ಚೀನಾಕ್ಕೆ ಮತ್ತೊಂದು ಭಾರೀ ಆಘಾತ! ಮುಂದುವರಿದ ಭಾರತದ ಪ್ರಾಬಲ್ಯ.. ವರ್ಕೌಟ್ ಆಗುತ್ತಿಲ್ಲ ಡೊನಾಲ್ಡ್ ಟ್ರಂಪ್ ಕಿತಾಪತಿ. ಹೌದು, ಟೆಕ್ ದೈತ್ಯ ಫಾಕ್ಸ್‌ಕಾನ್ ಮತ್ತೊಮ್ಮೆ ಭಾರತದಲ್ಲಿ ಭಾರೀ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಐಫೋನ್ ತಯಾರಿಕೆಗೆ ಪ್ರಮುಖ ಪೂರೈಕೆದಾರರಾಗಿರುವ ಕಂಪನಿಯು ಇತ್ತೀಚೆಗೆ ಭಾರತದಲ್ಲಿ 1.5 ಬಿಲಿಯನ್ ಡಾಲರ್ (ಸುಮಾರು 12,500 ಕೋಟಿ ರೂ.) ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಫಾಕ್ಸ್‌ಕಾನ್‌ನ ಸಿಂಗಾಪುರ ಮೂಲದ ಘಟಕದ ಭಾರತೀಯ ಅಂಗಸಂಸ್ಥೆಯಾದ ಯುಝಾನ್ ಟೆಕ್ನಾಲಜಿ ಇಂಡಿಯಾದಲ್ಲಿ 12.7 ಬಿಲಿಯನ್ ಷೇರುಗಳನ್ನು ಖರೀದಿಸುವ ಮೂಲಕ ಹೂಡಿಕೆ ಮಾಡಿದೆ.
ಹೌದು, ತೈವಾನ್‌ನ ತಂತ್ರಜ್ಞಾನ ದೈತ್ಯ ಫಾಕ್ಸ್‌ಕಾನ್ ಮತ್ತೊಮ್ಮೆ ಭಾರತದಲ್ಲಿ ಭಾರಿ ಹೂಡಿಕೆಯನ್ನು ಘೋಷಣೆಯನ್ನು ಮಾಡಿದೆ. ಇನ್ನೂ ಐಫೋನ್ ತಯಾರಿಕೆಗೆ ಪ್ರಮುಖ ಪೂರೈಕೆದಾರರಾಗಿರುವ ಕಂಪನಿಯು ಇತ್ತೀಚೆಗೆ ಭಾರತದಲ್ಲಿ 1.5 ಬಿಲಿಯನ್ ಡಾಲರ್ (ಸುಮಾರು 12,500 ಕೋಟಿ ರೂ.) ಹೂಡಿಕೆ ಮಾಡುವುದಾಗಿ ಘೋಷಣೆಯನ್ನು ಮಾಡಲಾಗಿದೆ.
ಫಾಕ್ಸ್‌ಕಾನ್‌ನ ಸಿಂಗಾಪುರ ಮೂಲದ ಘಟಕದ ಭಾರತೀಯ ಅಂಗಸಂಸ್ಥೆಯಾದ ಯುಝಾನ್ ಟೆಕ್ನಾಲಜಿ ಇಂಡಿಯಾದಲ್ಲಿ 12.7 ಬಿಲಿಯನ್ ಷೇರುಗಳನ್ನು ಖರೀದಿಸುವ ಮೂಲಕ ಭಾರತದಲ್ಲಿ ಹೂಡಿಕೆ ಮಾಡಲು ಸಿದ್ದವಾಗಿದೆ.ಈಗಾಗಲೇ ಯುಝಾನ್ ಟೆಕ್ನಾಲಜಿ ತಮಿಳುನಾಡಿನಲ್ಲಿ ಸ್ಮಾರ್ಟ್‌ಫೋನ್‌ಗಳ ಬಿಡಿಭಾಗಗಳನ್ನು ತಯಾರಿಯನ್ನು ಮಾಡುತ್ತಿದೆ. ಆಪಲ್‌ಗಾಗಿ ಐಫೋನ್ ಘಟಕಗಳನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಈ ಘಟಕವು ಈಗ ಮತ್ತಷ್ಟು ವಿಸ್ತರಣೆಯತ್ತ ಗಮನ ಹರಿಸಿದೆ.
ಚೀನಾಕ್ಕೆ ಪರ್ಯಾಯವಾಗಿ ಭಾರತವನ್ನು ಉತ್ಪಾದನಾ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಆಪಲ್‌ನ ಕಾರ್ಯತಂತ್ರದ ಭಾಗವಾಗಿ ಈ ಬೃಹತ್ ಹೂಡಿಕೆಗಳ ಘೋಷಣೆಉಶಗಿದೆ. ಇದರಿಂದ ಭಾರತಕ್ಕೆ ಹಚ್ಚಿನ ಅನುಕೂಲವಿದೆ.
