ಭಾರತದಲ್ಲಿ ಅದೆಷ್ಟೋ ಉದ್ಯಮಿಗಳು ಇದ್ದಾರೆ. ಈಗಲೂ ಈ ಉದ್ಯಮದಲ್ಲಿ ಬೆಳೆಯಬೇಕು ಎನ್ನುವ ಕನಸು ಹೊತ್ತು ಮುಂದೆ ನಡೆಯುತ್ತಿದ್ದಾರೆ. ಈ ಉದ್ಯಮಿಗಳಿಗೆ ಒಬ್ಬ ರೋಲ್ ಮಾಡೆಲ್ ಇರುತ್ತಾರಲ್ಲಾ ಅವರೇ ಖ್ಯಾತ ಉದ್ಯಮಿ ರತನ್ ಟಾಟಾ.
ರತನ್ ಟಾಟಾ ಬುಧವಾರ ರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ತಮ್ಮ 86 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಬಹುದಿನಗಳಿಂದ ಇವರು ಅನಾರೋಗ್ಯದಿಂದ ಬಳಲುತ್ತಿದ್ದರು. ದೇಶದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ. ಭಾರತದ ಪ್ರತಿಯೊಬ್ಬರ ಮನೆಯಲ್ಲೂ ಇವರು ಉತ್ಪಾದಿಸಿದ ಉತ್ಪಗಳು ಇವೆ. ಇಂತಹ ದೊಡ್ಡ ಸಾಮ್ರಾಜ್ಯ ಬುಧವಾರ ಮೌನಕ್ಕೆ ಶರಣಾಗಿದೆ.

ಟಾಟಾ ಗ್ರೂಪ್ ರಾತೋ ರಾತ್ರಿ ದೇಶದಲ್ಲಿ ಖ್ಯಾತ ಉದ್ಯಮಿಯ ಸ್ಥಾನವನ್ನು ಪಡೆದಿಲ್ಲ. ಇದಕ್ಕಾಗಿ ಹಗಲಿರುಳು ರತನ್ ಟಾಟಾ ಶ್ರಮಿಸಿದ್ದಾರೆ. ಮನೆ ಬಳಕೆ ವಸ್ತುಗಳಿಂದ ಹಿಡಿದು, ಹಡಗು ಹಾಗೂ ವಿಮಾನ ತಯಾರಿಕೆವರೆಗೂ ಇವರ ಉತ್ಪನ್ನಗಳು ಇವೆ. ಇವರ ಬೆವರ ಹನಿಯ ಫಲವಾಗಿಯೇ ಇಂದು ಟಾಟಾ ಪ್ರತಿ ಮನೆಯ ಖಾಯಂ ಸದಸ್ಯ. ಭಾರತದ ಪ್ರತಿ ವರ್ಗದ ಜನರೂ ಸಹ ಇವರ ಉತ್ಪನ್ನಗಳನ್ನು ಬಳಿಸದವರೇ.
ರತನ್ ಟಾಟಾ ಜೀವನ
ಈ ವರ್ಷದ ಮಾರ್ಚ್ ಕೊನೆಯಲ್ಲಿ ಟಾಟಾ ಗ್ರೂಪ್‌ನ ಒಟ್ಟು ಮಾರುಕಟ್ಟೆ ಬಂಡವಾಳ 365 ಬಿಲಿಯನ್ ಯುಎಸ್ ಡಾಲರ್ ಆಗಿತ್ತು. ಈ ಸಾಮ್ರಾಜ್ಯದ ಸೂತ್ರಧಾರ ರತನ್ ಟಾಟಾ ಈ ಸಂಸ್ಥೆಯನ್ನು ಇಷ್ಟು ಎತ್ತರಕ್ಕೆ ಕೊಂಡಯ್ಯುವಲ್ಲಿ ಉದ್ಯಮಿಯಂತೆ ಕೆಲಸ ಮಾಡಲಿಲ್ಲ. ಬದಲಿಗೆ ಕಾರ್ಮಿಕರಂತೆ ದುಡಿದಿದ್ದಾರೆ. ಡಿಸೆಂಬರ್ 28, 1937 ರಂದು ಮುಂಬೈನಲ್ಲಿ ಜನಿಸಿದ ರತನ್ ಟಾಟಾ ಅವರ ಅಜ್ಜಿಯ ಕಡೆ ಬೆಳೆದರು.

