ಕಡಿಮೆ ವೆಚ್ಚ, ಆರಾಮದಾಯಕ ಪ್ರಯಾಣಕ್ಕಾಗಿ ಹೆಚ್ಚಿನವರು ರೈಲು ಪ್ರಯಾಣಕ್ಕೆ (Train Travel) ಆದ್ಯತೆ ನೀಡುತ್ತಾರೆ. ಅಲ್ಲದೇ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣ ಮಾಡಬೇಕೆಂದರೆ ಹೆಚ್ಚಿನವರು ರೈಲು ಬುಕ್ ಮಾಡುತ್ತಾರೆ. ಇದೀಗ ಭಾರತೀಯ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ಇದೆ ನೋಡಿ.

ಭಾರತೀಯ ರೈಲ್ವೆ (Indian Railways), ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಅಂದರೆ ಇನ್ಮೇಲೆ ರೈಲು ಹೊರಡುವ ಕೇವಲ 30 ನಿಮಿಷಗಳ ಮೊದಲು ಟಿಕೆಟ್ ಕಾಯ್ದಿರಿಸುವ ಅವಕಾಶವನ್ನು ನೀಡಿದೆ. ಹೆಚ್ಚುವರಿ ಶುಲ್ಕವಿಲ್ಲದೆಯೇ ಈ ಸೌಲಭ್ಯ, ತುರ್ತು ಪ್ರಯಾಣ ಮಾಡುವವರಿಗೆ ಸಹಕಾರಿಯಾಗಲಿದೆ.
ಪ್ರಯಾಣಿಕರ ಅನುಕೂಲಕ್ಕೆ ಹೊಸ ಸೇವೆ
ಇನ್ನೇನು ಹೊಸ ವರ್ಷ ಬರಲಿದೆ. ಈ ಸಂದರ್ಭದಲ್ಲಿ ಹೆಚ್ಚಿನವರು ಊರಿಗೆ ಹೋಗುವ ಪ್ಲಾನ್ ಮಾಡಿದರೆ, ಇನ್ನೂ ಕೆಲವರು ಕೊನೆಯ ಕ್ಷಣದಲ್ಲಿ ಊರಿಗೆ ತೆರಳುತ್ತಾರೆ. ಆದ್ರೆ ಈ ಸಂದರ್ಭದಲ್ಲಿ ಕೆಲವರು ರೈಲಿನಲ್ಲೇ ಟ್ರಾವೆಲ್ ಮಾಡಬೇಕಾಗುತ್ತದೆ. ಆದರೆ ಅಗತ್ಯವಿದ್ದಾಗ ಕೆಲವೊಮ್ಮೆ ರೈಲು ಟಿಕೆಟ್‌ಗಳು ಸಿಗುವ ಸಾಧ್ಯತೆ ಕಡಿಮೆ ಇರುತ್ತದೆ. ಆದ್ರೆ ಈ ಸಮಸ್ಯೆ ನಿವಾರಣೆಗೆ, ಭಾರತೀಯ ರೈಲ್ವೆ "Current Booking" ಅಥವಾ "Current Availability" ಸೌಲಭ್ಯವನ್ನು ಪರಿಚಯಿಸಿದೆ. ಈ ಮೂಲಕ ರೈಲು ತಪ್ಪಿಸಿಕೊಂಡವರು, ಪ್ರೀ ಬುಕ್ ಮಾಡದವರು ಅಥವಾ ಕೊನೆಯ ಕ್ಷಣದಲ್ಲಿ ಟ್ರಾವೆಲ್ ಪ್ಲಾನ್ ಮಾಡುವವರಿಗೆ ಸಹಕಾರಿಯಾಗಲಿದೆ.
ಕರೆಂಟ್ ರೈಲು ಬುಕಿಂಗ್, ರೈಲು ಹೊರಡುವ ನಾಲ್ಕು ಗಂಟೆ ಮೊದಲು ತೆರೆದು, ಫೈನಲ್ ರಿಸರ್ವೇಶನ್ ಲೀಸ್ಟ್ (ಹೊರಡುವ 30 ನಿಮಿಷ ಮೊದಲು ಸಿದ್ಧ) ತಯಾರಾಗುವವರೆಗೂ ಲಭ್ಯವಿರುತ್ತದೆ. ಆಸನಗಳ ಲಭ್ಯತೆಯ ಮೇರೆಗೆ, ಪ್ರಯಾಣಕ್ಕೆ ಅರ್ಧ ಗಂಟೆ ಮುಂಚೆಯೂ ಟಿಕೆಟ್ ಕಾಯ್ದಿರಿಸುವ ಅವಕಾಶವನ್ನು ಇದು ನೀಡುತ್ತದೆ.
ಈ ಕೋಟಾದ ಟಿಕೆಟ್‌ಗಳನ್ನು ಎರಡು ವಿಧದಲ್ಲಿ ಕಾಯ್ದಿರಿಸಬಹುದು:
ಐಆರ್‌ಸಿಟಿಸಿ (IRCTC) ವೆಬ್‌ಸೈಟ್/ಮೊಬೈಲ್ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ಅಥವಾ ರೈಲು ನಿಲ್ದಾಣಗಳ ಪ್ರಸ್ತುತ ರಿಸರ್ವೇಶನ್ ಕೌಂಟರ್‌ಗಳಲ್ಲಿ ಟಿಕೆಟ್ ಕಾಯ್ದಿರಿಸಬಹುದು.
ಇನ್ನು ಸೀಟುಗಳು ಲಭ್ಯವಿದ್ಯಾ ಎಂದು ಪರಿಶೀಲಿಸುವಾಗ 'Current Available' ಎಂದು ಕಂಡರೆ, ಟಿಕೆಟ್ ಬುಕ್ ಮಾಡಬಹುದು. ತತ್ಕಾಲ್ ಟಿಕೆಟ್‌ಗಳಂತೆ ಹೆಚ್ಚುವರಿ ಶುಲ್ಕವಿಲ್ಲ, ಸಾಮಾನ್ಯ ದರದಲ್ಲಿ ಇಲ್ಲಿ ಟಿಕೆಟ್ ಬುಕ್ ಮಾಡುವ ಅವಕಾಶವಿದೆ. ಈ ಸೌಲಭ್ಯ ಸ್ಲೀಪರ್ ಮತ್ತು ಎಸಿ ಸೇರಿದಂತೆ ಎಲ್ಲಾ ವರ್ಗಗಳಲ್ಲೂ ಲಭ್ಯವಿದೆ.


Click it and Unblock the Notifications