ಕಳೆದ ವಾರ, ಭಾರತ ಸರ್ಕಾರವು ನೋಯ್ಡಾ ವಿಮಾನ ನಿಲ್ದಾಣದ ಬಳಿ ಸೆಮಿಕಂಡಕ್ಟರ್ ಸ್ಥಾವರವನ್ನು ನಿರ್ಮಿಸಲು ಫಾಕ್ಸ್‌ಕಾನ್-ಎಚ್‌ಸಿಎಲ್ ಗ್ರೂಪ್ ಜಂಟಿ ಉದ್ಯಮಕ್ಕೆ ಅನುಮತಿ ನೀಡಿತು. ರೂ. 3,700 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಈ ಕಾರ್ಖಾನೆ, ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಆಟೋಮೊಬೈಲ್‌ಗಳು, ಪಿಸಿಗಳು ಮುಂತಾದ ಸಾಧನಗಳಿಗೆ ಡಿಸ್ಪ್ಲೇ ಡ್ರೈವರ್ ಚಿಪ್‌ಗಳ ತಯಾರಿಕೆಗೆ ಪ್ರಮುಖ ಕೇಂದ್ರವಾಗಲಿದೆ.
ಈ ಕಾರ್ಖಾನೆಯು ತಿಂಗಳಿಗೆ 20,000 ವೇಫರ್‌ಗಳನ್ನು ಉತ್ಪಾದಿಸಬಹುದು. ಇದು ತಿಂಗಳಿಗೆ 36 ಮಿಲಿಯನ್ ಯೂನಿಟ್‌ಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಇದು ಭಾರತದಲ್ಲಿ ಸೆಮಿಕಂಡಕ್ಟರ್ ವಲಯದಲ್ಲಿ ಆಗುತ್ತಿರುವ ತ್ವರಿತ ಪ್ರಗತಿಗೆ ಸಾಕ್ಷಿಯಾಗಿದೆ. ಪ್ರಸ್ತುತ, ಭಾರತದಾದ್ಯಂತ 5 ಸೆಮಿಕಂಡಕ್ಟರ್ ಘಟಕಗಳು ಪೂರ್ಣಗೊಳ್ಳುವ ಅಂತಿಮ ಹಂತದಲ್ಲಿವೆ. ಫಾಕ್ಸ್‌ಕಾನ್ ಈ 6ನೇ ಘಟಕವನ್ನು ಪ್ರಾರಂಭಿಸುವುದರೊಂದಿಗೆ, ಭಾರತವು ತಾಂತ್ರಿಕ ಸ್ವಾವಲಂಬನೆಯತ್ತ ಮತ್ತಷ್ಟು ಹೆಜ್ಜೆ ಇಡಲಿದೆ ಎಂದು ತೋರುತ್ತದೆ.
ಅಪ್ಲೈಡ್ ಮೆಟೀರಿಯಲ್ಸ್ ಮತ್ತು ಲ್ಯಾಮ್ ರಿಸರ್ಚ್‌ನಂತಹ ಅಂತರರಾಷ್ಟ್ರೀಯ ಉತ್ಪಾದನಾ ದೈತ್ಯರು ಈಗಾಗಲೇ ಭಾರತದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಇದರ ಜೊತೆಗೆ, ಮೆರ್ಕ್, ಲಿಂಡೆ, ಏರ್ ಲಿಕ್ವಿಡ್ ಮತ್ತು ಐನಾಕ್ಸ್‌ನಂತಹ ರಾಸಾಯನಿಕ ಮತ್ತು ಅನಿಲ ಪೂರೈಕೆದಾರರು ಸಹ ಭಾರತದಲ್ಲಿ ತಮ್ಮ ಸಾಮರ್ಥ್ಯಗಳನ್ನು ವಿಸ್ತರಿಸುತ್ತಿದ್ದಾರೆ. ಶಿಕ್ಷಣ ಮತ್ತು ನವೋದ್ಯಮ ವಲಯಗಳಲ್ಲಿಯೂ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ.
ದೇಶಾದ್ಯಂತ 270 ಶಿಕ್ಷಣ ಸಂಸ್ಥೆಗಳು ಮತ್ತು 70 ನವೋದ್ಯಮಗಳು ಹೊಸ ವಿನ್ಯಾಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿವೆ ಮತ್ತು ಅವುಗಳಲ್ಲಿ 20 ಸಂಸ್ಥೆಗಳು ಈಗಾಗಲೇ ವಿದ್ಯಾರ್ಥಿಗಳು ರಚಿಸಿದ ಚಿಪ್ ವಿನ್ಯಾಸಗಳನ್ನು ಟೇಪ್ ಮಾಡಿವೆ ಎಂದು ಕೇಂದ್ರ ಸರ್ಕಾರವು ಕೂಡ ಹೇಳಿದೆ.

ವಿಶೇಷವೆಂದರೆ, ಈ ಎಲ್ಲಾ ಹೂಡಿಕೆಗಳು ಪ್ರಧಾನಿ ನರೇಂದ್ರ ಮೋದಿಯವರು ಪ್ರಾರಂಭಿಸಿದ ಸ್ವಾವಲಂಬಿ ಭಾರತದ ಗುರಿಗೆ ಸಾಥ್ ನೀಡುತ್ತವೆ. ಭಾರತವು ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ರಕ್ಷಣಾ ವ್ಯವಸ್ಥೆಗಳು, ವೈದ್ಯಕೀಯ ಸಾಧನಗಳು ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್‌ನಂತಹ ಉತ್ಪಾದನಾ ವಲಯಗಳಲ್ಲಿ ಬೆಳೆಯುತ್ತಲೇ ಇದೆ. ಇದರಿಂದ ಫಾಕ್ಸ್‌ಕಾನ್‌ನಂತಹ ಟೆಕ್ ದೈತ್ಯಗಳ ಹೂಡಿಕೆಗಳು ಭಾರತೀಯ ತಂತ್ರಜ್ಞಾನದ ಭವಿಷ್ಯವನ್ನು ರೂಪಿಸುತ್ತಿವೆ.


Click it and Unblock the Notifications