ರಕ್ಷಣಾ ಉತ್ಪಾದನಾ ಸಾಮರ್ಥ್ಯವನ್ನು ಅಭಿವೃದ್ಧಿಸಲು ಸಹಭಾಗಿತ್ವ ನೀತಿಯ ಮೊದಲ ಯೋಜನೆಯಡಿ 111 ಲಘು ಹೆಲಿಕಾಪ್ಟರ್ ಗಳನ್ನು ತಯಾರಿಸಲು ಯೋಜನೆ ರೆಡಿಯಾಗಿದೆ. ನರೇಂದ್ರ ಮೋದಿ ಸರ್ಕಾರದ ಈ ಕಾರ್ಯತಂತ್ರದ ಮೊದಲ ಯೋಜನೆಯಡಿ ನೌಕಾಪಡೆಯು ಭಾರತೀಯ ಮತ್ತು ವಿದೇಶಿ ತಯಾರಕರ ಕಿರುಪಟ್ಟಿ ತಯಾರಿಸಿದ್ದು, ಟಾಟಾ, ಅದಾನಿ ಸೇರಿದಂತೆ 4 ದೈತ್ಯ ಕಂಪನಿಗಳು ರೇಸ್‌ನಲ್ಲಿವೆ.
ಈಗಾಗಲೇ ನೌಕಾಪಡೆಯು, 111 ಲಘು ಹೆಲೆಕಾಪ್ಟರ್ ತಯಾರಿಕೆಯ ಯೋಜನೆಗಾಗಿ ತಯಾರಕರ ಕಿರುಪಟ್ಟಿಯನ್ನು ಸಿದ್ದಪಡಿಸಿದ್ದು, ಸರ್ಕಾರದಿಂದ ಅನುಮೋದನೆ ಪಡೆಯಲು ಮುಂದಾಗಿದೆ.

ಭಾರತೀಯ ಸಂಸ್ಥೆಗಳಾದ ಟಾಟಾ, ಅದಾನಿ, ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ ಮತ್ತು ಭಾರತ್ ಫೋರ್ಜ್, 111 ಲಘು ಹೆಲಿಕಾಪ್ಟರ್ ಸ್ಥಳೀಯ ಉತ್ಪಾದನೆ ಯೋಜನೆಯ ಕಾರ್ಯತಂತ್ರದ ಪಾಲುದಾರರಾಗಿ ಆಯ್ಕೆಯಾಗಿದೆ. ಈ ಯೋಜನೆಯಡಿಯಲ್ಲಿ ಲಘು ಹೆಲಿಕಾಪ್ಟರ್ ಗಳನ್ನು ಭಾರತೀಯ ಮತ್ತು ವಿದೇಶಿ ಸಂಸ್ಥೆಗಳು ಜಂಟಿ ಉದ್ಯಮಗಳ ಮೂಲಕ ಸ್ಥಳೀಯವಾಗಿ ನಿರ್ಮಿಸಬೇಕಾಗಿದೆ.
ತಯಾರಕರ ಕಿರುಪಟ್ಟಿಯಲ್ಲಿ ಸ್ಥಾನ ಪಡೆದಿರುವ ಈ ನಾಲ್ಕು ಭಾರತೀಯ ಸಂಸ್ಥೆಗಳು ಯುರೋಪಿಯನ್ ಏರ್ ಬಸ್ ಹೆಲಿಕಾಪ್ಟರ್ ಸೇರಿದಂತೆ, ವಿದೇಶಿ ಮೂಲ ಸಲಕರಣೆಗಳ ತಯಾರಕರೊಂದಿಗೆ ಪಾಲುದಾರಿಕೆ ಮಾಡಬೇಕಾಗಿದೆ ಎಂದು ನೌಕಾಪಡೆಯ ಮೂಲಗಳು ಎಎನ್ಐಗೆ ತಿಳಿಸಿವೆ.


Click it and Unblock the Notifications