ಅಮೆರಿಕದಲ್ಲಿ ಕೆಲಸ ಮಾಡುವ ಆಸೆ
ರತನ್ ಟಾಟಾ ಆರಂಭಿಕ ಶಿಕ್ಷಣವನ್ನು ಭಾರತದ ಮುಂಬೈ ಹಾಗೂ ಶಿಮ್ಲಾದಲ್ಲಿ ಪಡೆದು ನಂತರ, ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ನಿಂದ ಉನ್ನತ ಶಿಕ್ಷಣ ಹಾಗೂ ಕಾರ್ನೆಲ್ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ ಪದವಿಯನ್ನು ಪಡೆದರು. ರನತ್ ಟಾಟಾ ತಮ್ಮ ವ್ಯಾಸಂಗದ ಬಳಿಕ ಅಮೆರಿಕದಲ್ಲಿ ಉದ್ಯೋಗ ಮಾಡುವ ಕನಸು ಹೊಂದಿದ್ದರು. ಆದರೆ ತನ್ನ ಪ್ರಿತಿಯ ಅಜ್ಜಿಯ ಆರೋಗ್ಯದಲ್ಲಿ ಏರು ಪೇರು ಆಗಿದ್ದರಿಂದ ಮತ್ತೆ ಅವರು ಭಾರತಕ್ಕೆ ಬರಬೇಕಾಯಿತು.
ಟಾಟಾ ಗ್ರೂಪ್‌ನಲ್ಲಿ ಉದ್ಯೋಗ
ಭಾರತಕ್ಕೆ ಬಂದ ಮೇಲೂ ಅವರು ತಮ್ಮ ಕುಟಂಬ ನಡೆಸುತ್ತಿದ್ದ ಕಂಪನಿಯ ಕಡೆ ತಲೆ ಹಾಕಲಿಲ್ಲ. ಬದಲಿಗೆ ಐಬಿಎಂ ಕಂಪನಿಯಲ್ಲಿ ಕೆಲಸ ಮಾಡಲು ಆರಂಭಿಸಿದರು. ಈ ಸುದ್ದಿ, ಜೆಆರ್‌ಡಿ ಟಾಟಾ ಅವರಿಗೆ ತಿಳಿಯಿತು. ಇದರಿಂದ ಅವರಿಗೆ ಸಿಟ್ಟು ಬಂದಿತು. ಟಾಟಾ ಗ್ರೂಪ್ ಅಧ್ಯಕ್ಷ ಜೆಆರ್‌ಡಿ ತಮ್ಮ ಸಿವಿಯನ್ನು ಕಳುಹಿಸುವಂತೆ ತಿಳಿಸಿದರು. ಬಳಿಕ ಟಾಟಾ ಗ್ರೂಪ್‌ನಲ್ಲಿ ಸಾಮಾನ್ಯ ಉದ್ಯೋಗಿಯಂತೆ ದುಡಿದರು.
ಉದ್ಯೋಗಿಗಳೊಂದಿಗೆ ಒಬ್ಬ ಉದ್ಯೋಗಿಯಾಗಿ ಕೆಲಸ ಮಾಡಿದಾಗ ರತನ್ ಟಾಟಾಗೆ ಅಲ್ಲಿನ ಸೂಕ್ಷಮತೆ ಅರ್ಥವಾಯಿತು. ಟಾಟಾ ಗ್ರೂಪ್‌ನಲ್ಲಿ ಅವರು ಚಿಕ್ಕ ಕೆಲಸವನ್ನು ಮಾಡುತ್ತಿದ್ದರು. ಇದರಿಂದ ಕೆಳ ಮಟ್ಟದ ಉದ್ಯೋಗಿಗಳ ಸಮಸ್ಯೆ ಸಹ ಇವರಿಗೆ ಅರಿವಿತ್ತು. ಸಮಯ ಕಳೆದಂತೆ ಇವರು ಟಾಟಾ ಸಾಮ್ರಾಜ್ಯದ ಅವಿಭಾಜ್ಯ ಅಂಗವಾದರು. ಅಲ್ಲದೆ 1991ರಲ್ಲಿ ಟಾಟಾ ಗ್ರೂಪ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು.
ವಿಶ್ವದ ಖ್ಯಾತ ಉದ್ಯಮಿ
ಒಮ್ಮೆ ಅಧ್ಯಕ್ಷರಾದ ಮೇಲೆ ರತನ್ ಹಿಂತಿರುಗಿ ನೋಡಿದ್ದೇ ಇಲ್ಲ. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ಹಂತ ಹಂತವಾಗಿ ಕಂಪನಿಯನ್ನು ಬೆಳೆಸಿದರು. 21 ವರ್ಷಗಳ ಕಾಲ ಕಂಪನಿಯನ್ನು ಮುನ್ನಡೆಸಿದ ಟಾಟಾ ದೇಶಕ್ಕೆ ಕೀರ್ತಿ ತರುವ ಕೆಲಸವನ್ನು ಮಾಡಿದರು. ಅಲ್ಲದೆ ಹಲವು ದೊಡ್ಡ ಕಂಪನಿಗಳನ್ನು ಕೊಂಡರು. ಇವರ ಅಧಿಕಾರ ಅವಧಿಯಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್‌ನಂತಹ ದೊಡ್ಡ ಬ್ರ್ಯಾಂಡ್‌ಗಳನ್ನು ತಮ್ಮ ಹಿಡಿತಕ್ಕೆ ಪಡೆದರು.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications