ಟೋಕಿಯೊ, ಮೇ 11: ಜಪಾನಿನಲ್ಲಿ ಈಗ ಫ್ರೆಂಡ್‌ಶಿಪ್ ಮ್ಯಾರೇಜ್ ಟ್ರೆಂಡಿಂಗ್ ಆಗುತ್ತಿದೆ. ಫ್ರೆಂಡ್‌ಶಿಪ್ ಮ್ಯಾರೇಜ್ ಎಂದರೆ ಪ್ರೀತಿ, ಕಾಮ ಇಲ್ಲದೆ ಹೊಸ ರೀತಿಯ ವೈವಾಹಿಕ ಸಂಬಂಧ ಹೊಂದುವುದು.
ಜಪಾನ್‌ನಲ್ಲಿ ವಿವಾಹವಾಗುವವರ ಸಂಖ್ಯೆ ಕಡಿಮೆಯಾಗುತ್ತಿರುವ ನಡುವೆ, ಕ್ಷೀಣಿಸುತ್ತಿರುವ ಜನಸಂಖ್ಯೆಯ ಸವಾಲಿನ ನಡುವೆ ಹೊಸ ಸಂಬಂಧದ ಪ್ರವೃತ್ತಿ 'ಸ್ನೇಹ ವಿವಾಹ' ಟ್ರೆಂಡ್ ಆಗುತ್ತಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (ಎಸ್‌ಸಿಎಂಪಿ) ವರದಿಯ ಪ್ರಕಾರ, ಜಪಾನ್‌ನಲ್ಲಿ ಯುವಜನರು ಪ್ರೀತಿ ಅಥವಾ ಲೈಂಗಿಕತೆಯಿಂದ ಮುಕ್ತವಾದ ಹೊಸ ರೀತಿಯ ವೈವಾಹಿಕ ಸಂಬಂಧವನ್ನು ಆರಿಸಿಕೊಳ್ಳುತ್ತಿದ್ದಾರೆ. ವರದಿಯು ಈ ಪ್ರವೃತ್ತಿಯನ್ನು 'ಸ್ನೇಹ ವಿವಾಹ' ಎಂದು ಹೆಸರಿಸಿದೆ.

ವರದಿಯ ಪ್ರಕಾರ, ಈ ಸಂಬಂಧದ ಪ್ರವೃತ್ತಿಯು ಹಂಚಿಕೆಯ ಮೌಲ್ಯಗಳು ಮತ್ತು ಆಸಕ್ತಿಗಳನ್ನು ಆಧರಿಸಿದ್ದು, ಜನರು ಇದನ್ನು ಸಾಂಪ್ರದಾಯಿಕ ವಿವಾಹಗಳಿಗೆ ಪರ್ಯಾಯವಾಗಿ ನೋಡುತ್ತಿದ್ದಾರೆ ಎಂದಿದೆ.
ಸ್ನೇಹ ಮದುವೆ ಎಂದರೇನು?
