ಟ್ವಿಟ್ಟರ್‌ನ ಸಹ ಸಂಸ್ಥಾಪಕ ಮತ್ತು ಮಾಜಿ ಸಿಇಒ ಜ್ಯಾಕ್ ಡಾರ್ಸೆ ಸಾಮಾಜಿಕ ಮಾಧ್ಯಮದ ಫೀಲ್ಡ್‌ಗೆ ಮತ್ತೆ ಇಳಿದಿದ್ದಾರೆ. ಟ್ವಿಟ್ಟರ್‌ನಿಂದ ಹೊರಬಂದ ಬಳಿಕ ಜ್ಯಾಕ್ ಡಾರ್ಸೆ ತನ್ನ ಈ ಹಿಂದಿನ ಸಂಸ್ಥೆಗೆ ಟಕ್ಕರ್ ನೀಡಲು ಮುಂದಾಗಿದ್ದಾರೆ. ಜ್ಯಾಕ್ ಡಾರ್ಸೆ ತನ್ನದೇ ಆದ ಹೊಸ ಆಪ್ ಅನ್ನು ಆರಂಭಿಸಿದೆ. ಈ ಆಪ್ ಬ್ಲ್ಯೂಸ್ಕೈ (Bluesky) ಪ್ರಸ್ತುತ ಆಪಲ್ ಆಪ್ ಸ್ಟೋರ್‌ನಲ್ಲಿ ಲಭ್ಯವಾಗಲಿದೆ. ಪ್ರಸ್ತುತ ಟೆಸ್ಟಿಂಗ್ ಆಪ್ ಅನ್ನು ಜಾರಿ ಮಾಡಲಾಗಿದೆ.
ಟ್ವಿಟ್ಟರ್‌ನ ಸಹ ಸಂಸ್ಥಾಪಕ ಪ್ರಸ್ತುತ ಇನ್‌ವೈಟ್ ಮೂಲಕ ಈ ಆಪ್‌ನ ಬಳಕೆಯ ಪ್ರಯೋಗವನ್ನು ಮಾಡುತ್ತಿದೆ. ಶೀಘ್ರವೇ ಆಪ್ ಅನ್ನು ಜಾರಿ ಮಾಡುವ ಸಾಧ್ಯತೆಯುದೆ ಎಂದು ವರದಿಯಾಗಿದೆ. ಆಪ್‌ನ ಪ್ರಕಾರ data.ai ಸಂಸ್ಥೆಯು ಈ ಬ್ಲ್ಯೂಸ್ಕೈ iOS app ಅನ್ನು ಆರಂಭಿಸಿದೆ. ಫೆಬ್ರವರಿ 17ರಂದು ಆರಂಭಿಸಿದೆ. ಪ್ರಯೋಗ ಮಾಡುವ ಸಂದರ್ಭದಲ್ಲೇ ಸುಮಾರು 2000 ಮಂದಿ ಆಪ್ ಅನ್ನು ಇನ್‌ಸ್ಟಾಲ್ ಮಾಡಿದ್ದಾರೆ. ನೀವು ಈ ಆಪ್‌ನಲ್ಲಿ 256 ಅಕ್ಷರಗಳ ಪೋಸ್ಟ್ ಮಾಡಬಹುದು.

ಪೋಸ್ಟ್‌ನಲ್ಲಿ ಫೋಟೋವನ್ನು ಕೂಡಾ ಹಾಕಬಹುದು. ಟ್ವಿಟ್ಟರ್‌ನಲ್ಲಿ "ಏನು ನಡೆಯುತ್ತಿದೆ," "Whats happening?" ಎಂದಿದ್ದರೆ, ಬ್ಲ್ಯೂಸ್ಕೈ ಆಪ್‌ನಲ್ಲಿ "ಏನಾಯ್ತು?" "Whats up?" ಎಂಬುವುದು ಇದೆ. ಇದರಲ್ಲಿ ಜನರು ಪೋಸ್ಟ್ ಅನ್ನು ಶೇರ್ ಮಾಡಬಹುದು, ಮ್ಯೂಟ್ ಮಾಡಬಹುದು ಮತ್ತು ಅಡ್ವಾನ್ಸ್ ಟೂಲ್‌ಗಳು ಇರಲಿದೆ. ವರದಿಯ ಪ್ರಕಾರ ನೋಟಿಫಿಕೇಶನ್, ಲೈಕ್ಸ್, ರಿಪೋಸ್ಟ್, ಫಾಲೋ, ರಿಪ್ಲೈ ಅನ್ನು ಈ ಆಪ್‌ನಲ್ಲಿ ಮಾಡಲು ಸಾಧ್ಯವಾಗುತ್ತದೆ.
ನೀವು ಇತರೆ ವ್ಯಕ್ತಿಗಳ ಹೆಸರನ್ನು ಸರ್ಚ್ ಮಾಡಿ ಫಾಲೋ ಮಾಡಬಹುದು. ಸರಿ ಸುಮಾರು ಟ್ವಿಟ್ಟರ್‌ನಂತೆಯೇ ಈ ಆಪ್‌ನಲ್ಲಿ ಆಯ್ಕೆಗಳು ಇದೆ. ಯೂಸರ್ ಪ್ರೊಫೈಲ್‌ನಲ್ಲಿ ಪ್ರೋಫೈಲ್ ಪಿಕ್, ಬ್ಯಾಕ್‌ಗ್ರೌಂಡ್, ಬಯೋ ಮತ್ತು ಮೆಟ್ರಿಕ್ ಆಯ್ಕೆಗಳು ಇದೆ. 2019ರಲ್ಲಿ ಬ್ಲ್ಯೂಸ್ಕೈ ಯೋಜನೆಯನ್ನು ಆರಂಭ ಮಾಡಲಾಗಿದೆ. ಆದರೆ 2022ರಲ್ಲಿ ಬ್ಲ್ಯೂಸ್ಕೈ ಆಪ್ ಅನ್ನು ಜಾರಿ ಮಾಡಲಾಗಿದೆ. ಈ ಬಗ್ಗೆ ಮಾಹಿತಿಯನ್ನು ಅಕ್ಟೋಬರ್‌ನಲ್ಲಿ ಜ್ಯಾಕ್ ಡಾರ್ಸೆ ಟ್ವಿಟ್ಟರ್‌ನಲ್ಲೇ ಶೇರ್ ಮಾಡಿದ್ದಾರೆ.
ಅಕ್ಟೋಬರ್‌ನಲ್ಲಿ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ಟ್ವಿಟ್ಟರ್‌ನ ಸಹ ಸಂಸ್ಥಾಪಕ ಮತ್ತು ಮಾಜಿ ಸಿಇಒ ಜ್ಯಾಕ್ ಡಾರ್ಸೆ ಬೇರೆಯೇ ಸಾಮಾಜಿಕ ಜಾಲತಾಣ ಆಪ್ ಅನ್ನು ಆರಂಭಿಸುವ ಬಗ್ಗೆ ಸೂಚನೆಯನ್ನು ನೀಡಿದ್ದರು. ಬ್ಲ್ಯೂಸ್ಕೈ ಕಳೆದ ವರ್ಷ 13 ಬಿಲಿಯನ್ ಡಾಲರ್ ಫಂಡಿಗ್ ಅನ್ನು ಪಡೆದಿದೆ.


Click it and Unblock the Notifications