿ ಸುಮಾರು 4 ದಶಕಗಳ ಸಂಬಂಧವನ್ನು ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದೊಂದಿಗೆ ಹೊಂದಿದ್ದಾರೆ. ಜನವರಿಯಲ್ಲಿ ಆರ್‌ಎಸ್ ಸೋಧಿ ತನ್ನ 41 ವರ್ಷಗಳ ಅಮುಲ್ ಸಂಸ್ಥೆಯ ವೃತ್ತಿ ಜೀವನದಿಂದ ಹೊರನಡೆದಿದ್ದಾರೆ. 2010ರ ಜೂನ್ ತಿಂಗಳಿನಿಂದ ಆರ್‌ಎಸ್ ಸೋಧಿ ಡೈರಿ ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಮಾರುಕಟ್ಟೆಯಲ್ಲಿ ತನ್ನ ಸಂಸ್ಥೆಯ ವಿಸ್ತಾರವನ್ನು ಹೆಚ್ಚಿಸುತ್ತಿರುವ ರಿಲಯನ್ಸ್‌ಗೆ ಸೇರ್ಪಡೆಯಾಗಿದ್ದಾರೆ.
ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಆರ್‌ಆರ್‌ವಿಎಲ್‌ನ ಎಫ್‌ಎಂಸಿಜಿ ವಿಭಾಗ, ಕ್ಯಾಂಪಾ ಬ್ರಾಂಡ್‌ನ ಅಡಿಯಲ್ಲಿ ಮಾರಾಟವಾಗುವ ಪಾನೀಯಗಳು ಮತ್ತು ಗೃಹ, ವೈಯಕ್ತಿಕ ಆರೈಕೆ ಉತ್ಪನ್ನಗಳನ್ನು ಒಳಗೊಂಡಂತೆ ಹೊಸ ಸರಕುಗಳನ್ನು ಪರಿಚಯಿಸುತ್ತಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ವಿಸ್ತಾರ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸಂಸ್ಥೆಗೆ ಬೆಳವಣಿಗೆಗೆ ಸಹಾಯವಾಗುವ ಸಲಹೆ ನೀಡುವ ಪರಿಣಿತ ವ್ಯಕ್ತಿಯನ್ನು ತನ್ನ ಸಂಸ್ಥೆಗೆ ಸೇರಿಸುವ ನಿರ್ಧಾರವನ್ನು ರಿಲಯನ್ಸ್ ಮಾಡಿದೆ. ತನ್ನದೇ ಆದ ಇಂಡಿಪೆಂಡೆನ್ಸ್ ಮತ್ತು ಗುಡ್ ಲೈಫ್ ಬ್ರ್ಯಾಂಡ್‌ಗಳ ಜೊತೆಗೆ, ರಿಲಯನ್ಸ್ ಈಗಾಗಲೇ ಕ್ಯಾಂಪಾ ಕೋಲಾ ಮತ್ತು ಸೊಸ್ಯೊ ಹಜೂರಿ ಪಾನೀಯ ಸಂಸ್ಥೆಗಳನ್ನು ಖರೀದಿ ಮಾಡಿದೆ. ಲೋಟಸ್ ಚಾಕೊಲೇಟ್‌ಗಳು ಮತ್ತು ಮಾಲಿಬನ್ ಕುಕೀ ಕೂಡಾ ರಿಲಯನ್ಸ್‌ಗೆ ಸೇರಿದ್ದಾಗಿದೆ.
41 ವರ್ಷಗಳ ತನ್ನ ವೃತ್ತಿ ಜೀವನದಲ್ಲಿ ಜಿಸಿಎಂಎಂಎಫ್ ಅನ್ನು ಅಭಿವೃದ್ಧಿ ಪಡಿಸುವಲ್ಲಿ ಆರ್‌ಎಸ್ ಸೋಧಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಆರ್‌ಎಸ್ ಸೋಧಿ ಜಿಸಿಎಂಎಂಎಫ್‌ನ ಎಂಡಿಯಾಗಿ ಅಧಿಕಾರ ವಹಿಸಿಕೊಂಡಾಗ ಅಂದರೆ 2010-2011ರ ಹಣಕಾಸು ವರ್ಷದಲ್ಲಿ ಒಕ್ಕೂಟದ ಆದಾಯ ಕೇವಲ 9,774 ಕೋಟಿ ರೂಪಾಯಿ ಆಗಿತ್ತು. ಆದರೆ ಈ ಆದಾಯವು 2021-2022ರ ಆರ್ಥಿಕ ವರ್ಷದಲ್ಲಿ 61,000 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಆರ್‌ಎಸ್ ಸೋಧಿ 1982 ರಲ್ಲಿ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‌ಮೆಂಟ್ ಆನಂದ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.


Click it and Unblock the Notifications