ವರದಿಯು ಸ್ನೇಹ ವಿವಾಹವನ್ನು "ಆಸಕ್ತಿಗಳು ಮತ್ತು ಮೌಲ್ಯಗಳ ಆಧಾರದ ಮೇಲೆ ಸಹಬಾಳ್ವೆಯ ಸಂಬಂಧ" ಎಂದು ವ್ಯಾಖ್ಯಾನಿಸಿದೆ. ಈ ಪ್ರವೃತ್ತಿಯ ಪ್ರಕಾರ, ಜನರು ತಾವು ಪ್ರೀತಿಸುವ ಅಥವಾ ಪ್ರಣಯ ಬಂಧವನ್ನು ಹಂಚಿಕೊಳ್ಳುವ ವ್ಯಕ್ತಿಯನ್ನು ಮದುವೆಯಾಗುವುದಿಲ್ಲ. ಬದಲಾಗಿ ಪಾಲುದಾರರು ಕಾನೂನುಬದ್ಧ ವಿವಾಹವನ್ನು ಪ್ರವೇಶಿಸಬಹುದು ಮತ್ತು ಗಂಡ ಮತ್ತು ಹೆಂಡತಿಯಾಗಿ ಒಟ್ಟಿಗೆ ವಾಸಿಸಬಹುದು. ಸ್ನೇಹ ವಿವಾಹವಾಗುವ ಮಮದಿ ಪರಸ್ಪರ ಒಪ್ಪಂದದ ಆಧಾರದ ಮೇಲೆ ಇತರ ಜನರೊಂದಿಗೆ ಸಂಬಂಧವನ್ನು ಹೊಂದಲು ಸಹ ಅನುಮತಿಸಲಾಗಿದೆ. ಇದಲ್ಲದೆ, ಅವರು ಕೃತಕ ಗರ್ಭಧಾರಣೆಯ ಮೂಲಕ ಮಕ್ಕಳನ್ನು ಹೊಂದಲು ನಿರ್ಧರಿಸಬಹುದು.
"ಸ್ನೇಹ ವಿವಾಹವು ಒಂದೇ ರೀತಿಯ ಆಸಕ್ತಿಗಳನ್ನು ಹೊಂದಿರುವ ರೂಮ್‌ಮೇಟ್ ಅನ್ನು ಹುಡುಕುವಂತಿದೆ" ಎಂದು ಮೂರು ವರ್ಷಗಳ ಕಾಲ ಸ್ನೇಹ ವಿವಾಹದಲ್ಲಿದ್ದ ವ್ಯಕ್ತಿಯನ್ನುಉಲ್ಲೇಖಿಸಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಇದೇ ಸಂಬಂಧದಲ್ಲಿರುವ ಮತ್ತೊಬ್ಬರು ತಮ್ಮ ಸ್ನೇಹ ವಿವಾಹದ ಅನುಭವವನ್ನು ಹಂಚಿಕೊಂಡಿದ್ದು, 'ಯಾರೊಬ್ಬರ ಗೆಳತಿಯಾಗಿ ಹೊಂದಿಕೊಳ್ಳದಿದ್ದರೆ ಅವಳು ಉತ್ತಮ ಸ್ನೇಹಿತನಾಗಬಹುದು. ಅದೇ ರೀತಿಯ ಆಸಕ್ತಿ ಮತ್ತು ಅಭಿರುಚಿಯುಳ್ಳ ವ್ಯಕ್ತಿಯೊಂದಿಗೆ ಇರಲು ಬಯಸುವುದಾಗಿಯೂ ಹೇಳಿದ್ದಾರೆ.
ಅಲೈಂಗಿಕ ವ್ಯಕ್ತಿಗಳು ಮತ್ತು ಸಲಿಂಗಕಾಮಿಗಳಲ್ಲಿ ಈ ಪ್ರವೃತ್ತಿಯು ಹೆಚ್ಚು ಜನಪ್ರಿಯವಾಗಿದೆ ಎಂದು ಎಸ್‌ಸಿಎಂಪಿ ವರದಿಯು ತಿಳಿಸಿದೆ. ಜಪಾನ್‌ನಲ್ಲಿ ಸಲಿಂಗ ವಿವಾಹವು ಕಾನೂನುಬದ್ಧವಾಗಿಲ್ಲದ ಕಾರಣ ದೇಶದಲ್ಲಿ ಈ ಪರ್ಯಾಯ ಮಾರ್ಗವನ್ನು ತೆಗೆದುಕೊಳ್ಳಬಹುದಾದ ಸಲಿಂಗಕಾಮಿಗಳಿಗೆ ಸ್ನೇಹ ವಿವಾಹದ ಪ್ರಸ್ತುತತೆಯನ್ನು ವರದಿಯು ಹೇಳಿದೆ.


Click it and Unblock the Notifications